ರಮಾನಾಥ್ ರೈ ಅವರಿಗೆ ಟಿಪ್ಪು ರೋಲ್ ಮಾಡೆಲ್: ಹರಿಕೃಷ್ಣ ಬಂಟ್ವಾಳ ವಾಗ್ದಾಳಿ
ಮಂಗಳೂರು, ನವೆಂಬರ್ 15 : ಮಂಜಿ ಸಚಿವ ರಮಾನಾಥ್ ರೈ ಅವರಿಗೆ ಟಿಪ್ಪು ಈಗ ರೋಲ್ ಮಾಡೆಲ್ ಆಗಿದ್ದಾನೆ. ರಮಾನಾಥ ರೈ ಅವರು ಜಿಹಾದಿ ಸಂಸ್ಕೃತಿಯಲ್ಲಿದ್ದಾರೆ ಎಂದು ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ ವಾಗ್ದಾಳಿ ನಡೆಸಿದ್ದಾರೆ.
ಮಂಗಳೂರಿನಲ್ಲಿ ಮಾದ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದ ನಳಿನ್ ಕುಮಾರ್ ಕಟೀಲ್ ಇದ್ದು ಸತ್ತ ಹಾಗೆ, ಶವಸಂಸ್ಕಾರ ಮಾತ್ರ ಬಾಕಿ ಎಂದು ರಮಾನಾಥ್ ರೈ ಇತ್ತೀಚೆಗೆ ಹೇಳಿಕೆ ನೀಡಿದ್ದರು. ರೈ ಜಿಹಾದಿ ಸಂಸ್ಕೃತಿಯಲ್ಲಿದ್ದಾರೆ ಎಂಬುದಕ್ಕೆ ಅವರ ಹೇಳಿಕೆ ಗಳೇ ಅನುಮಾನ ಮೂಡಿಸಿತ್ತಿವೆ ಎಂದು ಅವರು ಕಿಡಿಕಾರಿದರು.
ರಮಾನಾಥ್ ರೈ ಅವರಿಗೆ ಟಿಪ್ಪು ರೋಲ್ ಮಾಡಲ್ ಆಗಿರುವ ಹಿನ್ನೆಲೆಯಲ್ಲಿ ಅವರ ಬಾಯಲ್ಲಿ ಅಂತಹ ಹೇಳಿಕೆಗಳು ಬರ್ತಿದೆ ಎಂದು ಅವರು ವ್ಯಂಗ್ಯವಾಡಿದರು. ಶವ ಸಂಸ್ಕಾರ ನೋಡುವ ಮನೋ ಸ್ಥಿತಿ ಆತಂಕಕಾರಿ. ರೈ ಅವರು ಹಿಂದೂ ಮತ್ತು ಮುಸ್ಲಿಂ ಯುವಕರ ಸಾಕಷ್ಟು ಶವ ಸಂಸ್ಕಾರ ನೋಡಿದ್ದಾರೆ. ಮತ್ತೆ ಶವ ಸಂಸ್ಕಾರ ನೋಡುವ ಆಸೆ ಇವರಿಗೆ ಯಾಕೆ ಗೊತ್ತಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಪ್ರಸ್ತುತ ಪರಿಸ್ಥಿಯಲ್ಲಿ ರಮಾನಾಥ ರೈ ಕಾಂಗ್ರೆಸ್ ನಲ್ಲಿ ಸಕ್ಕರೆ ಇಲ್ಲದ ಚಾ ದಂತಾಗಿದ್ದಾರೆ. ಕಾಂಗ್ರೆಸ್ ಸಚಿವರು, ಶಾಸಕರು ಸಾವಿನಲ್ಲಿ ಸಂಭ್ರಮಿಸುವ ಕಾಲಘಟ್ಟದಲ್ಲಿದ್ದಾರೆ. ಅಧಿಕಾರ ಇಲ್ಲದಿದ್ದರೂ ರೈ ಅವರು ಸರಕಾರಿ ಅಧಿಕಾರಿಗಳನ್ನು ಹಿಡಿದು ಧಿಮಾಕು ತೋರಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ರೈ ಅವರ ಜಿಹಾದಿ ಮನೋಸ್ಥಿತಿ ನೋಡಿ ಅವರನ್ನು ಜನತೆ ಮನೆಗೆ ಕಳಿಸಿದ್ದಾರೆ. ಇದು ರಮಾನಾಥ ರೈ ಅವರ ರಾಜಕೀಯದ ಕೊನೆಯ ಕಾಲಘಟ್ಟ. ರಮಾನಾಥ ರೈ ದೊಡ್ಡ ದಡ್ಡ ಎಂದು ಅವರು ಕುಟುಕಿದರು. ವಿಜಯಾ ಬ್ಯಾಂಕ್ ವಿಲೀನಕ್ಕೆ ಸಹಿ ಹಾಕಿದ್ದು ಮನಮೋಹನ್ ಸಿಂಗ್. ನಿಮಗೆ ತಾಕತ್ತಿದ್ರೆ ಮನಮೋಹನ್ ಸಿಂಗ್ ರನ್ನು ಕೇಳಿನೋಡಿ ಎಂದು ಅವರು ರಮಾನಾಥ್ ರೈ ಅಸವರಿಗೆ ಸವಾಲು ಹಾಕಿದರು. ಇನ್ನುಮುಂದೆ ಸಂಸದ ನಳಿನ್ ವಿರುದ್ಧ ಮಾತಾಡಿದರೆ ನೀವು ಹೋದಲ್ಲಿ ಬಂದಲ್ಲಿ ಪ್ರತಿಭಟಿಸುತ್ತೇವೆ ಎಂದು ಎಚ್ಚರಿಸಿದ್ದಾರೆ.











Click it and Unblock the Notifications