Mangaluru: ಪಿಲಿಕುಳದಲ್ಲಿ ಹುಲಿ ಕಾಳಗ: 15 ವರ್ಷದ ಹೆಣ್ಣು ಹುಲಿ "ನೇತ್ರಾವತಿ" ಸಾವು
ಮಂಗಳೂರು, ಜೂನ್, 07: ಮಂಗಳೂರು ನಗರದ ವಾಮಂಜೂರಿನಲ್ಲಿರುವ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಹುಲಿಗಳೆರಡರ ನಡುವೆ ಕಾಳಗ ನಡೆದಿದ್ದು, ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ 15 ವರ್ಷದ 'ನೇತ್ರಾವತಿ' ಎಂಬ ಹುಲಿ ಬುಧಾವಾರ (ಜೂನ್ 7) ಬೆಳಗ್ಗೆ ಅಸುನೀಗಿದೆ.
ಜೂನ್ 6ರಂದು ರೇವಾ ಎಂಬ 6ರ ಪ್ರಾಯದ ಗಂಡು ಹುಲಿ ಹಾಗೂ ನೇತ್ರಾವತಿಯ ಮಧ್ಯೆ ಕಾಳಗ ನಡೆದಿದ್ದು, ಈ ವೇಳೆ ನೇತ್ರಾವತಿ ಎಂಬ ಹೆಸರಿನ ಹುಲಿ ಗಂಭೀರವಾಗಿ ಗಾಯಗೊಂಡಿತ್ತು. ಗಂಡು ಹುಲಿ 'ರೇವಾ' ಬೆದೆಗೆ ಬಂದಿದ್ದು, ಈ ಸಮಯದಲ್ಲಿ ನೇತ್ರಾವತಿಯ ಸಂಪರ್ಕಕ್ಕೆ ಬಂದಿತ್ತು. ಆಗ ಹೆಣ್ಣು ಹುಲಿಯು ರೇವಾ ಮೇಲೆ ಎರಗಿದೆ.

ಪರಿಣಾಮ ಎರಡೂ ಹುಲಿಗಳ ನಡುವೆ ಕಾಳಗ ಏರ್ಪಟ್ಟಿದೆ. ಈ ಕಚ್ಚಾಟವನ್ನು ಸ್ಥಳದಲ್ಲಿದ್ದ ಅಧಿಕಾರಿಗಳು, ಸಿಬ್ಬಂದಿ ಹತೋಟಿಗೆ ತಂದು ತಕ್ಷಣ ಗಂಡು ಹುಲಿಯನ್ನು ಗೂಡಿನ ಒಳಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಘಟನೆಯಲ್ಲಿ ಗಾಯಗೊಂಡಿದ್ದ ನೇತ್ರಾವತಿ ಹುಲಿಯನ್ನು ಚಿಕಿತ್ಸೆಗೆ ವೈದ್ಯರ ಬಳಿ ಕರೆದೊಯ್ಯಲಾಯಿತು.
ತಕ್ಷಣ ಪಿಲಿಕುಳದ ವೈದ್ಯಾಧಿಕಾರಿ, ವೈಜ್ಞಾನಿಕ ಅಧಿಕಾರಿಗಳು ನೇತ್ರಾವತಿ ಹುಲಿಗೆ ಶುಶ್ರೂಷೆ ನಡೆಸಿದ್ದಾರೆ. ಬಳಿಕ ಗಾಯಗೊಂಡಿದ್ದ ಹುಲಿ ಸಹಜ ಸ್ಥಿತಿಗೆ ಮರಳುತ್ತಿತ್ತು. ನೀರು ಮತ್ತು ಆಹಾರ ಸೇವಿಸುತಿತ್ತು. ಆದರೆ ಇಂದು ಬೆಳಗ್ಗೆ ವೈದ್ಯಾಧಿಕಾರಿ ಶುಶ್ರೂಷೆ ನಿಡುತ್ತಿರುವಾಗಲೇ ಕುಸಿದು ಬಿದ್ದು ಅಸುನೀಗಿದೆ ಎಂದು ತಿಳಿದುಬಂದಿದೆ.
ಮೇಲ್ನೋಟಕ್ಕೆ ಹುಲಿಯ ದೇಹದಲ್ಲಿ ಗಾಯಗಳಿದ್ದು, ಹೋರಾಟದ ತೀವ್ರತೆಯಿಂದ ಹೃದಯಾಘಾತ ಆಗಿರುವುದರಿಂದ ಹುಲಿ ಮೃತಪಟ್ಟಿದೆ ಎನ್ನಲಾಗಿದೆ. ಇನ್ನು ಆಂತರಿಕ ಗಾಯ ಮತ್ತು ಕಾರಣಗಳನ್ನು ಮರಣೋತ್ತರ ಪರೀಕ್ಷೆಯಿಂದ ತಿಳಿಯಲಾಗುವುದು. ರೇವಾನಿಗೆ ಸಣ್ಣಪುಟ್ಟ ಗಾಯಗಳಗಿದ್ದು, ಅದು ಅಪಾಯದಿಂದ ಪಾರಾಗಿದೆ. ಪಿಲಿಕುಳದಲ್ಲಿ ಸದ್ಯ 8 ಹುಲಿಗಳಿವೆ ಎಂದು ಇಲ್ಲಿನ ಜೈವಿಕ ಉದ್ಯಾನವನದ ನಿರ್ದೇಶಕ ಹೆಚ್.ಜಯಪ್ರಕಾಶ್ ಭಂಡಾರಿ ತಿಳಿಸಿದ್ದಾರೆ.
