Dharmasthala: ಭಕ್ತಾಧಿಗಳ ಗಮನಕ್ಕೆ, ಧರ್ಮಸ್ಥಳದ ಸಾಮಾನ್ಯ ಸೇವೆಗಳ ದರಪಟ್ಟಿ ಇಲ್ಲಿದೆ
ಮಂಗಳೂರು, ಮಾರ್ಚ್ 12: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನೇತ್ರಾವತಿ ತಟದಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಾಲಯವು ಕರ್ನಾಟಕದಲ್ಲಿ ಅತಿ ಹೆಚ್ಚು ಶಿವ ಭಕ್ತರು ಭೇಟಿ ನೀಡುವ ದೇವಾಲಯಗಳಲ್ಲಿ ಒಂದು. ಪ್ರತಿನಿತ್ಯ ಲಕ್ಷಾಂತರ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ.
ಕರ್ನಾಟಕದ ಮೂಲೆ ಮೂಲೆಯಿಂದ ಮಾತ್ರವಲ್ಲದೇ ವಿವಿಧ ರಾಜ್ಯಗಳಿಂದಲೂ ಶಿವನ ಭಕ್ತರು ಈ ದೇವಾಲಯಕ್ಕೆ ಭೇಟಿ ಮಂಜುನಾಥ ಸ್ವಾಮಿಯ ದರ್ಶನ ಪಡೆಯುತ್ತಾರೆ. ಧರ್ಮಸ್ಥಳದ ಮುಖ್ಯ ದೇಗುಲದಲ್ಲಿ ಶಿವನನ್ನು ಮಂಜುನಾಥನ ರೂಪದಲ್ಲಿ ಪೂಜಿಸಲಾಗುತ್ತದೆ. ಹಾಗೂ ಈ ದೇವಸ್ಥಾನದಲ್ಲಿ ಮಂಜುನಾಥ ಸ್ವಾಮಿಯೊಂದಿಗೆ ಅಮ್ಮನವರು, ಚಂದ್ರನಾಥ ಮತ್ತು ಧರ್ಮ ದೈವಗಳನ್ನು ಆರಾಧಿಸಲಾಗುತ್ತದೆ.

ಈ ಕ್ಷೇತ್ರಕ್ಕೆ ಭೇಟಿ ನೀಡಿದರೆ ಧನಾತ್ಮಕ ಶಕ್ತಿ ಪ್ರಾಪ್ತಿಯಾಗುತ್ತದೆ ಎನ್ನುವುದು ಭಕ್ತರ ನಂಬಿಕೆ. ಹೀಗಾಗಿ ಬಹುತೇಕರು ಕುಟುಂಬ ಸಮೇತರಾಗಿಯೇ ಇಲ್ಲಿಗೆ ಭೇಟಿ ನೀಡುತ್ತಾರೆ. ಅನ್ನಪ್ರಸಾದ ಸೇರಿಂದಂತೆ ಭಕ್ತರಿಗೆ ಅನುಕೂಲವಾಗುವ ಎಲ್ಲಾ ರೀತಿಯ ವ್ಯವಸ್ಥೆ ಕೂಡ ದೇವಾಲಯದಲ್ಲಿದೆ. ಜೊತೆಗೆ ಭಕ್ತರು ದೇವರಿಗೆ ವಿವಿಧ ಸೇವೆಗಳನ್ನು ಕೂಡ ಸಲ್ಲಿಸಬಹುದಾಗಿದೆ.
ಇನ್ನೇನು ಬೇಸಿಗೆ ರಜೆ ಸಮೀಪಿಸುತ್ತಿದ್ದು, ಧರ್ಮಸ್ಥಳಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ. ಹೀಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಬೇಕು, ದೇವರಿಗೆ ವಿಶೇಷ ಸೇವೆಗಳನ್ನು ಸಲ್ಲಿಸಬೇಕು ಎಂದುಕೊಂಡವರಿಗೆ ಉಪಯುಕ್ತವಾದ ಮಾಹಿತಿ ಇಲ್ಲಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ದೇವರಿಗೆ ಅರ್ಪಿಸುವ ಸಾಮಾನ್ಯ ಸೇವೆಗಳು ಹಾಗೂ ಅವುಗಳ ದರದ ವಿವರ ಈ ಕೆಳಗಿನಂತಿದೆ.
ಶ್ರೀ ಮಂಜುನಾಥ ಸ್ವಾಮಿಯ ಸೇವೆಗಳು
ಶತರುದ್ರಾಭಿಷೇಕ-500 ರೂಪಾಯಿ
ಪಂಚಾಮೃತ ಅಭಿಷೇಕ, ಏಕಾದಶ ರುದ್ರಾಭಿಷೇಕ, ಸಹಿತ ಬ್ರಹ್ಮಾದಾಯ, ಬ್ರಹ್ಮಾರ್ಪಣೆ ಕೂಡಾ-250 ರೂಪಾಯಿ
ಶ್ರೀ ಪ್ರಸಾದ-70 ರೂಪಾಯಿ
ಬಿಲ್ವಪತ್ರಾರ್ಚನೆ- 10 ರೂಪಾಯಿ
ತೀರ್ಥ ಬಾಟ್ಲಿ- 20 ರೂಪಾಯಿ
ಕರ್ಪೂರಾರತಿ- 2 ರೂಪಾಯಿ

ಶ್ರೀ ಅಮ್ಮನವರ ಸೇವೆಗಳು
ಪವಮಾನಾಭಿಷೇಕ-500 ರೂಪಾಯಿ
ಹೂವಿನ ಪೂಜೆ- 300 ರೂಪಾಯಿ
ಪಂಚಾಮೃತ ಅಭಿಷೇಕ-150 ರೂಪಾಯಿ
ಕುಂಕುಮಾರ್ಚನೆ-20 ರೂಪಾಯಿ
ಕರ್ಪೂರಾರತಿ-2 ರೂಪಾಯಿ
ಶ್ರೀ ಗಣಪತಿ ದೇವರ ಸೇವೆಗಳು
ಪಂಚಾಮೃತ ಅಭಿಷೇಕ-150 ರೂಪಾಯಿ
ಪಂಚಕಜ್ಜಾಯ-20 ರೂಪಾಯಿ
ಅಪ್ಪ ನೈವೇದ್ಯ-20 ರೂಪಾಯಿ
ಮಂಗಳಾರತಿ-2 ರೂಪಾಯಿ
ಶ್ರೀ ಅಣ್ಣಪ್ಪ ಸ್ವಾಮಿಯ ಸೇವೆಗಳು
ವಿಶೇಷ ಪೂಜೆ ಬಲಿವಾಡ ಸಹಿತ-100 ರೂಪಾಯಿ
ಬೆಲ್ಲಕ್ಕಾ ನೈವೇದ್ಯ-20 ರೂಪಾಯಿ
ಕರ್ಪೂರಾರತಿ-2 ರೂಪಾಯಿ












Click it and Unblock the Notifications