ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking; ವಿಡಿಯೋ, ಮಂಗಳೂರು ಸಮುದ್ರದಲ್ಲಿ ಮುಳುಗಿದ ಬೋಟ್

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಆಗಸ್ಟ್ 07; ತುಫಾನ್‌ಗೆ ಸಿಲುಕಿ ಆಳ ಸಮುದ್ರದಲ್ಲಿ ಮೀನುಗಾರಿಕಾ ಬೋಟ್ ಮುಳುಗಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಬೋಟ್‌ನಲ್ಲಿದ್ದ 10 ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ.

ಮಂಗಳೂರಿನ ಕೃಷ್ಣ ಕುಮಾರ್ ಎಂಬುವವರ ಬೋಟ್ ಮಂಗಳೂರಿನ ಮೀನುಗಾರಿಕಾ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದಾಗ ಅಲೆಗಳ ಹೊಡೆತಕ್ಕೆ ಸಿಲುಕಿ ಅರಬ್ಬೀ ಸಮುದ್ರದಲ್ಲಿ ಮುಳುಗಿದೆ.

ಮಂಗಳೂರು: 15 ದಿನವಾದರೂ ಇಳಿಯದ ನೆರೆ ನೀರು, ಮನೆಯಿಂದ ಹೊರಬರಬೇಕಾದರೆ ಬೇಕು ಬೋಟ್! ಮಂಗಳೂರು: 15 ದಿನವಾದರೂ ಇಳಿಯದ ನೆರೆ ನೀರು, ಮನೆಯಿಂದ ಹೊರಬರಬೇಕಾದರೆ ಬೇಕು ಬೋಟ್!

Ten Fishermen Rescued Mid Sea As Boat Sinks

ಬೋಟ್‌ನಲ್ಲಿದ್ದ 10 ಮಂದಿ ಮೀನುಗಾರರನ್ನು ಮೀನುಗಾರಿಕೆಗೆ ತೆರಳಿದ್ದ ಇತರ ಮೀನುಗಾರಿಕಾ ಬೋಟ್‌ಗಳಲ್ಲಿದ್ದ ಮೀನುಗಾರರು ರಕ್ಷಣೆ ಮಾಡಿದ್ದಾರೆ.

ಡಿಸೇಲ್ ದರ ಏರಿಕೆ; ದಡದಲ್ಲಿ ನಿಂತ ಶೇ 70ರಷ್ಟು ಮೀನುಗಾರಿಕೆ ಬೋಟ್ಡಿಸೇಲ್ ದರ ಏರಿಕೆ; ದಡದಲ್ಲಿ ನಿಂತ ಶೇ 70ರಷ್ಟು ಮೀನುಗಾರಿಕೆ ಬೋಟ್

ಬೋಟ್ ಮುಳುಗುತ್ತಿರುವ ವಿಡಿಯೋ

ಶ್ರೀರಾಮ್ ಹೆಸರಿನ ಬೋಟ್ ಅರಬ್ಬೀ ಸಮುದ್ರದಲ್ಲಿ ಮುಳುಗಡೆಯಾಗಿದೆ. ಮಂಗಳೂರಿನಿಂದ 30 ನಾಟಿಕಲ್ ಮೈಲ್ ದೂರದಲ್ಲಿ ಈ ಘಟನೆ ನಡೆದಿದೆ. ಬೋಟ್ ಮುಳುಗುತ್ತಿದ್ದಂತೆ ಹಲವರು ಸಮುದ್ರಕ್ಕೆ ಹಾರಿದ್ದಾರೆ. ಈಜಾಡುತ್ತಿದ್ದ ಅವರನ್ನು ಬೇರೆ ಬೋಟ್‌ನಲ್ಲಿದ್ದವರು ರಕ್ಷಣೆ ಮಾಡಿದ್ದಾರೆ.

ಅರಬ್ಬೀ ಸಮುದ್ರದ ಬೋಟ್ ದುರಂತ: ಮೀನುಗಾರ ಬಿಚ್ಚಿಟ್ಟ ಜೀವನ್ಮರಣ ಹೋರಾಟದ ಕಥೆಅರಬ್ಬೀ ಸಮುದ್ರದ ಬೋಟ್ ದುರಂತ: ಮೀನುಗಾರ ಬಿಚ್ಚಿಟ್ಟ ಜೀವನ್ಮರಣ ಹೋರಾಟದ ಕಥೆ

ಮೀನುಗಾರಿಗೆ ಸಂದರ್ಭದಲ್ಲಿ ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿತ್ತು. ಅಲ್ಲದೇ ಜೋರಾದ ಗಾಳಿ ಬೀಸುತ್ತಿದ್ದ ಕಾರಣ ಬೋಟ್ ಮುಳುಗಡೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದೆ.

ಮುಂಗಾರು ಅವಧಿ ಆರಂಭವಾದ ತಕ್ಷಣ ಆಳ ಸಮುದ್ರದ ಮೀನುಗಾರಿಗೆ ಮೇಲೆ ನಿಷೇಧ ಹೇರಲಾಗಿತ್ತು. ಆಗಸ್ಟ್‌ನಲ್ಲಿ ಈ ನಿಷೇಧ ತೆರವುಗೊಂಡಿದ್ದು, ಈಗ ಮೀನುಗಾರಿಕೆ ಆರಂಭವಾಗಿದೆ.

English summary
10 fishermen rescued after their boat sank while fishing in Mangaluru. Boat belongs to Krishna Kumar from Mangaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X