ನಾಗರಹೊಳೆಯಲ್ಲಿ ಆನೆಗಣತಿ
ಈಗಾಗಲೇ ಸುರಿದ ಮಳೆಗೆ ನಾಗರಹೊಳೆ ರಾಷ್ಟ್ರೀಯ ಉದ್ಯಾನ ಹಸಿರಾಗಿದೆ. ಬೇಸಿಗೆಯ ಬಿರು ಬಿಸಿಲಿಗೆ ಸಿಲುಕಿ ಬೋಳಾಗಿದ್ದ ಅರಣ್ಯ ಇದೀಗ ಹಸಿರಾಗಿದ್ದು, ಅರಣ್ಯಗಳ ನಡುವೆ ವನ್ಯ ಪ್ರಾಣಿಗಳು ಸಂಭ್ರಮಿಸುತ್ತಿವೆ. ಹೀಗಿರುವಾಗಲೇ ಮೇ 16ರಿಂದ 18ರವರೆಗೆ ಆನೆಗಣತಿಯೂ ಕೂಡ ನಡೆದಿತ್ತು.
ಕಳೆದ ಐದು ವರ್ಷಗಳ ನಂತರ ಆನೆ ಗಣತಿಯನ್ನು ನಡೆಸಲಾಗಿದೆ. ಈಗಾಗಲೇ ನಾಗರಹೊಳೆ ಅರಣ್ಯದಲ್ಲಿ ಕಾಡಾನೆಗಳ ಸಂಖ್ಯೆ ಹೆಚ್ಚಾಗಿರುವ ಸಾಧ್ಯತೆಯಿದ್ದು, ಆಗಾಗ್ಗೆ ಕಾಡಾನೆಗಳು ಅರಣ್ಯದಿಂದ ಹೊರಬಂದು ದಾಂಧಲೆ ನಡೆಸುವುದು ಮಾಮೂಲಿಯಾಗಿದೆ. 2017ರಲ್ಲಿ ನಡೆದ ಗಣತಿಯಲ್ಲಿ ರಾಜ್ಯದಲ್ಲಿ 6,049 ಕಾಡಾನೆಗಳಿರುವುದು ದಾಖಲಾಗಿತ್ತು. ಆದರೆ ಈಗಿನ ಪರಿಸ್ಥಿತಿಯಲ್ಲಿ ಕಾಡಾನೆಗಳ ಸಂಖ್ಯೆ ಹೆಚ್ಚಾಗಿರುವ ಸಾಧ್ಯತೆಯಿದೆ.
ಪ್ರತಿ ಐದು ವರ್ಷಕ್ಕೊಮ್ಮೆ ನಾಗರಹೊಳೆ ಅರಣ್ಯ ಸೇರಿ ಬಂಡೀಪುರ, ಬಿ.ಆರ್.ಹಿಲ್ಸ್ ಸೇರಿ ಪ್ರತಿ ರಾಷ್ಟ್ರೀಯ ಉದ್ಯಾನದಲ್ಲಿ ಆನೆ ಗಣತಿ ನಡೆಸುತ್ತಾ ಬರಲಾಗುತ್ತಿದೆ. ನಾಗರಹೊಳೆಯು 648 ಚದರ ಕಿಲೋ ಮೀಟರ್ ಹೊಂದಿದ್ದು, ಅರಣ್ಯ ವ್ಯಾಪ್ತಿಯಲ್ಲಿರುವ ಆನೆಗಳ ಗಣತಿಯನ್ನು ಕಳೆದ ಮೂರು ದಿನಗಳ ಕಾಲ ನಡೆಸಲಾಗಿತ್ತು. ಆನೆ ಗಣತಿಯನ್ನು 500 ಚದರ ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಹುಲಿ ಯೋಜನೆಗೆ ಸೇರಿದ ಇಲಾಖೆಯ 300 ಸಿಬ್ಬಂದಿ ನಡೆಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿತ್ತು.
