ಎಸ್‌ವೈಎಸ್ ಸಮ್ಮೇಳನದಲ್ಲಿ ಡಿ.ಕೆ ಶಿವಕುಮಾರ್ ಭಾಗಿ: ಹಿಜಾಬ್ ನಿಷೇಧ ಹಿಂಪಡೆಯಲು ತೀವ್ರ ಒತ್ತಾಯ
ಮಂಗಳೂರು, ಜನವರಿ 24: ಮಂಗಳೂರು ನಗರದ ಅಡ್ಯಾರ್ ಗಾರ್ಡನ್‌ನಲ್ಲಿ ನಡೆದ ಸುನ್ನಿ ಯುವಜನ ಸಂಘ(ಎಸ್ ವೈ ಎಸ್)ನ 30ನೇ ಮಹಾ ಸಮ್ಮೇಳನದಲ್ಲಿ ರಾಜ್ಯ ಸರ್ಕಾರಕ್ಕೆ ಹಕ್ಕೊತ್ತಾಯ ಮಂಡನೆ ಮಾಡಲಾಯಿತು. ರಾಜ್ಯ ವಕ್ಫ್ ಅಧ್ಯಕ್ಷ ಶಾಫಿ ಸಅದಿ ಹಕ್ಕೊತ್ತಾಯ ಮಂಡಿಸಿದರು. ಈ ವೇಳೆ ಹಿಜಾಬ್ ನಿಷೇಧ ಹಿಂಪಡೆಯಲು ತೀವ್ರ ಒತ್ತಾಯ ಕೇಳಿ ಬಂತು.
ಕಣ್ಣೂರಿನ ಅಡ್ಯಾರ್ ಗಾರ್ಡನ್ ನಲ್ಲಿ ನಡೆದ ಸುನ್ನಿ ಯುವಜನ ಸಂಘಟನೆಯ 30ನೇ ಮಹಾ ಸಮ್ಮೇಳನದಲ್ಲಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಭಾಗವಹಿಸಿದ್ದು, ಹಿಜಾಬ್ ನಿಷೇಧ ಹಿಂಪಡೆಯುವಂತೆ ರಾಜ್ಯ ವಕ್ಫ್ ಅಧ್ಯಕ್ಷರು ಹಾಗೂ ಕಾರ್ಯಕರ್ತರು ಮನವಿ ಮಾಡಿದರು.

ರಾಜ್ಯ ಸರ್ಕಾರಕ್ಕೆ ಸುನ್ನಿ ಯುವಜನ ಸಂಘದ ಒತ್ತಾಯವೇನು?
* ಹಿಂದಿನ ಸರ್ಕಾರ ಪದವಿ ಕಾಲೇಜಿನೊಳಗೆ ನಿಷೇಧಿಸಿದ್ದ ಹಿಜಾಬ್ ನಿಯಮವನ್ನು ವಾಪಸ್ ಪಡೆಯಬೇಕು.
* ರಾಜ್ಯದಲ್ಲಿ ಮುಸ್ಲಿಂ ಮೀಸಲಾತಿಯನ್ನು ಶೇ.4ರಿಂದ ಶೇ.7ಕ್ಕೆ ಏರಿಸಬೇಕು. 2ಬಿ ಮೀಸಲಾತಿಯಲ್ಲಿ 4% ವಾಪಾಸ್ ಪಡೆದಿದ್ದ ಹಿಂದಿನ ಸರ್ಕಾರದ ಆದೇಶ ವಾಪಾಸ್ ಪಡೆಯಬೇಕು.
* 2013ರ ಜಾತಿಗಣತಿ ವರದಿ ಬಿಡುಗಡೆ ಮಾಡಲು ಒತ್ತಾಯ.
* ಮಂಗಳೂರು ಸಿಎಎ ಎನ್.ಆರ್.ಸಿ ಗಲಭೆಯಲ್ಲಿ ಗೋಲಿಬಾರ್ ನಲ್ಲಿ ಮೃತಪಟ್ಟ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ಹಾಗೂ ಈ ಸಂದರ್ಭದಲ್ಲಿ ಹಲವರ ಮೇಲಿನ ಹಾಕುರುವ ಕೇಸ್ ವಾಪಾಸ್ ಪಡೆಯಬೇಕು. ಜೊತೆಗೆ ಹುಬ್ಬಳ್ಳಿ, ಡಿ.ಜೆ.ಹಳ್ಳಿ-ಕೆಜೆ ಹಳ್ಳಿ ಗಲಭೆಯಲ್ಲಿ ಜೈಲಿನಲ್ಲಿರುವ ಅಮಾಯಕರ ತಕ್ಷಣ ಬಿಡುಗಡೆಯಾಗಬೇಕು ಎಂದು ಒತ್ತಾಯ.
* ಚಿಕ್ಕಮಗಳೂರು ಬಾಬಾಬುಡನ್ ಗಿರಿ ದರ್ಗಾಕ್ಕೆ ಕಳೆದ ಸರ್ಕಾರ ತಂದಿರುವ ಸಮಿತಿಯಲ್ಲಿ ಏಕಪಕ್ಷೀಯ ನಿರ್ಧಾರ ಆಗಬಾರದು ಮುಸ್ಲಿಮರಿಗೂ ನ್ಯಾಯ ಸಿಗಬೇಕು

