Sullia Constituency Analysis: ಶಾಸಕರ ಮೇಲೆ ಮುನಿಸಿಕೊಂಡ ಕಾರ್ಯಕರ್ತರು, ಅಂಗಾರರ ರಾಜಕೀಯ ಭವಿಷ್ಯವೇನು?
ಕರಾವಳಿಯಲ್ಲಿ ಸುಳ್ಯವೇ ಬಿಜೆಪಿಯ ಶಕ್ತಿ ಕೇಂದ್ರ. ಯಾರೇ ಚುನಾವಣೆಗೆ ನಿಂತರೂ ಸುಳ್ಯದಲ್ಲಿ ಬಿಜೆಪಿಗೆ ಸೀಟು ಕಟ್ಟಿಟ್ಟ ಬುತ್ತಿ ಎನ್ನುವುದು ರಾಜಕೀಯ ವಲಯ ನಂಬಿರುವ ಮಾತು. ಆದರೆ ಈ ಬಾರಿ ಸುಳ್ಯದಲ್ಲಿ ಬದಲಾವಣೆಯ ಗಾಳಿ ಬೀಸಲಾರಂಭಿಸಿದೆ. ಈ ಬಗ್ಗೆ ವಿಶ್ಲೇಷಣೆ ಇಲ್ಲಿದೆ.
ಕರ್ನಾಟಕದಲ್ಲಿ ಕರಾವಳಿ ಕೇಸರಿಯ ಭದ್ರಕೋಟೆ. ಕರಾವಳಿಯಲ್ಲಿ ಸುಳ್ಯವೇ ಬಿಜೆಪಿಯ ಶಕ್ತಿ ಕೇಂದ್ರ. ಯಾರೇ ಚುನಾವಣೆಗೆ ನಿಂತರೂ ಸುಳ್ಯದಲ್ಲಿ ಬಿಜೆಪಿಗೆ ಸೀಟು ಕಟ್ಟಿಟ್ಟ ಬುತ್ತಿ ಎನ್ನುವುದು ರಾಜಕೀಯ ವಲಯ ನಂಬಿರುವ ಮಾತು. ಆದರೆ ಈ ಬಾರಿ ಸುಳ್ಯದಲ್ಲಿ ಬದಲಾವಣೆಯ ಗಾಳಿ ಬೀಸಲಾರಂಭಿಸಿದೆ. ಕಳೆದ ಮೂವತ್ತು ವರ್ಷಗಳಿಂದ ಸುಳ್ಯದ ಆಡಳಿತದ ಚುಕ್ಕಾಣಿ ಹಿಡಿದ ಶಾಸಕ ಎಸ್.ಅಂಗಾರರ ಮೇಲೆ ಪಕ್ಷದ ಕಾರ್ಯಕರ್ತರೇ ಮುನಿಸಿಕೊಂಡಿರುವುದು ಈ ಬಾರಿ ಚುನಾವಣಾ ಪೂರ್ವರಂಗದ ಹೈಲೈಟ್ಸ್ ಆಗಿದೆ.
ಒಂದೆಡೆ ಕಾಡು, ಮತ್ತೊಂದೆಡೆ ಗಿರಿ ಶಿಖರಗಳ ಶ್ರೇಣಿ, ತಪ್ಪಲ್ಲಲ್ಲಿ ಹರಿಯುವ ಜೀವಸೆಲೆ. ಹಾಸನ, ಕೊಡಗು ಮತ್ತು ಕೇರಳದೊಂದಿಗೆ ಗಡಿ ಹಂಚಿಕೊಂಡಿರುವ ಸುಳ್ಯ ಕಾಡಿನಿಂದ ಆವೃತವಾದ ಪ್ರದೇಶ. ಜನವಸತಿಗಿಂತ ಕಾಡು ಪ್ರದೇಶವೇ ಹೆಚ್ಚು ಇರುವ ಸುಳ್ಯ ಅದ್ಭುತ ಪೃಕೃತಿ ಸೌಂದರ್ಯದ ಗಣಿ. ಸುಳ್ಯ ಕ್ಷೇತ್ರಕ್ಕೆ ಕುಮಾರಾಧಾರ ಮತ್ತು ಪಯಸ್ವಿನಿ ನದಿಯೇ ಜೀವನಾಡಿಯಾಗಿದೆ.