ಇನ್ನು ನಾಗರಹೊಳೆಯಲ್ಲಿ ನಡೆದ ಆನೆಗಣತಿ ಕುರಿತಂತೆ ಮಾಹಿತಿ ನೀಡಿದ ಹುಲಿ ಯೋಜನೆ ನಿರ್ದೇಶಕ ಹರ್ಷಕುಮಾರ್ ಚಿಕ್ಕನರಗುಂದ ಅವರು, ನಾಗರಹೊಳೆಯ 91 ಗಸ್ತುಗಳಲ್ಲಿ ನಡೆದ ಗಣತಿ ಕಾರ್ಯದಲ್ಲಿ ಹುಲಿ ಯೋಜನೆಗೆ ಸೇರಿದ ಇಲಾಖೆಯ 300 ಸಿಬ್ಬಂದಿ ಭಾಗವಹಿಸಿದ್ದು, ಅವರಿಗೆ ತರಬೇತಿ ನೀಡಲಾಗಿದೆ. ಈ ಬಾರಿ ಸ್ವಯಂ ಸೇವಕರನ್ನು ನಿಯೋಜಿಸಿಲ್ಲ ಎಂದು ತಿಳಿಸಿದ್ದರು.
ಆನೆ ಗಣತಿ ಕಾರ್ಯವನ್ನು ಮೂರು ಹಂತದಲ್ಲಿ ನಡೆಸಿದ್ದು, ಮೊದಲ ದಿನ ಬ್ಲಾಕ್ ಕೌಂಟ್ ಮೂಲಕ ನೇರ ಗಣತಿ. ಎರಡನೇ ದಿನ ಪರೋಕ್ಷ ಗಣತಿ (ಲದ್ದಿ ಮಾದರಿ ಎಣಿಕೆ), ಮೂರನೇ ದಿನ ಕೆರೆ ಕಟ್ಟೆ ಬಳಸಿ ಎಣಿಕೆ ನಡೆಸಲಾಗಿದ್ದು, ಎಣಿಕೆ ಕಾರ್ಯಗಳಿಗೆ ನಿಗದಿತ ವ್ಯಾಪ್ತಿ ಗುರುತಿಸಲಾಗಿತ್ತು.
ನಾಗರಹೊಳೆ ವ್ಯಾಪ್ತಿಯಲ್ಲಿ ಶೇಕಡಾ 50ರಷ್ಟು ಭೂ ಪ್ರದೇಶ ಅಥವಾ 5 ಚ.ಕಿ.ಮೀ ಪ್ರದೇಶದಲ್ಲಿ ಕನಿಷ್ಠ 15 ಕಿ.ಮೀ. ಕಾಲ್ನಡಿಗೆಯಲ್ಲಿ ಗಣತಿ ಸಿಬ್ಬಂದಿ ಸುತ್ತಾಡಿದ್ದಾರೆ. ಈ ಮೂಲಕ ಅರಣ್ಯದಲ್ಲಿ ಕಾಣಿಸುವ ಆನೆಯ ಗುರುತುಗಳನ್ನು ನಿಗದಿತ ದಾಖಲೆ ಪ್ರಕಾರ ದಾಖಲಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿತ್ತು.
ಗಣತಿ ಸಿಬ್ಬಂದಿ ಎರಡನೇ ದಿನ ಕನಿಷ್ಠ 2 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಓಡಾಡಿ ಪರೋಕ್ಷವಾಗಿ ಆನೆ ಲದ್ದಿ ಸಂಗ್ರಹಿಸಿ ವೈಜ್ಞಾನಿಕವಾಗಿ ದಾಖಲಿಸುವ ಕ್ರಮ ಅನುಸರಿಸಿದ್ದಾರೆ. ಮೂರನೇ ದಿನ ಅರಣ್ಯದೊಳಗಿನ ಕೆರೆ-ಕಟ್ಟೆ, ನೀರಿನ ಹೊಂಡಗಳ ಬಳಿ ಸಿಬ್ಬಂದಿ ಬೆಳಿಗ್ಗೆಯಿಂದ ಸಂಜೆಯವರೆಗೆ ಮೊಕ್ಕಾಂ ಹೂಡಿ ಸ್ಥಳಕ್ಕೆ ಬಂದ ಆನೆಗಳ ಗಣತಿ ನಡೆಸಿದ್ದರು.
ರಾಜ್ಯದಲ್ಲಿ ದಾಂಡೇಲಿ ಮತ್ತು ಮೈಸೂರು ವಿಭಾಗದಲ್ಲಿ ಅರಣ್ಯ ಪ್ರದೇಶವಿದೆ. ಮೈಸೂರು ವಿಭಾಗದ ವ್ಯಾಪ್ತಿಯಲ್ಲಿರುವ ನಾಗರಹೊಳೆ, ಬಿ.ಆರ್.ಹಿಲ್ಸ್, ಬಂಡೀಪುರ ಸೇರಿ 10 ಸಂರಕ್ಷಿತ ಅರಣ್ಯ ಪ್ರದೇಶಗಳು, ಕೇರಳದ ವೈನಾಡು ಅರಣ್ಯ ಆನೆಗಳಿಗೆ ಸುರಕ್ಷಿತ ತಾಣಗಳಾಗಿವೆ. ಇವು ಆಹಾರ ಭದ್ರತೆಯನ್ನೂ ಒದಗಿಸುವ ಹರಿಧ್ವರ್ಣದ ಕಾಡುಗಳಾಗಿವೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications