ಸಹಕಾರಿ ಭೂಷಣ ಬಿರುದಿಗೆ ಭಾಜನರಾದ ಡಾ. ರಾಜೇಂದ್ರ ಕುಮಾರ್

ಮಂಗಳೂರು ಜನವರಿ 19: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷರಾದ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರಿಗೆ ಸಹಕಾರಿ ಭೂಷಣ ಬಿರುದು ನೀಡಿ ಸನ್ಮಾನಿಸಲಾಯಿತು.

ಮಂಗಳೂರಿನಲ್ಲಿ ಶನಿವಾರ ನಡೆದ ಬ್ಯಾಂಕ್‌ನ ರಜತಮಹೋತ್ಸವ ಕಾರ್ಯಕ್ರಮದಲ್ಲಿ ಬಿರುದು ನೀಡಲಾಯಿತು.ಕಾರ್ಯಕ್ರಮದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ‌ ಡಿ ವೀರೇಂದ್ರ ಹೆಗ್ಗಡೆ ಉಧ್ಘಾಟಿಸಿದ್ದು,ಕೇಂದ್ರ ಸಚಿವ ಡಿವಿ ಸದಾನಂದ ಗೌಡ,ರಾಜ್ಯ ಸಹಕಾರ ಅಚಿವ ಬಂಡೆಪ್ಪ ಕಾಶೆಂಪುರ್ ಸೇರಿದಂತೆ ವಿವಿಧ ಪಕ್ಷಗಳ ನಾಯಕರು ಸಹಕಾರಿ ಧುರೀಣರು ಭಾಗವಹಿಸಿದ್ದರು. ರಾಜ್ಯದ ವಿವಿಧೆಡೆಯಿಂದ ಸಮಾವೇಶಕ್ಕೆ ಜನ ಆಗಮಿಸಿದ್ದು,ಕೇಂದ್ರ ಮೈದಾನ ತುಂಬಿ ಹೋಗಿತ್ತು.

ಸಮಾವೇಶ ಉದ್ಘಾಟಿಸಿ ಮಾತನಾಡಿದ ಧರ್ಮಸ್ಥಳ ಧರ್ಮಾಧಿಕಾರಿ ಡಾ‌ ಡಿ ವೀರೇಂದ್ರ ಹೆಗ್ಗಡೆ ಡಾ ಎಂ ಎನ್ ,ರಾಜೇಂದ್ರ ಕುಮಾರ್ ಸಾಧನೆಯನ್ನು ಕೊಂಡಾಡಿದರು.ಇನ್ನು ಸಮಾವೇಶ ದಲ್ಲಿ ಮಾರ್ಮಿಕವಾಗಿ ಮಾತನಾಡಿದ ಕೇಂದ್ರ ಸಚಿವ ಡಿವಿಸದಾ‌ನಂದ ಗೌಡ,ರಾಜಕಾರಣ,ರಾಜಕಾರಣಿಗಳನ್ನು ಜನ ನಂಬುದಿಲ್ಲ,ಮತ ಗಳಿಸಿ ಜಯಗಳಿಸಿದ ಬಳಿಕ ಜನರ ಕೈಗೆ ಜನಪ್ರತಿನಿಧಿಗಳು ಮತ್ತೆ ಸಿಗಲ್ಲ.ಅದಕ್ಕೆ ಗೆದ್ದ ತಕ್ಷಣ ಜನ ಸನ್ಮಾನ ಮಾಡುತ್ತಾರೆ‌.

Silver jubilee celebration in SCDCC Bank mangaluru

ಆದರೆ ಸಹಕಾರ ಕ್ಷೇತ್ರದ ರಾಜೇಂದ್ರ ಕುಮಾರ್ ಗೆ ಜನ 25 ವರ್ಷದ ಸೇವೆ ಬಳಿಕ ಸನ್ಮಾನಿಸಿದ್ದಾರೆ ಎಂದು ಹೇಳಿದರು. ಸಮಾವೇಶದಲ್ಲಿ ಸಹಕಾರಿ ಭೂಷಣ ಬಿರುದು ಸ್ವೀಕರಿಸಿ ಮಾತನಾಡಿದ ಡಾ.ಎಂ‌ಎನ್ ರಾಜೇಂದ್ರ ಕುಮಾರ್, ಸಹಕಾರಿ ಸಂಸ್ಥೆಯಲ್ಲಿ ಸಾಧನೆಗೆ ಎಲ್ಲರ ಆಶೀರ್ವಾದ ಕಾರಣ.ಮುಂದೆ ಯೋಜನೆ ವಿಸ್ತರಿಸುವ ಯೋಚನೆಗಳಿವೆ ಎಂದು ಆಶಾವಾದ ವ್ಯಕ್ತಪಡಿಸಿದರು.

Silver jubilee celebration in SCDCC Bank mangaluru

ಸಮಾವೇಶದ ಪ್ರಯುಕ್ತದ ಮೆರವಣಿಗೆಗೆ ನಗರದ ಕೊಡಿಯಾಲ್ ಬೈಲ್ ನ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಕೇಂದ್ರ ಕಚೇರಿ ಎದುರು ಕೇಂದ್ರ ಸಚಿವ ಸದಾನಂದ ಗೌಡ ಚಾನಲೆ ನೀಡಿದರು. ಈ ಸಂದರ್ಭ ಸಂಸದ ನಳಿನ್ ಕುಮಾರ್ ಕಟೀಲ್, ಅಭಿನಂದನ ಸಮಿತಿ ಅಧ್ಯಕ್ಷ ಐಕಳಬಾವ ಡಾ. ದೇವಿಪ್ರಸಾದ್‌, ಸಮಿತಿಯ ಪ್ರಮುಖರಾದ ರಾಜು ಪೂಜಾರಿ, ಶಶಿಕಿರಣ್‌, ಸದಾಶಿವ ಉಳ್ಳಾಲ್‌, ಮೋನಪ್ಪ ಶೆಟ್ಟಿ ಎಕ್ಕಾರು, ಸುನಿಲ್‌ ಕುಮಾರ್‌ ಬಜಗೋಳಿ, ದೇವರಾಜ್‌ ಉಪಸ್ಥಿತರಿದ್ದರು. ಬ್ಯಾಂಕ್‌ ಆವರಣದಿಂದ ಮೆರವಣಿಗೆ ಹೊರಟು ರಮಣ ಪೈ ಹಾಲ್‌ನಿಂದ ರಸ್ತೆಯಿಂದ ಹಂಪನ್‌ಕಟ್ಟೆ- ಕ್ಲಾಕ್‌ ಟವರ್‌- ಎ.ಬಿ. ಶೆಟ್ಟಿ ಸರ್ಕಲ್‌ ಮೂಲಕ ಮೈದಾನ ತಲುಪಿತು .

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+