ಪುತ್ತೂರು ತಾಲೂಕಿಗೆ ಸೇರಿದ್ದ ಸುಳ್ಯ 1965ರಲ್ಲಿ ಸ್ವತಂತ್ರ ತಾಲೂಕಾಯಿತು. ಆದರೆ ಬಹುದೊಡ್ಡ ತಾಲೂಕಾದ ಕಾರಣ ಜನ ಕಷ್ಟಪಟ್ಟರು. ತಾಲೂಕು ಪಂಚಾಯತ್ ಸಂಪರ್ಕಕ್ಕೆ ನೂರಾರು ಕಿ.ಮೀ ಕ್ರಮಿಸಬೇಕಾಯಿತು. ಕಡಬ ಪ್ರತ್ಯೇಕ ಗ್ರಾಮವಾಗಬೇಕೆಂದು ಜನ ಸತತ 20 ವರ್ಷಗಳ ಕಾಲ ಹೋರಾಟ ನಡೆಸಿದರು. ಜನರ ಪರಿಶ್ರಮದ ಪರಿಣಾಮ 2018ರಲ್ಲಿ ಸುಳ್ಯ-ಪುತ್ತೂರು ಮತ್ತು ಬೆಳ್ತಂಗಡಿಯ ಕೆಲವು ಹಳ್ಳಿಗಳನ್ನು ಸೇರಿಸಿ ಕಡಬ ತಾಲೂಕು ಘೋಷಿಸಲಾಯಿತು.
ರಾಜ್ಯದ ಏಕೈಕ ದಲಿತ ಮೀಸಲು ಕ್ಷೇತ್ರ ಎಂದು ಗುರುತಿಸಿಕೊಂಡಿರುವ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯೇ ಗೆಲುವಿನ ಕುದುರೆಯಾಗಿದೆ. 2013ರಲ್ಲಿ ಬಿಜೆಪಿ ಮಕಾಡೆ ಮಲಗಿ, ಹಿಂದುತ್ವದ ಭಧ್ರಕೋಟೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಏಳರಲ್ಲಿ ಸೋತರೂ ಭಾಜಪಾದ ಕೈ ಹಿಡಿದಿದ್ದ ಕರಾವಳಿ ಜಿಲ್ಲೆಯ ಏಕೈಕ ಕ್ಷೇತ್ರ ಸುಳ್ಯ ವಿಧಾನಸಭಾ ಕ್ಷೇತ್ರವಾಗಿದೆ.
1962ರಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಕ್ಷೇತ್ರ ಸುಳ್ಯವಾದರೂ 1972ರಿಂದ ಪರಿಶಿಷ್ಟ ಜಾತಿಯವರು ಸ್ಪರ್ಧೆ ಮಾಡಲು ಆರಂಭಿಸಿದರು. ಸುಳ್ಯದಲ್ಲಿ ಕಾಂಗ್ರೆಸ್ ಗೆಲುವು ಕಂಡಿದ್ದು 1985, 89ರ ಚುನಾವಣೆಯಲ್ಲಿ ಮಾತ್ರ. ಬಳಿಕ ಬಿಜೆಪಿಯದ್ದೇ ನಾಗಾಲೋಟ. 1994ರಲ್ಲಿ ಗೆಲುವಿನ ಓಟ ಆರಂಭಿಸಿದ ಬಿಜೆಪಿ ಬಳಿಕ 1999, 2004, 2008, 2013, 2018 ಹೀಗೆ ಸತತ 6 ಚುನಾವಣೆಗಳಲ್ಲಿ ಬಿಜೆಪಿಯ ಎಸ್ ಅಂಗಾರ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಸಂಘಟನಾತ್ಮಕ ಅಡಿಪಾಯವೇ ಬಿಜೆಪಿ ಗೆಲುವಿನ ಓಟಕ್ಕೆ ಕಾರಣವಾಗಿದೆ. ಇತ್ತ ಕಾಂಗ್ರೆಸ್ ಸುಳ್ಯ ಕ್ಷೇತ್ರವನ್ನು ಸೋಲುವ ಕುದುರೆ ಅಂತಾನೇ ಭಾವಿಸಿದೆ. ಆದರೆ ವರ್ಷ ಕಳೆದಂತೆ ಎಸ್ ಅಂಗಾರರ ಚುನಾವಣಾ ಮತ ಗಳಿಕೆಯ ಪ್ರಮಾಣವೂ ಕಡಿಮೆಯಾಗುತ್ತಿರುವುದು ಕಾಂಗ್ರೆಸ್‌ಗೆ ಹೊಸ ಅವಕಾಶವನ್ನು ತೋರಿಸಿದೆ. ಆದರೆ ಎಸ್.ಅಂಗಾರ ಅವರಿಗೆ ಸುಳ್ಯ ಕ್ಷೇತ್ರದಲ್ಲಿ ಸರಿಸಮಾನವಾದ ಅಭ್ಯರ್ಥಿ ಇಲ್ಲದೇ ಇರೋದರಿಂದ ಕಾಂಗ್ರೆಸ್ ಮೈ ಚಳಿ ಬಿಟ್ಟು ಕೆಲಸವನ್ನು ಮಾಡಬೇಕಿದೆ.
