ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಸೇನಬ್ಬ ಪ್ರಕರಣ: 'ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸರಿಂದ ದೌರ್ಜನ್ಯ'

|
Google Oneindia Kannada News

ಮಂಗಳೂರು, ಜೂನ್ 05: ಇತ್ತೇಚೆಗೆ ಉಡುಪಿಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ದನದ ವ್ಯಾಪಾರಿ ಹುಸೇನಬ್ಬ ಸಾವು ಪ್ರಕರಣದಲ್ಲಿ ಸುಳ್ಳು ಆರೋಪದ ಮೇಲೆ ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳೂರಿನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, "ಈಗಾಗಲೇ ನಾನು ಉಡುಪಿ ಎಸ್ಪಿ ಹಾಗೂ ಹಿಂದೂ ಸಂಘಟನೆಯ ಕಾರ್ಯಕರ್ತರಲ್ಲಿ ಮಾತನಾಡಿದ್ದೇನೆ. ಈ ಪ್ರಕರಣದಲ್ಲಿ ಸುಳ್ಳು ಆರೋಪದ ಮೇಲೆ ಹಿಂದೂ ಸಂಘಟನೆಯ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಿ ಬಂಧಿಸಿರುವುದು ಸ್ಪಷ್ಟವಾಗಿದೆ," ಎಂದು ಅವರು ಹೇಳಿದರು.

ದನದ ವ್ಯಾಪಾರಿ ಹುಸೈನಬ್ಬ ಪೊಲೀಸ್ ಕಸ್ಟಡಿಯಲ್ಲೇ ಸಾವುದನದ ವ್ಯಾಪಾರಿ ಹುಸೈನಬ್ಬ ಪೊಲೀಸ್ ಕಸ್ಟಡಿಯಲ್ಲೇ ಸಾವು

"ದನಗಳ್ಳತನದ ಮಾಹಿತಿ ಪೊಲೀಸರಿಗೆ ಕೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ಹಿರಿಯಡ್ಕ ಎಸ್ಐ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಆದರೆ ಸಂಘ ಪರಿವಾರಕ್ಕೂ ಈ ಸಾವಿಗೂ ಸಂಬಂಧವಿಲ್. ಈ ಪ್ರಕರಣ ಸಂಬಂಧ ಹಿಂದೂ ಸಂಘಟನೆಯ ಕಾರ್ಯಕರ್ತರ ಮೇಲೆ ಪೊಲೀಸರು ದೌರ್ಜನ್ಯ ಮಾಡುತ್ತಿದ್ದಾರೆ. ಇದರ ಹಿಂದೆ ರಾಜ್ಯದ ಸಮ್ಮಿಶ್ರ ಸರಕಾರದ ಕುಮ್ಮಕ್ಕು ಇದೆ," ಎಂದು ಹೇಳಿದರು.

Stop arresting innocent Hindu activists in Husainabba Case: Shobha Karndlaje

"ಹುಸೇನಬ್ಬ ಅವರು ಮೃತ ಪಟ್ಟಿರುವುದು ಪೊಲೀಸ್ ವಾಹನದಲ್ಲಿ. ಪೊಲೀಸರ ಸಮ್ಮುಖದಲ್ಲಿ ಹಿಂದೂ ಕಾರ್ಯಕರ್ತರು ಹುಸೇನಬ್ಬ ಅವರ ಮೇಲೆ ದಾಳಿ ಮಾಡಲು ಹೇಗೆ ಸಾಧ್ಯ?" ಎಂದು ಅವರು ಪ್ರಶ್ನಿಸಿದರು.

"ಹುಸೇನಬ್ಬ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಪೊಲೀಸ್ ಅಧಿಕಾರಿಗಳನ್ನಷ್ಟೇ ತನಿಖೆಗೆ ಒಳಪಡಿಸಬೇಕು. ನಿರಪರಾಧಿ ಹಿಂದೂ ಕಾರ್ಯಕರ್ತರನ್ನು ಬಂಧಿಸದೆ ಹಿಂಸಿಸದೇ ಅವರನ್ನು ಬಿಡುಗಡೆ ಮಾಡಬೇಕು," ಎಂದು ಅವರು ಒತ್ತಾಯಿಸಿದರು.

Stop arresting innocent Hindu activists in Husainabba Case: Shobha Karndlaje

ಹುಸೇನಬ್ಬ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಹುಸೇನಬ್ಬ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಇದೆ. ಈ ಹಿನ್ನಲೆಯಲ್ಲಿ ಮರಣೋತ್ತರ ಪರೀಕ್ಷೆ ವರದಿ ಬಂದ ಮೇಲೆ ಸತ್ಯಾಸತ್ಯತೆ ಹೊರಬರುತ್ತದೆ ಎಂದು ಹೇಳಿದರು.

ಆರೋಪಿಗಳ ಜೊತೆ ಮತ್ತು ಉಡುಪಿ ಎಸ್ಪಿ ಜೊತೆ ಮಾತನಾಡಿದ್ದು, ಕಾರ್ಯಕರ್ತರ ಬಿಡುಗಡೆಗೆ ಆಗ್ರಹಿಸಿದ್ದೇನೆ. ನಾಳೆ ಉಡುಪಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಹಿಂದೂ ಕಾರ್ಯಕರ್ತರ ಬಂಧನ ವಿರೋಧಿಸಿ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಅವರು ಹೇಳಿದರು.

English summary
Speaking to media persons in Mangaluru, MP Shobha Karandlaje slams state government and police department on Husainabba case. She said Udupi police arresting innocent Hindu Activists in this case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X