ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಂಬಳದ ಸುಗ್ರೀವಾಜ್ಞೆಗೆ ರಾಷ್ಟ್ರಪತಿಗಳ ಅಂಕಿತ

By ಕಿರಣ್ ಸಿರ್ಸೀಕರ್
|
Google Oneindia Kannada News

ಮಂಗಳೂರು, ಫೆಬ್ರವರಿ 19 : ಕರಾವಳಿಯ ಜಾನಪದ ಕ್ರೀಡೆ ಕಂಬಳಕ್ಕೆ ರಾಷ್ಟ್ರಪತಿಗಳ ಅಂಕಿತ ಸಿಕ್ಕಿದೆ. ಕಂಬಳ ವಿಧೇಯಕಕ್ಕೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಸಹಿ ಹಾಕಿದ್ದಾರೆ.

ರಾಷ್ಟ್ರಪತಿಗಳು ಸಹಿ ಹಾಕಿರುವ ಹಿನ್ನೆಲೆಯಲ್ಲಿ ಕರಾವಳಿಗರಲ್ಲಿ ಹರ್ಷ ವ್ಯಕ್ತವಾಗಿದೆ. ಕಂಬಳ ಕ್ರೀಡೆ ಉಳಿವಿಗೆ ಕಂಬಳ ಸಮಿತಿ ನಡೆಸಿದ ಅವಿರತ ಹೋರಾಟಕ್ಕೆ ಜಯ ಸಿಕ್ಕಿದಂತಾಗಿದೆ.

ಕಂಬಳಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ನಕಾರಕಂಬಳಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ನಕಾರ

ವಿಧೇಯಕಕ್ಕೆ ರಾಷ್ಟ್ರಪತಿ ಅಂಕಿತ ಸಿಕ್ಕಿರುವುದಕ್ಕೆ ಕಂಬಳ ಸಮಿತಿ ಅಧ್ಯಕ್ಷ ಬಾರ್ಕುರು ಶಾಂತರಾಮ್ ಶೆಟ್ಟಿ ಸಂತಸ ವ್ಯಕ್ತಪಡಿಸಿದ್ದಾರೆ. ಕಂಬಳ ಕ್ರೀಡೆ ಅಭಿಮಾನಿ ಮಂಗಳೂರಿನ ಗಿರೀಶ್ ಕಾರಂತ ಅವರು ಹರ್ಷ ವ್ಯಕ್ತಪಡಿಸಿದ್ದು, 'ಕರಾವಳಿಯ ಅದರಲ್ಲೂ ತುಳುನಾಡಿನ ಸಂಸ್ಕೃತಿ , ಪರಂಪರೆ, ಜಾನಪದ ಆಚರಣೆಗಳ ಉಳಿವಿನ ದೃಷ್ಟಿಯಲ್ಲಿ ಇದೊಂದು ಮಹತ್ವದ ಬೆಳವಣಿಗೆ' ಎಂದು ಹೇಳಿದ್ದಾರೆ.

President's nod for Kambala ordinance

ಕಂಬಳ ವಿಧೇಯಕ ತಿದ್ದುಪಡಿಯಾಗಿ ಐದಾರು ತಿಂಗಳು ಕಳೆದ ಬಳಿಕ ಕೊನೆಗೂ ರಾಷ್ಟ್ರಪತಿ ಅವರಿಂದ ವಿಧೇಯಕಕ್ಕೆ ಅಂಕಿತ ಬಿದ್ದಿದೆ. ಕಂಬಳದಲ್ಲಿ ಪ್ರಾಣಿ ಹಿಂಸೆ ನಡೆಯುತ್ತಿದೆ ಎಂದು ಪೇಟಾ ದೂರಿನ ಹಿನ್ನೆಲೆಯಲ್ಲಿ ಕಂಬಳಕ್ಕೆ ಸುಪ್ರೀಂಕೋರ್ಟ್‌ ತಡೆಯಾಜ್ಞೆ ವಿಧಿಸಿತ್ತು.