ಎಸ್.ಅಂಗಾರ ಆರು ಬಾರಿ ಬಿಜೆಪಿಯಿಂದ ಶಾಸಕರಾಗಿ ಆಯ್ಕೆಯಾದರೂ ಈ ಬಾರಿಯೂ ಚುನಾವಣೆಗೆ ನಿಲ್ಲುವ ಇಂಗಿತ ವ್ಯಕ್ತಪಡಿಸಿದ್ದಾರೆ. ಆದರೆ ಎಸ್.ಅಂಗಾರ ಅವರ ಕ್ಷೇತ್ರದ ಅಭಿವೃದ್ಧಿ ಕಾರ್ಯದ ಬಗ್ಗೆ ಕ್ಷೇತ್ರದ ಮತದಾರರಿಗೆ ಅಸಮಾಧಾನ ಇದೆ. ಮತದಾರರಿಗೆ ಮಾತ್ರವಲ್ಲದೇ ಸಂಘ ಪರಿವಾರ ಮತ್ತು ಬಿಜೆಪಿ ಕಾರ್ಯಕರ್ತರಲ್ಲೂ ಅಸಮಾಧಾನ ಇದೆ. ಹೀಗಾಗಿ ಈ ಬಾರಿ ಅಭ್ಯರ್ಥಿ ಬದಲಾವಣೆ ಕೂಗು ಕೇಳಿಬಂದಿದೆ.
ಇನ್ನು ಸುಳ್ಯದಿಂದ ಕಾಂಗ್ರೆಸ್ನಿಂದ ಈವರೆಗೆ ಡಾ. ರಘು ಅವರು ಸ್ಪರ್ಧಿಸುತ್ತಿದ್ದರು. ಆದರೆ ಕಳೆದ ಬಾರಿ ಅವರು ಸೋಲನುಭವಿಸಿದ್ದರು. ಸತತ ನಾಲ್ಕು ಬಾರಿ ಸೋತಿರುವ ಕಾಂಗ್ರೆಸ್‌ನ ಡಾ.ರಘು ಈ ಬಾರಿ ಸ್ಪರ್ಧಿಸುವ ಉತ್ಸಾಹ ತೋರಿಸುತ್ತಿಲ್ಲವೆಂಬ ಮಾತು ಕೇಳಿಬರುತ್ತಿದೆ. ಸರಕಾರಿ ವೈದ್ಯ ಎನಿಸಿಕೊಂಡಿದ್ದ ಡಾ.ರಘು ಈಗಲೂ ಬೇರುಮಟ್ಟದ ಜನ ಸಂಪರ್ಕ ಉಳಿಸಿಕೊಂಡಿದ್ದಾರೆಂಬ ಅಭಿಪ್ರಾಯವಿದೆ.
ಡಾ. ರಘು ಸ್ಪರ್ಧಿಸಲು ಹಿಂದೇಟು ಹಾಕುತ್ತಿರುವುದರಿಂದ ಕಾಂಗ್ರೆಸ್ ಟಿಕೆಟ್ ಈ ಬಾರಿ ಎಚ್.ಎಮ್. ನಂದಕುಮಾರ್ ಅವರಿಗೆ ಸಿಗುವ ಸಾಧ್ಯತೆಗಳಿವೆ. ಇವರು ಬ್ಲಾಕ್ ಉಸ್ತುವಾರಿಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
ಮತದಾರರ ವಿವರ (ಅಂದಾಜು)
ಸುಳ್ಯದಲ್ಲಿ ಒಟ್ಟು ಮತದಾರರ ಸಂಖ್ಯೆ- 1,98,686
ಒಕ್ಕಲಿಗ-80,000
ಮುಸ್ಲಿಂ-30,000
ಎಸ್ಸಿ/ಎಸ್ಟಿ-15,000
ವಿಶ್ವಕರ್ಮ-4,000
ಕುಲಾಲ್-3,000
2018 ಚುನಾವಣೆಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಎಸ್.ಅಂಗಾರ 95,205 ಮತಗಳನ್ನು ಪಡೆದಿದ್ದರು. ಕಾಂಗ್ರೆಸ್ಸಿನಿಂದ ಸ್ಪರ್ಧಿಸಿದ್ದ ಡಾ.ಬಿ.ರಘು 69,137 ಮತಗಳನ್ನು ಪಡೆದಿದ್ದರು. ಬಿಎಸ್ಪಿ ಅಭ್ಯರ್ಥಿ ಸೇರಿ ಕಣದಲ್ಲಿ ಇದ್ದ ಇತರ ಎಲ್ಲರೂ ಠೇವಣಿಯನ್ನು ಕಳೆದುಕೊಂಡಿದ್ದರು. ಅಂಗಾರ 26,068 ಮತಗಳ ಅಂತರದಿಂದ ಗೆಲುವನ್ನು ಸಾಧಿಸಿದ್ದರು.
-
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್












Click it and Unblock the Notifications