ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ಕಿಲ್ ಗೇಮ್ ಸೆಂಟರ್ ಮೇಲೆ ದಾಳಿ: ಮಂಗಳೂರು ಮೇಯರ್ ಗೆ ಹೈಕೋರ್ಟ್ ನೋಟಿಸ್

|
Google Oneindia Kannada News

ಮಂಗಳೂರು, ಫೆಬ್ರವರಿ 7: ನಗರದ ಸ್ಕಿಲ್ ಗೇಮ್ ಅಡ್ಡೆಗಳ ಮೇಲೆ ದಾಳಿ ನಡೆಸಿ ರಫ್ ಆ್ಯಂಡ್ ಟಫ್ ಮೇಯರ್ ಎಂಬ ಹೆಗ್ಗಳಿಕೆ ಪಡೆದಿದ್ದ ಮೇಯರ್ ಕವಿತಾ ಸನಿಲ್ ಅವರು ಈಗ ಪೇಚಿಗೆ ಸಿಲುಕಿದ್ದಾರೆ. ಕಾರ್ಯಾಚರಣೆಗಳ ಮೂಲಕ ಭಾರೀ ಗಮನ ಸೆಳೆದಿದ್ದ ಕವಿತಾ ಸನಿಲ್ ಅವರಿಗೆ ಹೈಕೋರ್ಟ್ ನೋಟಿಸ್‌ ಜಾರಿ ಮಾಡಿದೆ.

ಸ್ಕಿಲ್‌ ಗೇಮ್ ಕೇಂದ್ರಗಳ ಮೇಲಿನ ದಾಳಿಗೆ ಸಂಬಂಧಿಸಿದಂತೆ ಯಾವುದೇ ನೋಟಿಸ್ ನೀಡದೇ ದಾಳಿ ಮಾಡಲಾಗಿತ್ತು ಎಂದು ಸ್ಕಿಲ್ ಗೇಮ್ ಸೆಂಟರ್ ಒಡತಿ ಸುಜಿತಾ ರೈ ಎಂಬವರು ಕವಿತಾ ಸನೀಲ್ ವಿರುದ್ಧ ಹೈಕೋರ್ಟ್ ನಲ್ಲಿ ದಾವೆ ಸಲ್ಲಿಸಿದ್ದರು.

ದಾಳಿಯ ಸಂದರ್ಭದಲ್ಲಿ ಮೇಯರ್ ಕವಿತಾ ಸನಿಲ್ ಅವರು ಟ್ರೇಡ್‌ ಲೈಸನ್ಸ್‌ ನೀಡುವಂತೆ ಒತ್ತಾಯಿಸಿದ್ದರು. ಅಲ್ಲದೆ ಹೈಕೋರ್ಟ್ ನೀಡಿದ ತಡೆಯಾಜ್ಞೆ ದಾಖಲೆಗಳನ್ನು ತೋರಿಸಿದ್ದರೂ ಮನ್ನಣೆ ನೀಡಲಿಲ್ಲ ಎಂದು ದಾವೆಯಲ್ಲಿ ಆರೋಪಿಸಿದ್ದರು. ದಾಳಿಯಿಂದ ಆದ ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದೂ ಅವರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು.

Raid on skill game centre: High court serves notice to Mangaluru mayor Kavitha Sanil

ಹೀಗಾಗಿ ಮೇಯರ್ ಕವಿತಾ ಸನಿಲ್ ಅವರಿಗೆ ನೊಟೀಸ್‌ ಜಾರಿ ಮಾಡಿರುವ ಹೈಕೋರ್ಟ್ ಸ್ಕಿಲ್ ಗೇಮ್ ಸೆಂಟರ್ ವಿರುದ್ಧ ಪಾಲಿಕೆ ತೆಗೆದುಕೊಂಡ ಕ್ರಮಗಳಿಗೆ ತಡೆಯಾಜ್ಞೆ ನೀಡಿದೆ. ಇದರ ಜತೆಗೆ ಮಂಗಳೂರು ಪೊಲೀಸ್ ಆಯುಕ್ತರು ಹಾಗೂ ಆರೋಗ್ಯಾಧಿಕಾರಿ ಅವರಿಗೂ ನೋಟಿಸ್ ಜಾರಿ ಮಾಡಿದೆ.

English summary
High court has served notices to Mangaluru mayor Kavitha Sanil, and others relating to raid conducted on a skill game centre on July 7.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X