ನೀತಿ ಸಂಹಿತೆ ಉಲ್ಲಂಘನೆ:ದ.ಕ.ದಲ್ಲಿ 1.07 ಕೋಟಿ ರೂ.ಮೌಲ್ಯದ ನಗದು, ಸ್ವತ್ತು ವಶ

ಮಂಗಳೂರು, ಏಪ್ರಿಲ್ 09:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ನಗದು ಸೇರಿಂತೆ ಇತರ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅವುಗಳ ಒಟ್ಟು ಮೌಲ್ಯ 1.7 ಕೋಟಿ ರೂಪಾಯಿ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದರು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ನೀತಿ ಸಂಹಿತೆಯ ಉಲ್ಲಂಘನೆಯಡಿ 28,10,590 ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದ್ದು, ದಾಖಲೆ ಪರಿಶೀಲಿಸಿದ ಬಳಿಕ ಪೂರ್ಣ ಹಣ ಹಿಂತಿರುಗಿಸಲಾಗಿದೆ.

3 ದ್ವಿಚಕ್ರ ವಾಹನ, 3 ಲಾರಿ,1907 ಭಿತ್ತಿಪತ್ರ, 3 ಕಾರು, 1ಟ್ರಕ್, 1 ಟ್ಯಾಂಕರ್ ಸೇರಿದಂತೆ ಒಟ್ಟು 1,07,ಕೋಟಿ ರೂಪಾಯಿ ಮೌಲ್ಯದ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. 461 ಅಬಕಾರಿ ಕಾಯ್ದೆ ಉಲ್ಲಂಘನೆಯ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

Rs 1.07 cr worth properties, cash seized in Dakshina Kannada

ಮತದಾನ ಕೇಂದ್ರದಲ್ಲಿ ವಿವಿಪ್ಯಾಟ್ ಬಳಕೆಯಿಂದ ಮತ್ತು ಆಯ್ದ ವಿವಿಪ್ಯಾಟ್ ನಲ್ಲಿ ದಾಖಲಾದ ಮತಗಳನ್ನು ಎಣಿಸಿ ಮತ್ತು ಮತಯಂತ್ರದ ಮತಗಳನ್ನು ತಾಳೆ ನೋಡುವ ವ್ಯವಸ್ಥೆ ಈ ಬಾರಿ ಇರುವುದರಿಂದ ಮತದಾನ ಹಾಗೂ ಎಣಿಕೆ ಕಾರ್ಯ ಹೆಚ್ಚು ಸಮರ್ಪಕವಾಗಿ ನಡೆಯುತ್ತದೆ ಎಂದು ಜಿಲ್ಲಾಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಈ ಬಾರಿ 1861 ಮತಗಟ್ಟೆಗಳಲ್ಲಿ 2495 ವಿವಿಪ್ಯಾಟ್ ಬಳಸುತ್ತಿದ್ದು, ಏಪ್ರಿಲ್ 10ರಿಂದ ಮತಯಂತ್ರಗಳ ಸಿದ್ಧಪಡಿಸುವ ಕಾರ್ಯ ಆರಂಭವಾಗಲಿದೆ ಎಂದು ಹೇಳಿದ ಜಿಲ್ಲಾಧಿಕಾರಿಗಳು ಜಿಲ್ಲೆಯ 8 ಕೇಂದ್ರಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು ಸಿದ್ಧಪಡಿಸಲಾಗುವುದು ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+