ಮಂಗಳೂರಿನಲ್ಲಿ ಮತ್ತೆ ಮೊಳಗಿದ ಕಂಬಳದ ಕಹಳೆಮಂಗಳೂರಿನಲ್ಲಿ ಮತ್ತೆ ಮೊಳಗಿದ ಕಂಬಳದ ಕಹಳೆ

ಈ ಹಿನ್ನೆಲೆಯಲ್ಲಿ ಕರಾವಳಿ ಜಿಲ್ಲೆಗಳು ಸೇರಿದಂತೆ ರಾಜ್ಯದ ಹಲವಾರು ಭಾಗಗಳಲ್ಲಿ ಭಾರಿ ಪ್ರತಿಭಟನೆಗಳು ನಡೆದಿದ್ದವು. ಈ ಪರಿಣಾಮ ಸುಗ್ರೀವಾಜ್ಞೆ ಮೂಲಕ ರಾಜ್ಯ ಸರ್ಕಾರ ಕಂಬಳ ಮಸೂದೆಗೆ ತಿದ್ದುಪಡಿ ತಂದಿತ್ತು, ಅದನ್ನು ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸಲಾಗಿತ್ತು.

ಕರಾವಳಿಯ ಸಂಪ್ರದಾಯ, ಸಂಸ್ಕೃತಿ ಉಳಿಸುವ ಮತ್ತು ಉತ್ತೇಜಿಸುವ ದೃಷ್ಟಿಯಿಂದ ಹಾಗೂ ಕೋಣಗಳ ದೇಸಿ ತಳಿ ಉಳಿಸಿ ಬೆಳೆಸುವ ಉದ್ದೇಶದಿಂದ ಕಂಬಳ ನಡೆಸಲು ಅನುಮತಿ ನೀಡಲು ರಾಜ್ಯ ಸರಕಾರ ಉದ್ಧೇಶಿಸಿತ್ತು.

ಕಂಬಳದೊಂದಿಗೆ ಉತ್ತರ ಕರ್ನಾಟಕದ ಜನಪ್ರಿಯ ಕ್ರೀಡೆಗಳಾದ ಹೋರಿ ಬೆದರಿಸುವ ಹಾಗೂ ಎತ್ತಿನಗಾಡಿ ಓಡಿಸುವ ಸ್ಪರ್ಧೆಗೂ ಕಾನೂನಿನಲ್ಲಿ ಅವಕಾಶ ಕಲ್ಪಿಸುವ ಉದ್ದೇಶದಿಂದ ಕಾಯ್ದೆಗೆ ತಿದ್ದುಪಡಿ ತರಲು ನಿರ್ಧರಿಸಿದ್ದ ರಾಜ್ಯ ಸರ್ಕಾರ ಅದರಂತೆ ವಿಧಾನ ಮಂಡಲದ ಉಭಯ ಸದನಗಳಲ್ಲಿ ತಿದ್ದುಪಡಿ ವಿಧೇಯಕ ಮಂಡಿಸಿ ಒಪ್ಪಿಗೆ ಪಡೆದಿತ್ತು.

ನಂತರ ವಿಧೇಯಕ ವನ್ನು ರಾಜ್ಯಪಾಲರ ಅಂಕಿತಕ್ಕಾಗಿ ಕಳುಹಿಸಿಕೊಡಲಾಗಿತ್ತು. ಆದರೆ, ರಾಜ್ಯಪಾಲರು ವಿಧೇಯಕವನ್ನ ರಾಷ್ಟ್ರಪತಿಗಳಿಗೆ ಕಳುಹಿಸಿದ್ದರು. ಈ ಹಿನ್ನೆಲೆಯಲ್ಲಿ ಕಂಬಳ ವಿಧೇಯಕಕ್ಕೆ ರಾಷ್ಟ್ರಪತಿಗಳು ಈಗ ಅಂಕಿತ ಹಾಕಿದ್ದಾರೆ.

English summary
President Ram Nath Kovind gave his assent to the Ordinance amend the Prevention of Cruelty to Animals (Karnataka Amendment) Ordinance, 2017 that allows Kambala and other bull-cart races in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X