ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಾಹ್ ಎನಿಸುವ 'ಇಂಥ' ಸ್ಕೂಬಾ ಡೈವಿಂಗ್ ಪ್ರವಾಸೋದ್ಯಮ ಮಂಗ್ಳೂರಲ್ಲಿ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಡಿಸೆಂಬರ್ 1: ಸ್ಕೂಬಾ ಡೈವಿಂಗ್ ಬಗ್ಗೆ ನಿಮಗೆ ಗೊತ್ತಿರಬಹುದು. ಆದರೆ ಇದು ಶಿಪ್ ರೆಕ್ ಸ್ಕೂಬಾ ಡೈವಿಂಗ್. ಅಲ್ಲಿಗೆ ಸಾಂಪ್ರದಾಯಿಕ ಪ್ರವಾಸೋದ್ಯಮ ಅಂಶಗಳಾದ ಸಮುದ್ರ ತೀರ ವೀಕ್ಷಣೆ, ಹೋಮ್‌ಸ್ಟೇ, ರೆಸಾರ್ಟ್, ದ್ವೀಪ ಭೇಟಿ, ಟ್ರೆಕ್ಕಿಂಗ್ ಅಷ್ಟಕ್ಕೇ ಸೀಮಿತವಾಗದೆ ಹೊಸ ರೀತಿಯ ಸಾಹಸ ಪ್ರವಾಸೋದ್ಯಮಕ್ಕೆ ರಾಜ್ಯದ ಕರಾವಳಿ ತೆರೆದುಕೊಳ್ಳುತ್ತಿದೆ.

ರಾಜ್ಯದ ಕರಾವಳಿಗೆ ಸ್ಕೂಬಾ ಡೈವಿಂಗ್ ಪ್ರವಾಸೋದ್ಯಮ ಕಾಲಿರಿಸಿದೆ. ಸಮುದ್ರದಲ್ಲಿ ಮುಳುಗಿ ತಳ ಸೇರಿರುವ ಹಡಗುಗಳನ್ನು ನೀರಿನೊಳಗೆ ಮುಳುಗಿ, ನೋಡಿಕೊಂಡು ಬರಲು ಅವಕಾಶ ಇರುವಂಥ ಪ್ರವಾಸೋದ್ಯಮಕ್ಕೆ ಕರ್ನಾಟಕದ ಕರಾವಳಿಯಲ್ಲಿ ಚಾಲನೆ ನೀಡಲು ನಿರ್ಧರಿಸಲಾಗಿದೆ.

ಡಿಸ್ನಿ ಲ್ಯಾಂಡ್ ಮಾದರಿಯಲ್ಲಿ ಹಾಸನದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಡಿಸ್ನಿ ಲ್ಯಾಂಡ್ ಮಾದರಿಯಲ್ಲಿ ಹಾಸನದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ

ಮಂಗಳೂರಿನಲ್ಲಿ ಈ ರೀತಿಯ ಪ್ರಯತ್ನಗಳು ಕಾರ್ಯಗತ ಹಂತದಲ್ಲಿದೆ. ಮಂಗಳೂರಿನ ಪ್ರಸಿದ್ಧ ಪಣಂಬೂರು ಕಡಲತೀರದಿಂದ 15 ನಾಟಿಕಲ್ ಮೈಲ್ ದೂರದಲ್ಲಿ ಮುಳುಗಿರುವ ಎಂ.ವಿ. ಓಷನ್ ಬ್ಲೆಸಿಂಗ್ ಎಂಬ ಹಡಗನ್ನು ಸ್ಕೂಬಾ ಡೈವಿಂಗ್ ನಡೆಸಿ, ನೋಡಲು ಯೋಜನೆ ಸಿದ್ಧ ಪಡಿಸಲಾಗುತ್ತಿದೆ. ವಿಶ್ವದ ಇತರ ದೇಶಗಳಲ್ಲಿ ಇಂತಹ ಯೋಜನೆ ಗಳು ಈಗಾಗಲೇ ಕಾರ್ಯ ರೂಪದಲ್ಲಿವೆ. ಮತ್ತು ಯಶಸ್ಸು ಕಂಡಿವೆ.

ಸರಕು ಹಡಗು 100 ಅಡಿ ಸಮುದ್ರದಾಳದಲ್ಲಿದೆ

ಸರಕು ಹಡಗು 100 ಅಡಿ ಸಮುದ್ರದಾಳದಲ್ಲಿದೆ

ಉಡುಪಿಯ ಶೀರೂರು ಹಾಗೂ ಉತ್ತರ ಕನ್ನಡದ ಭಟ್ಕಳ ಮಧ್ಯೆ ಕೆಲ ದಶಕಗಳ ಹಿಂದೆ ಮುಳುಗಿದ ಸರಕು ಹಡಗು 100 ಅಡಿ ಸಮುದ್ರದಾಳದಲ್ಲಿದೆ. ಇಲ್ಲಿ ಕರ್ನಾಟಕ ರೆಕ್ ಅಂಡ್ ಸ್ಕೂಬಾ ಡೈವಿಂಗ್ ಸಂಸ್ಥೆ ಹಡಗು ಅವಶೇಷ ಡೈವಿಂಗ್ ಶುರು ಮಾಡಲಿದೆ. ಉಡುಪಿಯಲ್ಲಿ ಈ ಶಿಪ್‌ ರೆಕ್ ಸ್ಕೂಬಾ ಡೈವಿಂಗ್ ಶುರು ಮಾಡುವ ಬಗ್ಗೆ ಜಿಲ್ಲಾಡಳಿತ ಕೂಡ ಪ್ರೋತ್ಸಾಹ ನೀಡಿದೆ. ಸಮುದ್ರದ ತಳದಲ್ಲಿ ಅಪರೂಪದ ಜಲಚರಗಳನ್ನು ನೋಡುವ ಅವಕಾಶ ಕೂಡ ಸಾಹಸಿಗಳಿಗೆ ಸಿಗಲಿದೆ.

