ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಡಲ್ಕೊರೆತಕ್ಕೆ ಸಮಸ್ಯೆ ಬಗ್ಗೆ ಬರೆದಿದ್ದ ಪತ್ರಕ್ಕೆ ಪ್ರಧಾನಿ ಕಚೇರಿಯಿಂದ ಸ್ಪಂದನೆ

|
Google Oneindia Kannada News

ಮಂಗಳೂರು, ಜುಲೈ 19: ಮಳೆಗಾಲ ಬಂತೆಂದರೆ ಕರಾವಳಿಗೆ ಕಾಡುವ ದೊಡ್ಡ ಸಮಸ್ಯೆಯೆಂದರೆ ಕಡಲ್ಕೊರೆತ . ಒಂದೂವರೆ ದಶಕಗಳಿಂದೀಚೆಗೆ ಇದು ವಿಪರೀತವಾಗಿ ಕಾಡುತ್ತಿದ್ದು, ಕಡಲತಡಿಯ ಜನಜೀವನವನ್ನು ಹೈರಾಣಾಗಿಸಿದೆ.

ಕರ್ನಾಟಕ ಕರಾವಳಿಯಲ್ಲಿ ಎಡೆಬಿಡದೆ ಸುರಿಯುತ್ತಿದೆ ಭಾರೀ ಮಳೆಕರ್ನಾಟಕ ಕರಾವಳಿಯಲ್ಲಿ ಎಡೆಬಿಡದೆ ಸುರಿಯುತ್ತಿದೆ ಭಾರೀ ಮಳೆ

ಈ ಸಮಸ್ಯೆಯ ಬಗ್ಗೆ ಉಚ್ಚಿಲದ ಯುವಕರೊಬ್ಬರು ಪ್ರಧಾನಿ ಕಾರ್ಯಾಲಯಕ್ಕೆ ಪತ್ರ ಬರೆದಿದ್ದು, ಅದಕ್ಕೆ ಸ್ಪಂದಿಸಿದ ಪಿಎಂ ಕಚೇರಿ ಸೂಕ್ತವಾಗಿ ಸ್ಪಂದಿಸುವಂತೆ ರಾಜ್ಯ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದೆ.
ಸೋಮೇಶ್ವರ ಉಚ್ಚಿಲ ಕೋಟೆ ನಿವಾಸಿ ರೂಪೇಶ್ ಎನ್. ಅವರು ಎಕೌಂಟಂಟ್ ಉದ್ಯೋಗ ಮಾಡಿಕೊಂಡಿದ್ದು, ಜುಲೈ 4ರಂದು ಪ್ರಧಾನಿ ಕಾರ್ಯಾಲಯಕ್ಕೆ ಪತ್ರ ಬರೆದಿದ್ದಾರೆ.

Sea erosion fear Mangaluru youth writes letter to PMO receives reply

ಪತ್ರದಲ್ಲಿ, "ಹಲವು ವರ್ಷಗಳಿಂದ ಕಡಲ್ಕೊರೆತ ಕರಾವಳಿ ಜನರನ್ನು ಕಾಡುತ್ತಿದೆ. 5 ವರ್ಷಗಳಿಂದ ಈ ಕಡಲ್ಕೊರೆತ ಉಚ್ಚಿಲ ಸುತ್ತಮುತ್ತಲ ಪ್ರದೇಶದಲ್ಲಿ ವಿಪರೀತವಾಗಿದ್ದು, ಸಮುದ್ರ ತೀರದ ಜಾಗಗಳು ಕಡಲಿಗೆ ಅಪೋಶನವಾಗುತ್ತಿದೆ. ಕೊರೆತವನ್ನು ತಡೆಗಟ್ಟುವ ನೆಪದಲ್ಲಿ ಕೋಟ್ಯಂತರ ರೂ. ಹಣವನ್ನು ವ್ಯಯಿಸಿ ತಡೆಗೋಡೆ ನಿರ್ಮಿಸಲಾಗುತ್ತಿದೆ. ಆದರೆ ಇದು ಪೂರ್ಣವಾಗಿಲ್ಲ. ಬೇಗ ನಮಗೆ ಈ ಸಮಸ್ಯೆಯಿಂದ ಮುಕ್ತಿ ಕೊಡಿಸಿ," ಎಂದು ಆಗ್ರಹಿಸಿದ್ದರು.

ಭಾರೀ ಮಳೆಗೆ ತುಂಬಿ ಹರಿಯುತ್ತಿರುವ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾಭಾರೀ ಮಳೆಗೆ ತುಂಬಿ ಹರಿಯುತ್ತಿರುವ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ

ಇದಕ್ಕೆ ಕೂಡಲೇ ಸ್ಪಂದಿಸಿದ ಪ್ರಧಾನಿ ಕಾರ್ಯಾಲಯ ಜುಲೈ 16 ರಂದು ರಾಜ್ಯ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದು ಸಮಸ್ಯೆಗೆ ಸೂಕ್ತ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದೆ. ಈ ಪ್ರತಿಯನ್ನು ರೋಪೇಶ್ ಅವರಿಗೂ ಕಳುಹಿಸಲಾಗಿದ್ದು, ಜುಲೈ 18ರಂದು ಪತ್ರದ ಪ್ರತಿ ರೂಪೇಶ್ ಕೈ ತಲುಪಿದೆ.

English summary
Dangerous sea Erosion that has put hundreds of family in fear and one among them Roopesh from Uchila, Someshwar writes a letter to PM about the problem and receives immediate action letter. Uchila town is so happy about Roopesh's initiative.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X