ಬಾವಿ ನೀರು ಕುಡಿದ ಮಕ್ಕಳು ಅಸ್ವಸ್ಥ; ಸಮೀಪದಲ್ಲೇ ಆಸಿಡ್ ಕ್ಯಾನ್ ಪತ್ತೆ
ಮಂಗಳೂರು, ಡಿಸೆಂಬರ್ 2: ಬಾವಿ ನೀರು ಸೇವಿಸಿ ಎಂಟು ಶಾಲಾ ಮಕ್ಕಳು ಅಸ್ವಸ್ಥಗೊಂಡಿರುವ ಘಟನೆ ಇಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದಲ್ಲಿ ನಡೆದಿದೆ.
ಶಿಬಾಜೆ ಗ್ರಾಮದ ಪೆರ್ಲ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ 8 ವಿದ್ಯಾರ್ಥಿಗಳು ಬಾವಿ ನೀರು ಸೇವಿಸಿ ಅಸ್ವಸ್ಥರಾಗಿದ್ದಾರೆ. ಇಂದು ಬೆಳಿಗ್ಗೆ ಶಾಲಾ ಆವರಣದಲ್ಲಿನ ತೋಟಕ್ಕೆ ನೀರು ಬಿಡುವ ವೇಳೆ ಮಕ್ಕಳು ಅದೇ ನೀರನ್ನು ಕುಡಿದಿದ್ದರು. ನೀರು ಕುಡಿದ ಕೆಲ ಹೊತ್ತಿನಲ್ಲೇ ಅಸ್ವಸ್ಥರಾಗಿ ಒದ್ದಾಡಲು ಆರಂಭಿಸಿದ್ದಾರೆ.
ರಾಜೇಶ್ (12), ಮೋನಿಸ್(12), ಶ್ರವಣ್ (12), ಸುದೀಪ್ (12), ಚೇತನ್ ಕುಮಾರ್ (13), ರಾಧಾಕೃಷ್ಣ (14), ಸುದೀಶ್ (14), ಯೋಗೀಶ್ (14) ಅಸ್ವಸ್ಥಗೊಂಡ ವಿದ್ಯಾರ್ಥಿಗಳು. ಈ ಮಕ್ಕಳನ್ನು ತಕ್ಷಣವೇ ಮಂಗಳೂರಿನ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಾವಿಗೆ ಸಮೀಪದಲ್ಲಿ ರಬ್ಬರ್‌ಗೆ ಮಿಶ್ರಣ ಮಾಡುವ ಆಸಿಡ್ ಕ್ಯಾನ್ ಪತ್ತೆಯಾಗಿದೆ.












Click it and Unblock the Notifications