ಮಂಗಳೂರು : ಜೈಲಿನಿಂದ ಕೈದಿ ಪರಾರಿಯಾಗಿರಲಿಲ್ಲ!

ಬೆಂಗಳೂರು, ನವೆಂಬರ್ 03 : ಮಂಗಳೂರು ಜೈಲಿನಿಂದ ಕೈದಿ ಪರಾರಿಯಾದ ಪ್ರಕರಣ ಸುಖಾಂತ್ಯಗೊಂಡಿದೆ. ಜೈಲಿನ ಆವರಣದಲ್ಲಿಯೇ ಅಡಗಿ ಕುಳಿತಿದ್ದ ಆತನನ್ನು ಸಿಬ್ಬಂದಿಗಳು ಪತ್ತೆ ಹಚ್ಚಿದ್ದಾರೆ. ಸೋಮವಾರ ಜೈಲಿನಲ್ಲಿ ಕೈದಿಗಳ ನಡುವೆ ಮಾರಾಮಾರಿ ನಡೆದ ಹಿನ್ನಲೆಯಲ್ಲಿ ಕಮಲ್ ಪಂಥ್ ಅವರು ಇಂದು ಜೈಲಿಗೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

ಬಂಟ್ವಾಳ ಮೂಲದ ಬಶೀರ್ ಅಹ್ಮದ್ ಮಂಗಳವಾರ ಬೆಳಗ್ಗೆ ಜೈಲಿನಿಂದ ನಾಪತ್ತೆಯಾಗಿದ್ದ. ಜೈಲಿನ ಆವರಣದಲ್ಲಿಯೇ ಅಡಗಿ ಕುಳಿತಿದ್ದ ಆತನನ್ನು ಜೈಲಿನ ಸಿಬ್ಬಂದಿಗಳು ಪತ್ತೆ ಹಚ್ಚಿದ್ದಾರೆ. ಇದರಿಂದಾಗಿ ನಾಪತ್ತೆ ಪ್ರಕರಣ ಸುಖಾಂತ್ಯಗೊಂಡಂತಾಗಿದೆ. [ಜೈಲಿನಿಂದ ಕೈದಿ ಪರಾರಿ]

jail

ಹೆದರಿ ಕುಳಿತಿದ್ದ : ಸೋಮವಾರ ಜೈಲಿನಲ್ಲಿ ನಡೆದ ಮಾರಾಮಾರಿಯಲ್ಲಿ ಮಾಡೂರು ಯೂಸೂಫ್, ಗಣೇಶ್ ಶೆಟ್ಟಿ ಎಂಬ ಕೈದಿಗಳನ್ನು ಹತ್ಯೆ ಮಾಡಲಾಗಿತ್ತು, 6 ಕೈದಿಗಳು ಗಾಯಗೊಂಡಿದ್ದರು. ಇದರಿಂದ ಇಂದೂ ಸಹ ಗಲಾಟೆ ಆಗಬಹುದು ಎಂದು ಹೆದರಿದ್ದ ಬಶೀರ್ ಅಡಗಿ ಕುಳಿತಿದ್ದ. [ಮಂಗಳೂರು : ಜೈಲಿನಲ್ಲಿ ಹತ್ಯೆಯಾದವರು ಯಾರು?]

ಉಳ್ಳಾಲದಲ್ಲಿ ಕಳ್ಳತನ ಮಾಡಿದ ಪ್ರಕರಣದಲ್ಲಿ ಬಂಧಿತನಾಗಿದ್ದ ಬಶೀರ್ ಐದು ತಿಂಗಳಿನಿಂದ ಜೈಲಿನಲ್ಲಿದ್ದ. ಸೋಮವಾರ ಆಕಾಶ್ ಭುವನ್ ಶರಣ್ ಮತ್ತು ಮಾಡೂರು ಯೂಸೂಫ್ ಗುಂಪಿನ ನಡುವೆ ನಡೆದ ಮಾರಾಮಾರಿ ಮತ್ತು ಇಬ್ಬರು ಕೈದಿಗಳ ಹತ್ಯೆಯನ್ನು ಕಣ್ಣಾರೆ ಕಂಡಿದ್ದ ಬಶೀರ್ ಹೆದರಿ ಅಡಗಿದ್ದ ಎಂದು ತಿಳಿದುಬಂದಿದೆ.

ಕಮಲ್ ಪಂಥ್ ಭೇಟಿ : ಸೋಮವಾರ ಮಂಗಳೂರು ಜೈಲಿನಲ್ಲಿ ನಡೆದ ಮಾರಾಮಾರಿಯಲ್ಲಿ ಮಾಡೂರು ಯೂಸೂಫ್, ಗಣೇಶ್ ಶೆಟ್ಟಿ ಎಂಬ ಕೈದಿಗಳನ್ನು ಹತ್ಯೆ ಮಾಡಲಾಗಿತ್ತು. ಕಾರಾಗೃಹ ಎಡಿಜಿಪಿ ಕಮಲ್ ಪಂಥ್ ಅವರು ಇಂದು ಜೈಲಿಗೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+