ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಫಿ ಡೇ ಸಿದ್ಧಾರ್ಥ ನಾಪತ್ತೆ ಪ್ರಕರಣ: ತೀವ್ರಗೊಂಡ ಶೋಧ ಕಾರ್ಯ

|
Google Oneindia Kannada News

ಮಂಗಳೂರು, ಜುಲೈ 30: ಮಾಜಿ ಸಿಎಂ ಎಸ್.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ಮಂಗಳೂರಿನ ತೊಕ್ಕೋಟ್ ನೇತ್ರಾವತಿ ಸೇತುವೆ ಮೇಲಿನಿಂದ ನಾಪತ್ತೆಯಾಗಿರುವ ವಿಚಾರ ನಿಗೂಡವಾಗಿದೆ .

ಅವರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು ತಡ ರಾತ್ರಿಯಿಂದ ನದಿಯಲ್ಲಿ ಶೋಧಕಾರ್ಯ ಮುಂದುವರೆದಿದೆ.

ಎಸ್ಎಂ ಕೃಷ್ಣ ಅಳಿಯ, ಕಾಫಿ ಡೇ ಸ್ಥಾಪಕ ಸಿದ್ದಾರ್ಥ ನಾಪತ್ತೆ ಎಸ್ಎಂ ಕೃಷ್ಣ ಅಳಿಯ, ಕಾಫಿ ಡೇ ಸ್ಥಾಪಕ ಸಿದ್ದಾರ್ಥ ನಾಪತ್ತೆ

ಮಂಗಳೂರು ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್‌, ಡಿಸಿಪಿಗಳಾದ ಹನುಮಂತರಾಯ, ಲಕ್ಷ್ಮೀ ಗಣೇಶ್, ಎಸಿಪಿ ಶ್ರೀನಿವಾಸ್ ಸಿಬ್ಬಂದಿ, ಅಗ್ನಿಶಾಮಕದಳಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಹುಡುಕಾಟ ನಡೆಸಿದ್ದಾರೆ.

SM Krishna s Son-in-law Siddhartha Untraceable Cops Launch Probe

ಡಾಗ್ ಸ್ಕ್ವಾಡ್ ಸೇತುವೆಯುದ್ದಕ್ಕೂ ಹುಡುಕಾಟ ನಡೆಸಿಕೊಂಡು ಬಂದು ಸೇತುವೆ ಮಧ್ಯಭಾಗದಲ್ಲಿ ನದಿಯೆಡೆ ಮುಖಮಾಡಿ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ತಡ ರಾತ್ರಿಯಿಂದ ನೇತ್ರವತಿ ನದಿಯಲ್ಲಿ ಬೋಟ್ ಗಳನ್ನು ಬಳಸಿ ಶೋಧ ನಡೆಸಲಾಗುತ್ತಿದೆ.

ನದಿಯಲ್ಲಿ ನೀರಿನ ಸೆಳೆತ ಹೆಚ್ಚಾಗಿರುವುದರಿಂದ ಶೋಧಕಾರ್ಯಕ್ಕೆ ತೊಡಕಾಗಿದೆ. ಬೋಟ್‌ಗಳ ಮೂಲಕ ಕಾರ್ಯಾಚರಣೆ ಮುಂದುವರೆದಿದೆ. ಒಂದು ವೇಳೆ ನದಿಗೆ ಹಾರಿದ್ದಲ್ಲಿ ಅಳಿವೆ ಬಾಗಿಲು ಅಥವಾ ದಡದ ಬಳಿ ಶವ ದೊರೆಯುವ ಬಗ್ಗೆ ಪೊಲೀಸರ ಅಂದಾಜು ವ್ಯಕ್ತಪಡಿಸಿದ್ದಾರೆ.

ಒಂದು ಮಾಹಿತಿ ಪ್ರಕಾರ, ಸಕಲೇಶಪುರದತ್ತ ತೆರಳುತ್ತಿದ್ದ ಸಿದ್ಧಾರ್, ಕಾರು ಚಾಲಕನಲ್ಲಿ ಏಕಾಏಕಿ ಮಂಗಳೂರು ಪಂಪ್‌ವೆಲ್ ಕಡೆ ತಿರುಗಿಸುವಂತೆ ಹೇಳಿದ್ದರು.ಪಂಪ್‌ವೆಲ್ ತಲುಪಿದ ಬಳಿಕ ನೇತ್ರಾವತಿ ಸೇತುವೆ ಬಳಿ ತೆರಳುವಂತೆ ತಿಳಿಸಿದ್ದರು.

SM Krishna s Son-in-law Siddhartha Untraceable Cops Launch Probe

ರಾತ್ರಿ ಸುಮಾರು 7.30ರಿಂದ 8ರ ನಡುವೆ ಸ್ಥಳಕ್ಕೆ ತೆರಳಿದ್ದು, ಸೇತುವೆ ತುದಿಯಲ್ಲಿ ಡ್ರೈವರ್‌ಗೆ ಕಾರು ನಿಲ್ಲಿಸಲು ಸೂಚಿಸಿದ್ದರು. ಅಲ್ಲಿ ಕಾರಿನಿಂದ ಕೆಳಗಿಳಿದಿದ್ದು, ನಂತರ ಮಂಗಳೂರಿನಿಂದ ತೊಕ್ಕೋಟ್ ಕಡೆ ಸಾಗುವ ಸೇತುವೆ ಒಂದು ಭಾಗದಲ್ಲಿ ಉದ್ದಕ್ಕೂ ಮೊಬೈಲ್‌ನಲ್ಲಿ ಮಾತಾಡಿಕೊಂಡು ನಡೆದಿದ್ದರು.

ಆ ಬಳಿಕ ಸೇತುವೆ ಮತ್ತೊಂದು ಭಾಗ ತೊಕ್ಕೋಟ್‌ನಿಂದ ಮಂಗಳೂರು ಕಡೆ ಬರೋ ದಾರಿಯಲ್ಲಿ ಸೇತುವೆಯ ಮಧ್ಯಭಾಗದಿಂದಲೇ ನಾಪತ್ತೆಯಾಗಿದ್ದಾರೆ. ಘಟನೆಯ ವೇಳೆ ಮಳೆ ಸುರಿಯುತ್ತಿದ್ದದ್ದರಿಂದ ಸಿದ್ದಾರ್ಥ ಉದ್ದಕ್ಕೆ ಮಾತಾಡಿಕೊಂಡು ಯಾವ ಕಡೆ ತೆರಳಿದ್ದಾರೆಂದು ಅವರ ಇನ್ನೋವಾ ಚಾಲಕನಿಗೂ ಮಾಹಿತಿ ದೊರೆತಿರಲಿಲ್ಲ.

English summary
VG Siddhartha, the founder of India's largest Coffee chain Cafe Coffee Day who also owns Asia's single-largest coffee estate, is reportedly missing since Monday evening. Cops Launch Probe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X