ಚಿತ್ರ : ರೊಸಾರಿಯೋ ಚರ್ಚ್, ಕುದ್ರೋಳಿ ದೇವಾಲಯಕ್ಕೆ ರಾಹುಲ್ ಭೇಟಿ

ಮಂಗಳೂರು, ಮಾರ್ಚ್ 20 : ಕರಾವಳಿ ಪ್ರವಾಸದಲ್ಲಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ರೊಸಾರಿಯೋ ಚರ್ಚ್ ಮತ್ತು ಕುದ್ರೋಳಿ ಗೋಕರ್ಣನಾಥೇಶ್ವರ ದೇವಾಲಯಕ್ಕೆ ಭೇಟಿ ನೀಡಿದರು.

ಮಂಗಳವಾರ ರಾತ್ರಿ ನೆಹರು ಮೈದಾನದಲ್ಲಿ ಆಯೋಜಿಸಲಾಗಿದ್ದ ಬೃಹತ್ ಸಮಾವೇಶದಲ್ಲಿ ರಾಹುಲ್ ಗಾಂಧಿ ಭಾಷಣ ಮಾಡಿದರು. ಬಳಿಕ ಮಂಗಳೂರಿನ ಅತ್ಯಂತ ಪ್ರಾಚೀನ ರೋಸಾರಿಯೋ ಚರ್ಚ್‌ಗೆ ಭೇಟಿ ನೀಡಿದರು.

ನಂತರ ಕುದ್ರೋಳಿ ಗೋಕರ್ಣನಾಥೇಶ್ವರ ದೇವಾಲಯಕ್ಕೆ ರಾಹುಲ್ ಗಾಂಧಿ ಭೇಟಿ ನೀಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ನಾಯಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Rosario church

ದೇವಾಲಯಕ್ಕೆ ಆಗಮಿಸಿದ ರಾಹುಲ್ ಗಾಂಧಿ ಅವರನ್ನು ಹಿರಿಯ ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ಜನಾರ್ದನ ಪೂಜಾರಿ ಅವರ ಕೈ ಹಿಡಿದುಕೊಂಡ ರಾಹುಲ್ ಗಾಂಧಿ ಆರೋಗ್ಯ ವಿಚಾರಿಸಿದರು.

In Pics: ಕರಾವಳಿಯಲ್ಲಿ ರಾಹುಲ್ ಗಾಂಧಿ ಮಿಂಚಿನ ಸಂಚಾರ

ಮಂಗಳವಾರ ಕುತೂಹಲ ಕೆರಳಿಸಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡೆ. ಜನಾರ್ದನ ಪೂಜಾರಿ ಅವರ ಮೇಲಿನ ದ್ವೇಷ ಬಿಟ್ಟು ಕ್ಷೇತ್ರಕ್ಕೆ ಆಗಮಿಸಿದ ಸಿದ್ದರಾಮಯ್ಯ ದೇವಾಲಯದಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ದೇವರ ದರ್ಶನ ಪಡೆದರು.

 Mangaluru

ಸಿದ್ದರಾಮಯ್ಯ ಅವರು ಹಲವಾರು ಬಾರಿ ಮಂಗಳೂರಿಗೆ ಬಂದಿದ್ದರೂ ದೇವಾಲಯಕ್ಕೆ ಬಂದಿರಲಿಲ್ಲ. ಇದರಿಂದಾಗಿ ಜನಾರ್ದನ ಪೂಜಾರಿ ಅವರೊಂದಿಗೆ ದ್ವೇಷ ಕಟ್ಟಿಕೊಂಡಿದ್ದರು. ರಾಹುಲ್ ಗಾಂಧಿ ಮುಂದೆ ದ್ವೇಷ ಮರೆಮಾಚಲು ಪ್ರಯತ್ನ ನಡೆಸಿದರು.

Rahul Gandhi

ಆದರೆ, ಜನಾರ್ದನ ಪೂಜಾರಿ ಅವರ ಜೊತೆ ಸಿದ್ಧರಾಮಯ್ಯ ಮಾತನಾಡದಿರುವುದು ಗಮನ ಸೆಳೆಯಿತು.
ದೇವಾಲಯದಿಂದ ರಾಹುಲ್ ಗಾಂಧಿ ವಾಪಸ್ ಆಗುವಾಗ ರಾಹುಲ್ ಗಾಂಧಿ ಎದುರು ಜನಾರ್ದನ ಪೂಜಾರಿ ಕಣ್ಣೀರು ಹಾಕಿದರು.

ರಾಹುಲ್ ಕೆನ್ನೆ ಸವರಿ ಕಣ್ಣೀರಿಟ್ಟ ಪೂಜಾರಿ ಅವರನ್ನು ರಾಹುಲ್ ಗಾಂಧಿ ಸಂತೈಸಿದರು. ಜನಾರ್ದನ ಪೂಜಾರಿಯನ್ನು ತಬ್ಬಿಕೊಂಡು ರಾಹುಲ್ ಗಾಂಧಿ ಸಮಾಧಾನ ಮಾಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+