ಮಂಡ್ಯದ ಜನರಿಗೆ ಗೊತ್ತು ನಾನ್ಯಾರೆಂದು:ವಿರೋಧಿಗಳಿಗೆ ಸುಮಲತಾ ಉತ್ತರ
Recommended Video

ಮಂಗಳೂರು ಏಪ್ರಿಲ್ 01:ಬ್ಯಾಲೆಟ್ ಪೇಪರ್ ನಲ್ಲಿ ಗೊಂದಲ ಮೂಡಿಸಲು ನಡೆಯುತ್ತಿರುವ ಯತ್ನಗಳಿಗೆ ಸುಮಲತಾ ಅಂಬರೀಶ್ ಪ್ರತಿಕ್ರಿಯಿಸಿದ್ದಾರೆ.
ಧರ್ಮಸ್ಥಳದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸುಮಲತಾ ಹೆಸರಿನಲ್ಲಿ ಜನರನ್ನು ಮೋಸ ಮಾಡಲು ಸಾಧ್ಯವಿಲ್ಲ. ಹಿಂದೆ ರೈತ ಸಂಘದ ಪುಟ್ಟಣ್ಣಯ್ಯರ ವಿರುದ್ಧ ಇದೇ ತಂತ್ರ ಮಾಡಲಾಗಿತ್ತು. ಆದರೆ ಚುನಾವಣೆಯಲ್ಲಿ ಪುಟ್ಟಣ್ಣಯ್ಯ ಆರಾಮಾಗಿ ಗೆದ್ದು ಬಂದಿದ್ದರು. ಹಾಗಾಗಿ ಈ ತಂತ್ರಗಾರಿಕೆ ವರ್ಕೌಟ್ ಆಗಲ್ಲ ಎಂದು ಹೇಳಿದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಇನ್ನು ಪರಿಚಯ ಇಲ್ಲದ ಪ್ರೊಫೈಲ್ ಅಲ್ಲ ನನ್ನದು . ಮಂಡ್ಯ ಜನರೆಲ್ಲರಿಗೂ ಗೊತ್ತು ನಾನ್ಯಾರೆಂದು. ಜನ ಹಾಗೆಲ್ಲ ಮೋಸ ಹೋಗಲ್ಲ. ಈ ತಂತ್ರಗಾರಿಕೆ ಮಾಡಿದವರು ಅಂದುಕೊಂಡಿರುವ ರೀತಿಯಲ್ಲಿ ಇದೆಲ್ಲಾ ವರ್ಕೌಟ್ ಆಗಲ್ಲ ಎಂದು ಟೀಕಿಸಿದರು.

ಮಂಡ್ಯ ಸಂಸದ ಶಿವರಾಮೇಗೌಡ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಬೆಲೆ ಇಲ್ಲದಿರುವವರ ಮಾತುಗಳಿಗೆ ಬೆಲೆ ಕೊಡಲ್ಲ. ಅದಕ್ಕೆಲ್ಲಾ ಜನ ಉತ್ತರ ಕೊಡುತ್ತಾರೆ. ನಾನು ಆ ಲೆವಲ್ ಗೆ ಹೋಗಲ್ಲ. ಆ ಸಂಸ್ಕಾರ ನನ್ನಲ್ಲಿ ಇಲ್ಲ. ಈ ಎಲ್ಲಾ ಮಾತುಗಳಿಗೆ 17 ದಿನದಲ್ಲಿ ಜನ ಉತ್ತರ ಕೊಡುತ್ತಾರೆ ಎಂದು ಸುಮಲತಾ ಕಿಡಿಕಾರಿದರು.












Click it and Unblock the Notifications