* ಮುಸ್ಲಿಮರಿಗೆ ಬಜೆಟ್‌ನಲ್ಲಿ 10 ಶೇಕಡಾ ಅನುದಾನ ನೀಡಬೇಕು ಎಂದು ತಮ್ಮ ಆಗ್ರಹಗಳನ್ನು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಮುಂದಿಟ್ಟಿದ್ದಾರೆ.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಮುಸ್ಲಿಮರು ನನ್ನ ಸಹೋದರರು ಎಂದಾಗ ಹಲವಾರು ಟೀಕೆಗಳು ಬಂತು. ಆದರೆ ಈ ಕನಕಪುರದ ಬಂದೆ ಯಾವುದೇ ಟೀಕೆಗೆ ಹೆದರುವವನಲ್ಲ ಎಂದು ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ಮುಸ್ಲಿಮರ ಪರವಾಗಿ ನಿಂತುಕೊಂಡು ಅವರ ಸಮಸ್ಯೆಗಳನ್ನು ಬಗೆಹರಿಸಿ ರಕ್ಷಣೆ ಕೊಡುವ ಜವಾಬ್ದಾರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಈ ದೇಶದಲ್ಲಿದೆ. ಈ ದೇಶದಲ್ಲಿ ಮುಸ್ಲಿಮರ ಭಾವನೆ ಮೇಲೆ ರಾಜಕೀಯ ಮಾಡಲು ಒಂದು ಸರ್ಕಾರ ಹೊರಟಿದೆ. ಆದರೆ ಕಾಂಗ್ರೆಸ್ ಮುಸ್ಲಿಮರ ಬದುಕಿನ ಮೇಲೆ ಬದಲಾವಣೆ ತರಲು ನಿಮಗೆ ಶಕ್ತಿಯನ್ನು ಕೊಡಲು ಹೊರಟಿದ್ದೇವೆ ಎಂದರು.
ನೀವು ಹಲವಾರು ಹಕ್ಕೊತ್ತಾಯಗಳನ್ನು ಮಾಡಿದ್ದೀರಿ. ಆದರೆ ನೀವು ಒತ್ತಾಯ ಮಾಡಿರೋದು ಡಿ.ಕೆ.ಶಿವಕುಮಾರ್‌ಗೆ ಅಲ್ಲ. ಸರ್ಕಾರವನ್ನು ಒತ್ತಾಯ ಮಾಡಿದ್ದು. ನಿಮ್ಮೊಂದಿಗೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇರುತ್ತದೆ. ಚುನಾವಣೆ ಹತ್ತಿರ ಬರುತ್ತಿದೆ. ಆದರೆ ನಾನು ಅದರ ಬಗ್ಗೆ ಮಾತನಾಡುವುದಿಲ್ಲ. ದೇಶದ ಭವಿಷ್ಯ ನಿಮ್ಮ ಕೈಯಲ್ಲಿದೆ ಎಂದು ಡಿ.ಕೆ.ಶಿವಕುಮಾರ್ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಿಸಲು ಪರೋಕ್ಷವಾಗಿ ತಿಳಿಸಿದರು.












Click it and Unblock the Notifications