ಸಿನಿಮಾ ನೋಡಿ ಬರುತ್ತಿದ್ದ ವಿದ್ಯಾರ್ಥಿಗೆ ಪೊಲೀಸರು ಹೊಡೆದ್ರಂತೆ
ಮಂಗಳೂರು, ಅಕ್ಟೋಬರ್ 05 : ಸಿನಿಮಾ ನೋಡಿ ವಾಪಸ್ ಆಗುತ್ತಿದ್ದ ವಿದ್ಯಾರ್ಥಿ ಮೇಲೆ ಉರ್ವಾ ಪೊಲೀಸ್ ಠಾಣೆಯ ಪೇದೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ವಿದ್ಯಾರ್ಥಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಥಳಿತಕ್ಕೆ ಒಳಗಾದ ವಿದ್ಯಾರ್ಥಿಯನ್ನು ಪೃಥ್ವಿರಾಜ್ ಎಂದು ಗುರುತಿಸಲಾಗಿದೆ. ಬಿಗ್ ಸಿನೆಮಾದಲ್ಲಿ ಚಲನಚಿತ್ರ ನೋಡಿ ರಾತ್ರಿ 1 ಗಂಟೆಯ ವೇಳೆಗೆ ಮನೆಗೆ ಹಿಂತಿರುಗುತ್ತಿದ್ದ ಈತನ ಮೇಲೆ ಉರ್ವಾ ಪೊಲೀಸ್ ಠಾಣೆಯ ಪೇದೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. [ಮಂಗಳೂರು : ಜಿಲ್ಲಾಧಿಕಾರಿಗಳಿಗೆ ದೂರು ಕೊಡುವುದು ಹೇಗೆ?]
ಪೃಥ್ವಿರಾಜ್ ಹೇಳುವ ಪ್ರಕಾರ 'ಸಿನೆಮಾ ನೋಡಿ ವಾಪಸ್ ಬರುತ್ತಿದ್ದ ವೇಳೆ, ಪೊಲೀಸ್ ಪೇದೆ ಎಲ್ಲಿಂದ ಬರುತ್ತಿರುವೆ? ಎಂದು ವಿಚಾರಿಸಿದ್ದಾರೆ. ಆಗ ಈತ ಟ್ಯೂಷನ್ ಮುಗಿಸಿ, ಫಿಲ್ಮ್ ನೋಡಿ ಬರುತ್ತಿರುವುದಾಗಿ ಹೇಳಿದ್ದಾನೆ. ಇದರಿಂದ ಕೋಪಗೊಂಡ ಪೇದೆ ಲಾಠಿಯಿಂದ ಕಾಲಿಗೆ ಹೊಡೆದಿದ್ದಾರೆ. ಕೆನ್ನೆಗೆ ಹೊಡೆದಿದ್ದಾರೆ'. [ಮಂಗಳೂರಲ್ಲಿ ನೈತಿಕ ಪೊಲೀಸ್ ಗಿರಿ ವಿರುದ್ಧ ಮಂಗಳೂರಲ್ಲಿ ಜಾಥಾ]
ಪೃಥ್ವಿರಾಜ್ 7ನೇ ತರಗತಿಯಲ್ಲಿ ಓದುತ್ತಿದ್ದು, ಆತನ ಮೇಲೆ ವಿನಾಕಾರಣ ಪೊಲೀಸರು ಹಲ್ಲೆ ನಡೆಸಿದ್ದಾರೆ. ಪೊಲೀಸರ ದೌರ್ಜನ್ಯವನ್ನು ನಾವು ಖಂಡಿಸುತ್ತೇವೆ ಎಂದು ಹೇಳಿರುವ ಪೃಥ್ವಿರಾಜ್ ಕುಟುಂಬದವರು, ತಮಗೆ ನ್ಯಾಯ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಹಲ್ಲೆ ಪ್ರಕರಣದ ಬಗ್ಗೆ ಉರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೃಥ್ವಿರಾಜ್‌ನನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !