ಮಂಗಳೂರು: 'ಶಬರಿಮಲೆ ಸತ್ಯಾನ್ವೇಷಣೆ' ವಿಚಾರ-ವಿಮರ್ಶೆ
ಮಂಗಳೂರು, ಆಗಸ್ಟ್ 07: ಇತ್ತೀಚೆಗೆ ದೇಶದಾದ್ಯಂತ ಚರ್ಚೆ ಹುಟ್ಟುಹಾಕಿದ್ದ ಶಬರಿಮಲೆಗೆ ಮಹಿಳೆಯರ ಪ್ರವೇಶದ ವಿಚಾರದ ಬಗ್ಗೆ ಮಂಗಳೂರಲ್ಲೊಂದು ವಿಚಾರ ಗೋಷ್ಠಿ ಏರ್ಪಡಿಸಲಾಗಿದೆ.
'ಶಬರಿಮಲೆ ಸತ್ಯಾನ್ವೇಶಣೆ' ಹೆಸರಿನ ಈ ಗೋಷ್ಠಿಯಲ್ಲಿ ಪ್ರಖ್ಯಾತ ಲೇಖಕ ರಾಹುಲ್ ಈಶ್ವರ್ ಅವರು ಶಬರಿಮಲೆ ಸುತ್ತಲಿನ ವಿವಾದದ ಬಗ್ಗೆ ಬೆಳಕು ಚೆಲ್ಲಲಿದ್ದಾರೆ.
ಕಾರ್ಯಕ್ರಮವನ್ನು ಸಿಟಿಜನ್ ಕೌನ್ಸಿಲ್ ಮಂಗಳೂರು ವತಿಯಿಂದ ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮವು ಆಗಸ್ಟ್ 11 ರ ಶನಿವಾರ ಸಂಜೆ 6 ಗಂಟೆಗೆ ಸಂಘಿಕೇತನದಲ್ಲಿ ನಡೆಯಲಿದೆ.

ಶಬರಿಮಲೆಯ ಇತಿಹಾಸ, ಮಹಿಳೆಯರ ಪ್ರವೇಶ ನಿರ್ಭಂಧದ ಹಿಂದಿನ ಕಾರಣ, ಕಾನೂನು ಹೊರಾಟ, ಮುಂದಿನ ನಡೆಗಳು ಎಲ್ಲದರ ಬಗ್ಗೆಯೂ ಗೋಷ್ಠಿಯಲ್ಲಿ ಚರ್ಚೆ ಆಗಲಿದೆ.












Click it and Unblock the Notifications