ಲಂಚ ಸ್ವೀಕರಿಸುತ್ತಿದ್ದ ಸುಳ್ಯದ ಕಂದಾಯ ನಿರೀಕ್ಷಕ ಎಸಿಬಿ ಬಲೆಗೆ
ಮಂಗಳೂರು, ಆಗಸ್ಟ್ 22: ಕಂದಾಯ ನಿರೀಕ್ಷ ಕರೊಬ್ಬರು ಲಂಚ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ನಡೆದಿದೆ .
94C ಅಡಿಯಲ್ಲಿ ಜಾಗದ ಹಕ್ಕು ಪತ್ರ ಮಂಜೂರು ಮಾಡಲು ಲಂಚ ಸ್ವೀಕರಿಸುತ್ತಿದ್ದ ಕಂದಾಯ ನಿರೀಕ್ಷಕ ದಯಾನಂದ ಭ್ರಷ್ಚಾಚಾರ ನಿಗ್ರಹ ದಳದ ಬಲೆಗೆ ಬಿದ್ದಿದ್ದಾರೆ.

ಸುಳ್ಯ ತಾಲೂಕಿನ ಪಂಜ ನಾಡಕಛೇರಿಯ ರೆವೆನ್ಯೂ ಇನ್ಸ್ ಪೆಕ್ಟರ್ ದಯಾನಂದ್ , ಹರೀಶ್ ಎಂಬವರಿಗೆ 9 ಸೆಂಟ್ಸ್ ಜಾಗವನ್ನು 94Cಮಂಜೂರು ಮಾಡುವುದಕ್ಕಾಗಿ 8 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆಯಲ್ಲಿ ಲಂಚದ ವಿಚಾರವನ್ನು ಹರೀಶ್ ಎಸಿಬಿ ಅಧಿಕಾರಿಗಳ ಗಮನಕ್ಕೆ ತಂದಿದ್ದರು.

ಹರೀಶ್ ಇಂದು ಹಣ ನೀಡುವುದಾಗಿ ದಯಾನಂದ್ ಗೆ ತಿಳಿಸಿದ್ದರು. ಈ ಹಿನ್ನಲೆಯಲ್ಲಿ ನಾಡಾ ಕಚೇರಿಯಲ್ಲಿ ದಯಾನಂದ್ ಹಣ ಸ್ವೀಕರಿಸುತ್ತಿದ್ದಾಗ ಎಸಿಬಿ ಅಧಿಕಾರಿಗಳು ಹೆಡ್ ಹ್ಯಾಡ್ ಆಗಿ ಬಂಧಿಸಿದ್ದಾರೆ.












Click it and Unblock the Notifications