SDPI ಮುಖಂಡನ ಹತ್ಯೆ: ಕಲ್ಲಡ್ಕದಲ್ಲಿ ಪೊಲೀಸ್ ಹದ್ದಿನ ಕಣ್ಣು
ಮಂಗಳೂರು, ಜೂನ್ 21 : ದಿನದಿಂದ ದಿನಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಗಲಭೆಗಳು ಜರುಗುತ್ತಿದ್ದು. ಈ ಹಿನ್ನೆಯಲ್ಲಿ ಜಿಲ್ಲಾದ್ಯಾಂತ ಭಾರೀ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಎಸ್ ಡಿಪಿಐ ಮುಖಂಡನ ಹತ್ಯೆಯಾದ ಬಳಿಕ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಇದರಿಂದ ಚಿಕ್ಕಮಗಳೂರು, ಉಡುಪಿ ಜಿಲ್ಲೆಗಳಿಂದಲೂ ಹೆಚ್ಚುವರಿ ಪೊಲೀಸರನ್ನು ಬಂದೋಬಸ್ತ್ ಗಾಗಿ ಏರ್ಪಡಿಸಲಾಗಿದ್ದು, 10 ಡಿಆರ್ ಸಹಿತ ಹೆಚ್ಚುವರಿ ಕೆಎಸ್ ಆರ್ ಪಿ ತುಕಡಿಗಳನ್ನು ಬುಲಾವ್ ಮಾಡಿಕೊಳ್ಳಲಾಗಿದೆ ಎಂದು ಶ್ಚಿಮ ವಲಯ ಐಜಿಪಿ ಹರಿಶೇಖರನ್ ಹೇಳಿದ್ದಾರೆ.

ಬುಧವಾರ ಬಂಟ್ವಾಳ ನಗರ ಠಾಣೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಜಾತಿ, ಧರ್ಮದ ಹೆಸರಿನಲ್ಲಿ ಸಂಘಟನೆಗಳು ಶಾಂತಿ ಕಾಪಾಡಲು ಅವಕಾಶ ನೀಡಬೇಕು.
ಯಾವುದೇ ಅನುಮಾನಗಳು ಇದ್ದಲ್ಲಿ ಸಂಘಟನೆಯ ಮುಂಖಂಡರು ತನ್ನನ್ನು ನೇರವಾಗಿ ಭೇಟಿಯಾಗಿ ಚರ್ಚೆ ನಡೆಸಲು ಮುಕ್ತ ಅವಕಾಶ ಇದೆ. ಅದನ್ನು ಬಿಟ್ಟು ಯಾರ ಮೇಲೂ ಕೈಮಾಡುವ ದುಸ್ಸಾಹಸ ಸಲ್ಲದು ಎಂದು ಎಚ್ಚರಿಸಿದರು.
ಕಲ್ಲಡ್ಕ, ಮಣಿ, ಬಿ ಸಿ ರೋಡ್, ಕೈಕಂಬ, ಪರಂಗಿಪೇಟೆ ಮತ್ತು ಬಂಟ್ವಾಳ ಪರಿಸರದಲ್ಲಿ ಪರಿಸ್ಥಿತಿ ಹತೋಟಿಗೆ ತರುವ ನಿಟ್ಟಿನಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಹಾಕಲಾಗಿದೆ.
ಜನರ ಆಸ್ತಿ, ಪಾಸ್ತಿ ಹಾಗೂ ಶಾಂತಿ ಕಾಪಾಡುವುದು ಪೋಲೀಸರ ಹೊಣೆಗಾರಿಕೆಯಾಗಿದ್ದು, ಇದಕ್ಕೆ ಸಾರ್ವಜನಿಕರು ಸಹಕರಿಸಬೇಕು. ಯಾವುದನ್ನೂ ಕೋಮು ಭಾವನೆಯಲ್ಲಿ ಗಮನಿಸಬೇಡಿ ಎಂದು ಮನವಿ ಮಾಡಿದರು.
ಇನ್ನು ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಸುಳ್ಯ ತಾಲೂಕಿನಲ್ಲಿ ಸೆಕ್ಷನ್ 144 ರ ಅನ್ವಯ ನಿಷೇದಾಜ್ಞೆಯನ್ನು ಜೂ. 27ರವರೆಗೆ ವಿಸ್ತರಿಸಿ ದ.ಕ. ಜಿಲ್ಲಾಧಿಕಾರಿ ಡಾ.ಕೆ.ಜಿ. ಜಗದೀಶ್ ಆದೇಶ ಹೊರಡಿಸಿದ್ದಾರೆ.












Click it and Unblock the Notifications