ಸಿದ್ದರಾಮಯ್ಯ ಶನಿ ಎಂದು ಜರಿದ ಜನಾರ್ದನ ಪೂಜಾರಿ
Recommended Video
ಮಂಗಳೂರು, ನವೆಂಬರ್ 5: ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ ಪೂಜಾರಿ ವಾಗ್ದಾಳಿ ನಡೆಸಿದ್ದಾರೆ. "ಸಿದ್ದರಾಮಯ್ಯ ಕಾಂಗ್ರೆಸ್ ಗೆ ಒಬ್ಬ ಶನಿ" ಎಂದು ಜರಿದಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, "ಸಿದ್ದರಾಮಯ್ಯನವರು ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಶನಿ ಇದ್ದಂತೆ. ಅವರು ಈ ಪಕ್ಷವನ್ನು ಮುಗಿಸಿಯೇ ಹೋಗುವುದು, ಇದು ದೇವರಿಗೂ ಗೊತ್ತಿದೆ, ಅವರಿಗೆ ಹೆಚ್ಚು ಅಧಿಕಾರ ಕೊಡೋದು ತಪ್ಪು, ಆ ತಪ್ಪನ್ನು ಮತ್ತೆ ಮತ್ತೆ ಮಾಡಬೇಡಿ ಅಂತ ಹೈಕಮಾಂಡ್ ಗೂ ಹೇಳುತ್ತೇನೆ. ಹೈಕಮಾಂಡ್ ದೊಡ್ಡ ತಪ್ಪು ಮಾಡುತ್ತಿದೆ" ಎಂದು ಆಕ್ರೋಶಗೊಂಡರು.
ಉಪಚುನಾವಣೆ ಕುರಿತು ಮಾತನಾಡಿದ ಅವರು, "ಉಪಚುನಾವಣೆಯಲ್ಲಿ ಏನಾಗುವುದೋ ಕಾದು ನೋಡಬೇಕಿದೆ. ಇವರು ಬದುಕುವ ಲಕ್ಷಣ ಕಾಣುತ್ತಿಲ್ಲ, ಸಿದ್ದರಾಮಯ್ಯ ಇಷ್ಟರವರೆಗೆ ಎಲ್ಲಿದ್ದರು? ಈಗ ಅವರಿಗೆ ಮಂಗಳೂರಿನಲ್ಲಿ ಕಾಂಗ್ರೆಸ್ ಇದೆ ಅಂತ ಗೊತ್ತಾಗಿದೆಯಾ? ಅವರು ಮಂಗಳೂರಿಗೆ ಬಂದು ಮಾತನಾಡಲಿ, ಮರುದಿನ ಅದಕ್ಕೆ ಉತ್ತರ ಕೊಡುತ್ತೇನೆ" ಎಂದು ಸವಾಲು ಹಾಕಿದರು.

"ದ.ಕ ಮತ್ತು ಉಡುಪಿ ವಿಧಾನಸಭೆ, ಲೋಕಸಭೆ ಕಾಂಗ್ರೆಸ್ ಸೋಲಿಗೆ ಹಿರಿಯರ ಕಡೆಗಣನೆ ಕಾರಣ, ಈ ಮಾತು ನೂರಕ್ಕೆ ನೂರು ಸತ್ಯ, ಇದರಲ್ಲಿ ಸ್ವಲ್ಪವೂ ಸುಳ್ಳಿಲ್ಲ" ಎಂದು ಘಂಟಾಘೋಷವಾಗಿ ನುಡಿದರು.












Click it and Unblock the Notifications