Get Updates
Get notified of breaking news, exclusive insights, and must-see stories!

ಉಡುಪಿ: ತೃತೀಯಲಿಂಗಿಗಳ ಸ್ವಾವಲಂಭಿ ಬದುಕಿಗೆ 'ಆಸರೆ'

ಉಡುಪಿ, ನವೆಂಬರ್ 16: ತೃತೀಯಲಿಂಗಿಗಳು ಪ್ರಸ್ತುತ ಕಾಲಘಟ್ಟದಲ್ಲಿ ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ಸಾಮರ್ಥ್ಯ ಮೆರೆಯುತ್ತಿದ್ದಾರೆ. ಉಡುಪಿಯಲ್ಲಿ ತೃತೀಯಲಿಂಗಿಗಳು ಆಹಾರ ಉದ್ಯಮಕ್ಕೂ ಕಾಲಿರಿಸಿದ್ದಾರೆ. ಅನ್ನಬ್ರಹ್ಮ ತೃತೀಯಲಿಂಗಿಗಳ ಕೈ ಹಿಡಿದಿದ್ದಾನೆ. ಆಹಾರೋದ್ಯಮದಲ್ಲಿ ಮುಂಚೂಣಿಯಲ್ಲಿರುವ ಉಡುಪಿಯಲ್ಲಿ ತೃತೀಯಲಿಂಗಿಗಳ ಕ್ಯಾಂಟೀನ್ ಈಗ ಜನಮೆಚ್ಚುಗೆಗೆ ಪಾತ್ರವಾಗಿದೆ.

ಉಪೇಕ್ಷೆಗೆ ಒಳಗಾದ ತೃತೀಯ ಲಿಂಗಿಗಳು ಉಡುಪಿಯಲ್ಲಿ ಆಸರೆ ಹೆಸರಿ ಕ್ಯಾಂಟಿನ್ ಆರಂಭಿಸಿ ಸ್ವಾವಲಂಭಿ ಬದುಕುಕಟ್ಟಿ ಕೊಂಡಿದ್ದಾರೆ. ತೃತೀಯ ಲಿಂಗಿಗಳು ಆಹಾರೋದ್ಯಮ ಆರಂಭಿಸಿದ ಪ್ರಯತ್ನ ರಾಜ್ಯದಲ್ಲೇ ಮೊದಲು.

Transgender opens fast food Canteen at Manipal

ತೃತೀಯ ಲಿಂಗಿಗಳೆಂದರೆ ಸಮಾಜದಲ್ಲಿ ಎಲ್ಲಾಕಡೆ ತಾತ್ಸಾರ ಭಾವ ದಿಂದ ನೋಡುತ್ತಾರೆ. ಅವರನ್ನು ಮನುಷ್ಯರಂತೆ ಕಾಣೊರೇ ವಿರಳ. ಹೀಗಾಗಿ ಅವರು ಹೊಟ್ಟೆ ಹೊರೆದುಕೊಳ್ಳುವುದಕ್ಕೂ ಪಡುವ ಪಾಡು ಅಷ್ಟಿಷ್ಟಲ್ಲ. ಕೆಲವೊಮ್ಮೆ ಭಿಕ್ಷೆ ಬೇಡುತ್ತಾ, ಸಮಾಜದ ಮುಂದೆ ತಿರಸ್ಕೃತರಾಗಿ ಬದುಕಿದರೆ, ಇನ್ನು ಕೆಲವರು ಮೈ ಮಾರಿಕೊಂಡು ಜೀವನ ನಡೆಸುತ್ತಾರೆ. ಇಂಥವರಗೊಂದು ಸ್ವಾವಲಂಬಿ ಬದುಕು ಕೊಟ್ಟರೆ ಹೇಗೆ? ಎಂದು ಯೋಚಿಸಿದವರು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್.ಇದೀಗ ಉಡುಪಿಯ ಮಣಿಪಾಲದಲ್ಲಿ ತೃತೀಯ ಲಿಂಗಿಗಳಿಗೆಂದೇ ಕ್ಯಾಂಟೀನ್ ಒಂದನ್ನು ನಡೆಸಲು ಅನುಮತಿ ನೀಡಿದ್ದಾರೆ.