ವಿಶೇಷ ದಿರಿಸು ಹಾಗೂ ಆಕ್ಸಿಜನ್ ಸಹಾಯ

ವಿಶೇಷ ದಿರಿಸು ಹಾಗೂ ಆಕ್ಸಿಜನ್ ಸಹಾಯ

ಸ್ಕೂಬಾ ಡೈವಿಂಗ್ ದಿರಿಸು ಹಾಕಿಕೊಂಡು, ಆಕ್ಸಿಜನ್ ಸಹಿತ ಸಮುದ್ರಕ್ಕೆ ಜಿಗಿಯುವ ಸಾಹಸಿಗಳು ಹಡಗಿನ ಮೇಲೆ ಇಳಿದು ಅದನ್ನು ನೋಡಿಕೊಂಡು ಬರುವ ಅವಕಾಶ ದೊರೆಯಲಿದೆ. ಹಡಗನ್ನು ನೋಡುವುದಷ್ಟೇ ಅಲ್ಲ, ಈ ಹಡಗು ಹಲವು ವರ್ಷಗಳಿಂದ ಮುಳುಗಿರುವ ಕಾರಣ ಅಲ್ಲಿ ಅಪರೂಪದ ಮತ್ಸ್ಯ್ ಲೋಕವೇ ತೆರೆದುಕೊಳ್ಳಲಿದೆ.

ಅನುಭವ ಇರಬೇಕು, ಜತೆಗೆ ತಜ್ಞರು ಇರುತ್ತಾರೆ

ಅನುಭವ ಇರಬೇಕು, ಜತೆಗೆ ತಜ್ಞರು ಇರುತ್ತಾರೆ

ಕಡಲಾಳದಲ್ಲಿ ಹಡಗಿನ ಮೇಲೆ ಬೆಳೆದಿರುವ ಹವಳ, ಅನೇಕ ರೀತಿಯ ಜಲಸಸ್ಯಗಳು ಸೇರಿದಂತೆ ಅದ್ಭುತಗಳ ದರ್ಶನ ಆಗಲಿದೆ. ಅವುಗಳನ್ನೆಲ್ಲ ಹತ್ತಿರದಿಂದ ವೀಕ್ಷಿಸಿ ಬರುವುದಕ್ಕೆ ಈ ಸ್ಕೂಬಾ ಡೈವಿಂಗ್ ಪ್ರವಾಸೋದ್ಯಮ ಅವಕಾಶ ನೀಡಲಿದೆ. ಸಾಮಾನ್ಯ ಡೈವಿಂಗ್ ಗೆ ಈಜು ಗೊತ್ತಿರಬೇಕಿಲ್ಲ, ಆದರೆ ಹಡಗು ಅವಶೇಷ ವೀಕ್ಷಣಾ ಡೈವಿಂಗ್ ಮಾಡಲು ಅನುಭವ ಬೇಕು. ಜತೆಯಲ್ಲಿ ತಜ್ಞರೂ ಇರುತ್ತಾರೆ.

ದುರಂತಕ್ಕೆ ಈಡಾದ ಹಡಗುಗಳು ಸಾಕಷ್ಟಿವೆ

ದುರಂತಕ್ಕೆ ಈಡಾದ ಹಡಗುಗಳು ಸಾಕಷ್ಟಿವೆ

ಶೀರೂರಿನಲ್ಲಿ ಚೀನಾ ಮೂಲದ ಹಡಗು 1980ರ ದಶಕದಲ್ಲಿ ಹವಾಮಾನ ವೈಪರೀತ್ಯದಿಂದ ಮುಳುಗಿತ್ತು. 120 ಮೀಟರ್ ಉದ್ದದ ಈ ಹಡಗು ಸುಮಾರು 38 ಮೀಟರ್ ಆಳದಲ್ಲಿದೆ. ಅಲ್ಲದೇ ಮಂಗಳೂರಿನ ತಣ್ಣಿರು ಬಾವಿ ಬಳಿ 15 ಮೀಟರ್ ಆಳದಲ್ಲಿ ಮುಳುಗಿರುವ ಓಷನ್ ಬ್ಲೆಸಿಂಗ್ ಹಡಗಿನ ಮೇಲ್ಭಾಗ, ಸಮುದ್ರದ ಮೇಲಿನಿಂದ 15 ಅಡಿಯಷ್ಟು ತಳಭಾಗದಲ್ಲಿ ಕಾಣುತ್ತದೆ. ಇದನ್ನೇ ಶಿಪ್ ರೆಕ್ ಡೈವಿಂಗ್ ಪ್ರವಾಸೋದ್ಯಮಕ್ಕೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ.

English summary
Ship wreck scuba diving adventurous tourism activity to be start in Mangaluru soon by Karnataka tourism department.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X