ಮಂಗಳೂರಿನಲ್ಲಿ ಏಕಾಏಕಿ ಪ್ರಕ್ಷುಬ್ಧಗೊಂಡ ಕಡಲು: ತಿತ್ಲಿ ಪ್ರಭಾವ?
Recommended Video

ಮಂಗಳೂರು, ಅಕ್ಟೋಬರ್. 10: ಏಕಾಏಕಿ ಕಡಲು ಪ್ರಕ್ಷುಬ್ದಗೊಂಡು ಸಮುದ್ರದ ಅಲೆಗಳು ಜನವಸತಿ ಪ್ರದೇಶಕ್ಕೆ ನುಗ್ಗಿದ ಘಟನೆ ಮಂಗಳೂರಿನಲ್ಲಿ ಇಂದು ಬುಧವಾರ(ಅ.10) ನಡೆದಿದೆ. ನಗರ ಹೊರವಲಯದ ಸೋಮೇಶ್ವರ, ಉಳ್ಳಾಲ, ಉಚ್ಚಿಲ ಪ್ರದೇಶಗಳಲ್ಲಿ ಈ ಘಟನೆ ಸಂಭವಿಸಿದೆ.
ಸಮುದ್ರದ ನೀರು ತೀರದ ಜನವಸತಿ ಪ್ರದೇಶಕ್ಕೆ ನುಗ್ಗಿದ ಪರಿಣಾಮ ಜನರು ಭಯ ಬೀತರಾದರು. ಬಂಗಾಳ ಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದ ಪರಿಣಾಮ ಆಂಧ್ರ ಮತ್ತು ಒಡಿಶಾದಲ್ಲಿ ಕಾಣಿಸಿಕೊಂಡ ತಿತ್ಲಿ ಚಂಡಮಾರುತದ ಪ್ರಭಾವದಿಂದ ಹೀಗಾಗಿರಬಹುದು ಎಂದು ಹೇಳಲಾಗಿದೆ.
ತಿತ್ಲಿ ಚಂಡಮಾರುತದ ಪರಿಣಾಮ ಪಶ್ಚಿಮ ಕರಾವಳಿಯ ಮೇಲೂ ಆಗುವ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿರಲಿಲ್ಲ. ಇಂದು ಮಂಜಾನೆನಿಂದಲೇ ಮಂಗಳೂರು ಹೊರವಲಯದ ಪಣಂಬೂರು, ಉಳ್ಳಾಲ, ಸೋಮೇಶ್ವರ-ಉಚ್ಚಿಲದ ಹಲವು ಕಡೆ ಸಮುದ್ರದ ರೌದ್ರವತಾರ ತಾಳಿದ್ದು ಕಂಡುಬಂತು. ಮುಂದೆ ಓದಿ..

ಭಾರೀ ಗಾತ್ರದ ಅಲೆಗಳು
ಈ ಹಿಂದೆ ಎಂದೂ ಕೂಡ ಇಂತಹ ವಾತಾವರಣ ಕಡಲ ತೀರದಲ್ಲಿ ಕಂಡು ಬಂದಿಲ್ಲ ಎಂಬುದು ಸ್ಥಳೀಯರ ಅಭಿಪ್ರಾಯ. ಕರಾವಳಿಯಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದೆ. ಆದರೂ ಕೂಡ ಮುಂಜಾನೆ ಇಂದ ಸಮುದ್ರದಲ್ಲಿ ಭಾರೀ ಗಾತ್ರದ ಅಲೆಗಳು ತಡಿಗೆ ಅಪ್ಪಳಿಸಿವೆ.

ಮೀನುಗಾರರು ಸಮುದ್ರಕ್ಕೆ ತೆರಳದಂತೆ ಸೂಚನೆ
ಈ ನಡುವೆ ಕರಾವಳಿಯಲ್ಲಿ ಭಾರಿ ಮಳೆಯಾಗುವ ಸಂಭವವೂ ಇದೆ ಎನ್ನಲಾಗಿದೆ. ಅಕ್ಟೋಬರ್ 13ರವರೆಗೆ ಮೀನುಗಾರರು ಸಮುದ್ರಕ್ಕೆ ತೆರಳದಂತೆ ಸೂಚನೆ ನೀಡಲಾಗಿದೆ.

'ತಿತ್ಲಿ' ಎಂದು ಹೆಸರು
ಬಂಗಾಳ ಕೊಲ್ಲಿಯಲ್ಲಿ ತೀವ್ರ ವಾಯುಭಾರ ಕುಸಿತ ಉಂಟಾಗಿದ್ದು, ಆಂಧ್ರ ಪ್ರದೇಶ ಹಾಗೂ ಒಡಿಸ್ಸಾ ರಾಜ್ಯಗಳಿಗೆ ಭಾರಿ ಚಂಡಮಾರುತ ಅಪ್ಪಳಿಸುವ ಭೀತಿ ಎದುರಾಗಿದೆ. ಬಂಗಾಳಕೊಲ್ಲಿಯಲ್ಲಿ ಉಗಮವಾಗಿರುವ ಈ ಚಂಡಮಾರುತಕ್ಕೆ 'ತಿತ್ಲಿ' ಎಂದು ಹೆಸರು ನೀಡಲಾಗಿದೆ.

'ತಿತ್ಲಿ' ಎಂದು ಹೆಸರು
ಬಂಗಾಳ ಕೊಲ್ಲಿಯಲ್ಲಿ ತೀವ್ರ ವಾಯುಭಾರ ಕುಸಿತ ಉಂಟಾಗಿದ್ದು, ಆಂಧ್ರ ಪ್ರದೇಶ ಹಾಗೂ ಒಡಿಸ್ಸಾ ರಾಜ್ಯಗಳಿಗೆ ಭಾರಿ ಚಂಡಮಾರುತ ಅಪ್ಪಳಿಸುವ ಭೀತಿ ಎದುರಾಗಿದೆ. ಬಂಗಾಳಕೊಲ್ಲಿಯಲ್ಲಿ ಉಗಮವಾಗಿರುವ ಈ ಚಂಡಮಾರುತಕ್ಕೆ 'ತಿತ್ಲಿ' ಎಂದು ಹೆಸರು ನೀಡಲಾಗಿದೆ.












Click it and Unblock the Notifications