ಸುರತ್ಕಲ್ ಟೋಲ್ ವಿಲೀನ: ಸುಲಿಗೆಯ ಹಣದಲ್ಲಿ ತಮ್ಮ ಪಾಲೆಷ್ಟು? ಕಟೀಲ್‌ಗೆ ಬಿ.ಕೆ ಹರಿಪ್ರಸಾದ್ ಪ್ರಶ್ನೆ
ಬೆಂಗಳೂರು, ನವೆಂಬರ್, 26: ಇತ್ತೀಚೆಗಷ್ಟೇ ಅಕ್ರಮವಾಗಿ ಟೋಲ್ ಸಂಗ್ರಹ ಮಾಡುತ್ತಿದ್ದಾರೆ ಎಂದು ಸುರತ್ಕಲ್ ಟೋಲ್ ಅನ್ನು ಮುಚ್ಚಲಾಗಿತ್ತು. ಆದರೆ ಸುರತ್ಕಲ್ ಟೋಲ್ ಗೇಟ್ ರದ್ದುಗೊಳಿಸಿ, ಇದೀಗ ಪಕ್ಕದ ಹೆಜಮಾಡಿ ಟೋಲ್ ಗೇಟ್ ಜೊತೆ ವಿಲೀನಗೊಳಿಸಿರುವುದಕ್ಕೆ ಆಕ್ರೋಶಗಳು ಭುಗಿಲೆದ್ದಿವೆ. ಹಾಗೆಯೇ ದಕ್ಷಿಣ ಕನ್ನಡ ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧ ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರಾವಳಿಯ ಬಿಜೆಪಿ ಸಂಸದರು,ಶಾಸಕರು ಟೋಲ್‌ಗೇಟ್ ಗಳ ಪರ ವಕಾಲತ್ತು ವಹಿಸುತ್ತಿರುವುದು ಯಾಕೆ?ಸುಲಿಗೆ ಮಾಡುತ್ತಿರುವ ಹಣದಲ್ಲಿ ತಮ್ಮ ಪಾಲೆಷ್ಟು ಬಹಿರಂಗಪಡಿಸಿ?
— Hariprasad.B.K. (@HariprasadBK2) November 26, 2022
ಮತಕೊಟ್ಟ ಜನರಿಗೆ ದ್ರೋಹ ಮಾಡಿ, ಬೆನ್ನ ತಟ್ಟಿಕೊಂಡಿರುವ ಸಂಸದರದ್ದು ಲಜ್ಜೆಗೆಟ್ಟ ಪರಮಾವಧಿ.ಅಕ್ರಮ ಟೋಲ್ ಅಂತೆ ನಿಮ್ಮನ್ನ ಎತ್ತಂಗಡಿ ಮಾಡುವ ಕಾಲ ಬಂದಾಯ್ತು.
3/3#suratkal_toll
ಸುಲಿಗೆಯ ಹಣದಲ್ಲಿ ತಮ್ಮ ಪಾಲೆಷ್ಟು?
ಈ ಬಗ್ಗೆ ಟ್ವೀಟ್ ಮಾಡಿರುವ ಬಿ.ಕೆ ಹರಿಪ್ರಸಾದ್ ಅವರು, ಕರಾವಳಿ ಸಂಸದರು ಯಾವ ಪುರುಷಾರ್ಥಕ್ಕೆ ಸ್ವಯಂ ಬೆನ್ನುತಟ್ಟಿಕೊಂಡಿದ್ದಾರೆ ಅನ್ನುವುದನ್ನು ಬಹಿರಂಗಪಡಿಸಬೇಕು. ವಾಹನ ಸವಾರರ ಬಳಿ ಬೇಕಾಬಿಟ್ಟಿಯಾಗಿ ಹಣ ಕೀಳುತ್ತಿದ್ದ ಸುರತ್ಕಲ್ ಟೋಲ್‌ಗೇಟ್ ರದ್ದು ಪಡಿಸಿ, ಹೆಜಮಾಡಿ ಟೋಲ್‌ನಲ್ಲಿ ದುಪ್ಪಟ್ಟು ಸುಲಿಗೆ ಮಾಡಲು ವಿಲೀನಗೊಳಿಸಿದ್ದಕ್ಕಾ? ಎಂದು ಪ್ರಶ್ನಿಸಿದ್ದಾರೆ. ಕರಾವಳಿಯ ಬಿಜೆಪಿ ಸಂಸದರು, ಶಾಸಕರು ಟೋಲ್‌ಗೇಟ್‌ಗಳ ಪರ ನಿಂತಿರುವುದು ಯಾಕೆ? ಸುಲಿಗೆ ಮಾಡುತ್ತಿರುವ ಹಣದಲ್ಲಿ ತಮ್ಮ ಪಾಲು ಎಷ್ಟಿದೆ ಅನ್ನುವುದನ್ನು ಬಹಿರಂಗಪಡಿಸಿ. ಮತ ನೀಡಿದ ಜನರಿಗೆ ಅನ್ಯಾಯ ಮಾಡಿ, ಬೆನ್ನು ತಟ್ಟಿಕೊಂಡಿರುವ ಸಂಸದರದ್ದು ನೀಚಗೆಟ್ಟ ಪರಮಾವಧಿಯಾಗಿದೆ. ಅಕ್ರಮ ಟೋಲ್‌ನಂತೆ ನಿಮ್ಮನ್ನು ಎತ್ತಂಗಡಿ ಮಾಡುವ ಕಾಲ ಸನಿಹದಲ್ಲಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಕಟೀಲ್ ವಿರುದ್ಧ ಕಾಂಗ್ರೆಸ್ ಸರಣಿ ಟ್ಟೀಟ್
