ಮಂಗಳೂರು; ಇಂದಿನಿಂದ ರಂಝಾನ್ ಉಪವಾಸ ಆಚರಣೆ

ಮಂಗಳೂರು, ಏಪ್ರಿಲ್ 13; ಕರಾವಳಿಯಲ್ಲಿ ಇಂದಿನಿಂದ ರಂಜಾನ್ ಉಪವಾಸ ಆಚರಣೆ ಆರಂಭವಾಗಿದೆ. ಈ ವರ್ಷದ ಪವಿತ್ರ ರಂಜಾನ್ ಆಚರಣೆಗೆ ಚಂದ್ರದರ್ಶನವಾದ ಹಿನ್ನಲೆಯಲ್ಲಿ ಕರಾವಳಿ ಭಾಗದಲ್ಲಿ ಮುಸ್ಲಿಮರು ಇಂದಿನಿಂದ ಉಪವಾಸ ಆಚರಣೆ ಮಾಡಲಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಆಲ್ ಹಾಜ್ ಅಹ್ಮದ್ ಮುಸ್ಲಿಯಾರ್ ಈ ಕುರಿತು ಘೋಷಣೆ ಮಾಡಿದ್ದಾರೆ. ಕೇರಳದ ಕ್ಯಾಲಿಕಟ್‌ನಲ್ಲಿ ಚಂದ್ರ ದರ್ಶನವಾದ ಹಿನ್ನಲೆಯಲ್ಲಿ ಉಪವಾಸ ಆರಂಭಿಸಲು ಸೂಚನೆ ನೀಡಲಾಗಿದೆ.

ಮಂಗಳವಾರದಿಂದ ಮೂವತ್ತು ದಿನಗಳ ಉಪವಾಸ ವೃತಾಚರಣೆಯನ್ನು ಮುಸ್ಲಿಮರು ಆಚರಿಸಲಿದ್ದಾರೆ. ಪಾಪ ವಿಮೋಚನೆಯ ಈ ತಿಂಗಳು ಬಹಳ ಪವಿತ್ರವಾದವುದು ಎಂಬುವುದು ಮುಸ್ಲಿಂ ಬಾಂಧವರ ನಂಬಿಕೆಯಾಗಿದೆ.

Ramzan Fasting In Mangaluru Form April 13

ಹಸಿವಿನ ಮಹತ್ವದೊಂದಿಗೆ ದಾನ, ಧರ್ಮ ಮತ್ತು ದೇವರ ಆರಾಧನೆಗೆ ಆದ್ಯತೆ ಮಾತ್ರವಲ್ಲದೆ ಹೆಚ್ಚಾಗಿ ಆಧ್ಯಾತ್ಮದ ನೆನಪಿಗಾಗಿ ಈ 30 ದಿನಗಳ ಕಠಿಣ ಉಪವಾಸವನ್ನು ಮುಸ್ಲಿಮರು ಮಾಡಲಿದ್ದಾರೆ.

ಒಂದು ತಿಂಗಳ ಬಳಿಕ ಮತ್ತೆ ಚಂದ್ರ ದರ್ಶನವಾದ ಸಂದರ್ಭದಲ್ಲಿ ರಂಜಾನ್ ಹಬ್ಬವನ್ನು ಮುಸ್ಲಿಮರು ಆಚರಿಸುತ್ತಾರೆ. ಕೇರಳ ಭಾಗದಿಂದ ಮಂಗಳೂರು, ಉಡುಪಿ, ಭಟ್ಕಳ ತನಕವೂ ಈ ವೃತಾಚರಣೆಯನ್ನು ಶ್ರದ್ಧಾ ಭಕ್ತಿಯಿಂದ ಮಾಡಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+