Transgender opens fast food Canteen at Manipal

ನಗರದ ಟೈಗರ್ ಸರ್ಕಲ್ ಸಮೀಪ ಈ ಕ್ಯಾಂಟೀನನ್ನು ತೃತೀಯ ಲಿಂಗಿಗಳಾದ ಲಾವಣ್ಯ, ದೀಪಿಕಾ ಮತ್ತು ಸಂಜೀವ್ ಎಂಬವರು ನಡೆಸುತ್ತಿದ್ದಾರೆ. ಕ್ಯಾಂಟೀನ್ ನಲ್ಲಿ ಚಿಕನ್ ಮತ್ತು ಮೊಟ್ಟೆಯಿಂದ ಮಾಡಿದ ತಿನಿಸುಗಳಿವೆ. ಕಳೆದ ಒಂದುತಿಂಗಳಿನಿಂದ ಈ ಕ್ಯಾಂಟೀನ್ ಕಾರ್ಯನಿರ್ವಹಿಸುತ್ತಿದ್ದು ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ.

ಈಗ ಮೂವರಿಗೆ ಸ್ವಾವಲಂಭಿ ಜೀವನ ನಡೆಸಲು ಪ್ರೋತ್ಸಾಹ ನೀಡಿ ,ಮುಂದಿನ ದಿನಗಳಲ್ಲಿ ಇನ್ನಷ್ಟು ಜನರಿಗೆ ಇಂತಹದ್ದೇ ಪ್ರೋತ್ಸಾಹ ನೀಡುವ ಯೋಚನೆ ಇದೆ.ಈಗ ತೃತೀಯ ಲಿಂಗಿಗಳು ನಡೆಸುವ ಕ್ಯಾಂಟೀನ್ ನಲ್ಲಿ ರುಚಿಕರ ಚಿಕನ್ ಕಬಾಬ್ ,ಚಿಕನ್ ಬಿರಿಯಾನಿ ,ಎಗ್ ಬಿರಿಯಾನಿ ಸಹಿತ ಹಲವು ಬಗೆಯ ತಿನಿಸು ಗಳನ್ನು ತಯಾರಿಸಿ ಗ್ರಾಹಕರಿಗೆ ನೀಡಲಾಗುತ್ತಿದೆ. ಈ ಆಸರೆ ಕ್ಯಾಂಟಿನ್ ರೇಟ್ ಕೂಡ ರೀಸನೇಬಲ್ . ಮಣಿಪಾಲ ಆಸುಪಾಸಿನ ಆಟೋ ಚಾಲಕರು ,ಕಾರ್ಮಿಕರು ಮತ್ತು ಮಧ್ಯಮವರ್ಗದ ಮಂದಿ ಇಲ್ಲಿಗೆ ಬಂದು ತಂಡಿ ತಿಂದು ಹೋಗುವ ಮೂಲಕ ಇವರಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ.

Transgender opens fast food Canteen at Manipal

ಮಣಿಪಾಲ ವೈದ್ಯಕೀಯ ಶಿಕ್ಷಣ ಕಾಶಿ ಎಂದೇ ಗುರುತಿಸಿ ಕೊಳ್ಳುತ್ತದೆ. ಈ ಭಾಗದಲ್ಲೇ ಇರುವ ಈ ಆಸರೆ ಕ್ಯಾಂಟೀನ್ ನಲ್ಲಿ ಗುಣಮಟ್ಟದ ಮತ್ತು ಶುಚಿರುಚಿಯಾದ ತಿಂಡಿತಿನಿಸುಗಳನ್ನು ಮಾಡಿದರೆ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳನ್ನೂ ಸೆಳೆಯಬಹುದು. ಒಟ್ಟಾರೆ ಉಡುಪಿ ಜಿಲ್ಲಾಡಳಿತ ಮತ್ತು ಸಾಮಾಜಿಕ ಕಾರ್ಯಕರ್ತರು ಪ್ರಾರಂಭದ ಒಂದು ಹೆಜ್ಜೆಯನ್ನು ಇಟ್ಟಿದ್ದಾರೆ. ಇದು ಸಣ್ಣ ಹೆಜ್ಜೆ ಎನಿಸಿದರೂ ಹಿಂದಿನ ಧ್ಯೇಯೋದ್ದೇಶ ಮಾತ್ರ ತುಂಬ ದೊಡ್ಡದು.ಇದು ಉಡುಪಿಯಲ್ಲ ಯಶಸ್ವಿಯಾಗಿ ,ರಾಜ್ಯದ ಇತರೆಡೆಗಳಿಗೂ ವಿಸ್ತರಿಸಲಿ ಎಂಬುದೇ ಎಲ್ಲರ ಹಾರೈಕೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+