ಸಿದ್ಧಾರ್ಥ ನಾಪತ್ತೆಯಾದ ಜಾಗದಿಂದ ಒಂದೇ ಕಿ.ಮೀ ದೂರದಲ್ಲಿ ಅರಬ್ಬೀ ಸಮುದ್ರ
Recommended Video
ಮಂಗಳೂರು, ಜುಲೈ 30: ಕಾಫೀ ಡೇ ಮಾಲೀಕ ಮತ್ತು ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರ ಅಳಿಯ ವಿ ಜಿ ಸಿದ್ಧಾರ್ಥ ನಾಪತ್ತೆಯಾಗಿರುವ ಪ್ರಕರಣದ ನಿಗೂಢತೆ ಮುಂದುವರಿದಿದೆ.
ಮಂಗಳೂರು ಹೊರವಲಯದ ಕಲ್ಲಾಪು - ಹೆಕ್ಕೂರು ವ್ಯಾಪ್ತಿಯ ನೇತ್ರಾವತಿ ನದಿ ಸೇತುವೆಯ ಸ್ಥಳದಿಂದ ಸಿದ್ಧಾರ್ಥ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗುತ್ತಿದ್ದು, ಈ ಸ್ಥಳ ಶೋಧ ಕಾರ್ಯಕ್ಕೆ ಅತ್ಯಂತ ಸವಾಲಿನ ಜಾಗ ಎನ್ನುವುದು ಸ್ಥಳೀಯರ ಅಭಿಪ್ರಾಯ.
ಯಾಕೆಂದರೆ, ಇಲ್ಲಿಂದ ಒಂದು ಕಿಲೋಮೀಟರ್ ದೂರದಲ್ಲಿ ಅರಬ್ಬೀ ಸಮುದ್ರವಿದ್ದು, ನೀರಿನ ಒಳಸುಳಿವು ತುಂಬಾ ಹೆಚ್ಚಾಗಿರುತ್ತದೆ. ಜೊತೆಗೆ, ಸಮುದ್ರಕ್ಕೆ ಹತ್ತಿರದ ಪ್ರದೇಶವಾಗಿರುವುದರಿಂದ (ಅಳಿವೆಬಾಗಿಲು) , ನೀರಿನ ಹರಿವು ತೀರಾ ರಭಸದಿಂದ ಕೂಡಿರುತ್ತದೆ.

ಕೆಎ-03-ಎನ್‌ಸಿ-2592 ನೊಂದಣಿಯ ಇನ್ನೋವಾ ಕಾರಿನಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ಸಿದ್ಧಾರ್ಥ ಪ್ರಯಾಣಿಸುತ್ತಿದ್ದರು. ಸುಮಾರು ಇನ್ನೂರಕ್ಕೂ ಹೆಚ್ಚು ಜನ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.
ಈ ಹಿಂದೆ ಮಾಸ್ತಿಗುಡಿ ಸಿನಿಮಾ ಚಿತ್ರೀಕರಣದ ವೇಳೆ ಇಬ್ಬರು ಕಲಾವಿದರು ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಎಷ್ಟೇ ಶೋಧ ನಡೆಸಿದರೂ, ಇಬ್ಬರ ಶವ ಪತ್ತೆಯಾಗಿರಲಿಲ್ಲ. ಕೊನೆಗೆ, ಮಂಗಳೂರಿನ ಬೆಂಗ್ರೆ ಮುಳುಗುತಜ್ಞರ ತಂಡ ಆಗಮಿಸಿ ಶವವನ್ನು ಮೇಲೆಕ್ಕೆತ್ತಿತ್ತು.
ಬೆಂಗ್ರೆ ತಂಡ. ವೃತ್ತಿಪರ ಈಜುಗಾರರು, ಎನ್ ಡಿ ಆರ್ ಎಫ್ ಜೊತೆ ಸೇರಿ ಶೋಧಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಭಾಗದಲ್ಲಿ ಮಳೆ ಸುರಿಯುತ್ತಿರುವುದರಿಂದ ಶೋಧ ಕಾರ್ಯಕ್ಕೆ ಅಡ್ಡಿಯಾಗುತ್ತಿದೆ.












Click it and Unblock the Notifications