ರೋಹಿಂಗ್ಯಾ ಮುಸ್ಲಿಮರ ಗಡಿಪಾರಿಗೆ 'ವಿಹಿಂಪ' ಒತ್ತಾಯ

ಮಂಗಳೂರು, ಸೆಪ್ಟೆಂಬರ್ 27: ಮಯಾನ್ಮಾರ್ ನಿಂದ ಭಾರತದೊಳಗೆ ನುಸುಳಿರುವ ರೋಹಿಂಗ್ಯಾ ಮುಸ್ಲಿಮರನ್ನು ಈ ಕೂಡಲೇ ಗಡಿಪಾರು ಮಾಡಬೇಕೆಂದು ವಿಶ್ವ ಹಿಂದು ಪರಿಷತ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.

ಮಂಗಳೂರಿನಲ್ಲಿ ಈ ಕುರಿತು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಜಗದೀಶ್ ಶೇಣವ, "ಮಯಾನ್ಮಾರ್ ನಿಂದ ಭಾರತಕ್ಕೆ ನುಸುಳಿರುವ ರೋಹಿಂಗ್ಯಾ ಮುಸ್ಲಿಮರು ಭಾರತದ ಆಂತರಿಕ ಭದ್ರತೆಗೆ ಭಂಗ ತರುವ ಸಾಧ್ಯತೆ ಇದೆ," ಎಂದು ಆತಂಕ ವ್ಯಕ್ತಪಡಿಸಿದರು .

Rohingya muslims of Myanmar should be excluded from India - VHP

"ಮಯಾನ್ಮಾರ್ ನ ಹಿಂಸಾ ಪೀಡಿತ ರಖಿನೆ ಪ್ರಾಂತ್ಯದಲ್ಲಿ ರೋಹಿಂಗ್ಯಾ ಮುಸ್ಲಿಮರು ಹಿಂದೂಗಳ ಸಾಮೂಹಿಕ ಹತ್ಯೆ ಮಾಡಿರುವುದು ಈಗಾಗಲೇ ಬಯಲಾಗಿದೆ. ಈ ಮೂಲಕ ಮುಗ್ಧರೆಂದು ಹೇಳಲಾಗುವ ರೋಹಿಂಗ್ಯಾ ಮುಸ್ಲಿಮರ ಬರ್ಬರತೆ ಬೆಳಕಿಗೆ ಬಂದಿದೆ," ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಹಿಂದೂಗಳು ಮತ್ತು ಬೌದ್ಧರನ್ನು ಗುರಿಯಾಗಿಸಿಕೊಂಡು ನಡೆದ ಹಿಂಸಾಚಾರಕ್ಕೆ ಪ್ರತಿಯಾಗಿ ನಡೆಸಿದ ದಾಳಿಗೆ ಸಾವಿರಾರು ರೋಹಿಂಗ್ಯಾ ಭಯೋತ್ಪಾದಕರು ಭಾರತಕ್ಕೆ ನುಸುಳಿದ್ದಾರೆ . ಇಂತಹ ತೀವ್ರವಾದಿ ಮಾನಸಿಕತೆ ಇರುವ ರೋಹಿಂಗ್ಯಾ ಮುಸ್ಲಿಮರಿಗೆ ಭಾರತ ಆಶ್ರಯ ನೀಡಿದೆ. ಇವರನ್ನು ಈ ಕೂಡಲೇ ಗಡಿಪಾರು ಮಾಡಬೇಕೆಂದು ಅವರು ಒತ್ತಾಯಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+