ಅಕ್ರಮ ಟೋಲ್‌ಗೇಟ್ ತೆರವುಗೊಳಿಸಲು ಕರಾವಳಿಯಲ್ಲಿ ಅಹೋರಾತ್ರಿ ಹೋರಾಟ ನಡೆಯುತ್ತಿತ್ತು. ಆದರೆ ತಾವು ಅಕ್ರಮ ಟೋಲ್‌ಗೇಟ್ ಅನ್ನೇ ಉಳಿಸಲು ಶ್ರಮಿಸಿರುವ ಬಗ್ಗೆ ಮಾಹಿತಿ ಬಹಿರಂಗಪಡಿಸಿ. ಅಥವಾ ಕಾರು ಅಲ್ಲಾಡಿಸಿದ ಕಾರಣಕ್ಕೆ ಬಹಿರಂಗವಾಗಿ ಕರಾವಳಿಗರ ಮೇಲೆ ಸೇಡು ತೀರಿಸಿಕೊಂಡಿದ್ದನ್ನು ಒಪ್ಪಿಕೊಳ್ಳಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ಸುರತ್ಕಲ್ ಟೋಲ್ ರದ್ದು ಎನ್ನುವುದು ಬಿಜೆಪಿ ಮಾಡಿದ ಶತಮಾನದ ಜೋಕ್ ಆಗಿದೆ. ನಳಿನ್ ಕುಮಾರ್ ಕಟೀಲ್ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಧನ್ಯವಾದ ಸಲ್ಲಿಸಿ ಮಾಡಿದ್ದ ಟ್ವೀಟ್ ಅನ್ನು ಉಲ್ಲೇಖ ಮಾಡಿ. ನೀವು ಯಾವುದಕ್ಕೆ ಧನ್ಯವಾದ ಹೇಳಿದ್ದೀರಾ ಅನ್ನುವುದನ್ನು ಬಹಿರಂಗಪಡಿಸಿ ಎನ್ನುವ ಆಕ್ರೋಶಗಳು ಭುಗಿಲೆದ್ದಿವೆ.
ಕರಾವಳಿ ಸಂಸದರು ಯಾವ ಪುರುಷಾರ್ಥಕ್ಕೆ ಸ್ವಯಂ ಬೆನ್ನುತಟ್ಟಿಕೊಂಡಿದ್ದು ಬಹಿರಂಗಪಡಿಸಬೇಕು.
— Hariprasad.B.K. (@HariprasadBK2) November 26, 2022
ವಾಹನ ಸವಾರರ ಬೆವರಿನ ಹಣವನ್ನ ಜಿಗಣೆಯಂತೆ ರಕ್ತ ಹೀರುತ್ತಿದ್ದ ಸುರತ್ಕಲ್ ಟೋಲ್‌ಗೇಟ್ ರದ್ದು ಪಡಿಸಿ, ಹೆಜಮಾಡಿ ಟೋಲ್ ಅಲ್ಲಿ ದುಪ್ಪಟ್ಟು ಸುಲಿಗೆ ಮಾಡಲು ವಿಲೀನಗೊಳಿಸಿದ್ದಕ್ಕಾ?
1/3#suratkal_toll
ಸುರತ್ಕಲ್ ಟೋಲ್ ಗೇಟನ್ನು ಮಾತ್ರ ರದ್ದುಗೊಳಿಸಿದ್ದು, ಆ ಮೊತ್ತವನ್ನು ಹೆಜಮಾಡಿಯಲ್ಲಿ ಸಂಗ್ರಹಿಸುವುದಕ್ಕೆ ಮೋದಿಯವರಿಗೆ ಧನ್ಯವಾದ ತಿಳಿಸಿದ್ದೀರಾ? ಸುರತ್ಕಲ್ ಟೋಲ್ ರದ್ದು ಎನ್ನುವುದು ಬಿಜೆಪಿ ಮಾಡಿದ ಜೋಕ್ ಆಗಿದೆ. ಸುರತ್ಕಲ್‌ನಲ್ಲಿ ಸಂಗ್ರಹಿಸುವ ಟೋಲ್ ಮೊತ್ತವನ್ನು 4 ಕಿಲೋ ಮಿಟರ್ ದೂರದ ಹೆಜಮಾಡಿ ಟೋಲ್‌ಗೆ ವರ್ಗಾಯಿಸಿದ್ದು ಜೋಕ್ ಅಲ್ಲದೆ ಇನ್ನೇನು ಕಟೀಲ್ ಅವರೇ? ಎಂದು ಪ್ರಶ್ನೆ ಮಾಡಿದೆ. ಕರಾವಳಿ ಜನರ ಕಿವಿ ಮೇಲೆ ಹೂವು ಇಡಲು ಹೊರಟಿರುವ ಬಿಜೆಪಿಗೆ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ಸಂದೇಶವನ್ನು ರವಾನಿಸಿದೆ.












Click it and Unblock the Notifications