ಮಂಗಳೂರು: ಪಣಂಬೂರ್ ಬೀಚ್‌ನಲ್ಲಿ ನೀರುಪಾಲಾದ ಮೂವರು ಯುವಕರು
ಮಂಗಳೂರು, ಮಾರ್ಚ್ 04: ಮಂಗಳೂರಿನ ಖ್ಯಾತ ಪ್ರವಾಸಿ ಬೀಚ್‌ಗಳಲ್ಲಿ ಒಂದಾಗಿರುವ ಪಣಂಬೂರ್ ಬೀಚ್‌ನಲ್ಲಿ ದುರಂತ ಘಟನೆ ವರದಿಯಾಗಿದೆ. ಮಾರ್ಚ್ 3 ರ ಭಾನುವಾರ ನೀರಿಗೆ ಇಳಿದ ಮೂವರು ಯುವಕರು ನೀರುಪಾಲಾಗಿದ್ದಾರೆ.
ಮಂಗಳೂರು ಹೊರವಲಯದ ಪಣಂಬೂರು ಬೀಚ್‌ನಲ್ಲಿ ದುರಂತ ನಡೆದಿದ್ದು, ಘಟನೆಯ ಬಗ್ಗೆ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ. ನೀರುಪಾಲಾದವರನ್ನು 20 ವರ್ಷದ ಮಿಲನ್ , 18 ವರ್ಷದ ಲಿಖಿತ್, 24 ವರ್ಷದ ನಾಗರಾಜ್ ಎಂದು ಗುರುತಿಸಲಾಗಿದೆ.

ಮಿಲನ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ದರು. ಲಿಖಿತ್ ಕೈಕಂಬದ ಖಾಸಗಿ ಕಾಲೇಜಿನ ಪಿಯುಸಿ ವಿದ್ಯಾರ್ಥಿಯಾಗಿದ್ದರು. ನಾಗರಾಜ್ ಕಂಪನಿಯೊಂದರಲ್ಲಿ ಸೂಪರ್‌ವೈಸರ್ ಆಗಿದ್ದರು. ಮೀನುಗಾರರು ಹಾಗೂ ಜೀವರಕ್ಷಕ ದಳದಿಂದ ಶೋಧ ಕಾರ್ಯ ನಡೆಯುತ್ತಿದ್ದು, ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾರ್ಚ್ 3 ರ ಭಾನುವಾರ ಸಂಜೆ 6 ಗಂಟೆಯ ಸುಮಾರಿಗೆ ಪಣಂಬೂರು ಬೀಚ್‌ನಲ್ಲಿ ಆಟವಾಡುತ್ತಿದ್ದ ವೇಳೆ ಬೃಹತ್ ಅಲೆಗಳ ಹೊಡೆತಕ್ಕೆ ಸಿಲುಕಿ ಮೂವರೂ ನೀರು ಪಾಲಾಗಿದ್ದಾರೆ. ಲೈಫ್ ಗಾರ್ಡ್‌ಗಳು ಮುಂದೆ ಹೋಗಬೇಡಿ ಎಂದು ಕೂಗುತ್ತಿದ್ದರೂ ಕೂಡ ಯುವಕರು ಮುಂದೆ ಹೋಗಿದ್ದಾರೆ ಎಂದು ಹೇಳಲಾಗಿದೆ. ಬೃಹತ್ ಅಲೆಗಳ ಕಾರಣದಿಂದ ಮೂವರು ನಾಪತ್ತೆಯಾಗಿದ್ದು, ಹುಡುಕಾಟ ನಡೆಸುತ್ತಿದ್ದಾರೆ.












Click it and Unblock the Notifications