'ಬಾಬ್ರಿ ಮಸೀದಿ ಧ್ವಂಸ, ಪೂರ್ವ ಯೋಜಿತ ಕೃತ್ಯವಲ್ಲ'

ಬೆಳ್ತಂಗಡಿ, ಏ.6: ಬಾಬರಿ ಮಸೀದಿ ಕೆಡವಿರುವುದು ಒಂದು ಪೂರ್ವ ಯೋಜಿತ ಕೃತ್ಯವಾಗಿರಲಿಲ್ಲ. ಕರಸೇವಕರ ಆವೇಶಕ್ಕೆ ಮಸೀದಿ ಧ್ವಂಸ ಕಾರ್ಯ ನಡೆದುಹೋಗಿದೆ. ಈಗ ಕೋಬ್ರಾ ಪೋಸ್ಟ್ ಹೊರತಂದಿರುವ ವಿಚಾರಗಳು ಸತ್ಯಕ್ಕೆ ದೂರವಾದುದ್ದಾಗಿದೆ ಎಂದು ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದ್ದಾರೆ. ಬಳಂಜ ದೇವಳದ ಬ್ರಹ್ಮ ಕಲಶೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ವೇಳೆ ಮಾಧ್ಯಮ ದವರೊಂದಿಗೆ ಮಾತನಾಡುತ್ತಾ ಅವರು ವಿಚಾರ ವ್ಯಕ್ತಪಡಿಸಿದರು.

ಘಟನೆಯ ಹಿಂದಿನ ದಿನ ಗುಪ್ತ ಸಭೆ ನಡೆದಿತ್ತು. ಆದರಲ್ಲಿ ತಾನೂ ಭಾಗವಹಿ ಸಿದ್ದೆ. ವಿಶ್ವ ಹಿಂದೂ ಪರಿಷತ್‌ನ ಅಶೋಕ್ ಸಿಂಘಾಲ್, ಆರೆಸ್ಸೆಸ್‌ನ ಮುಖಂಡರುಗಳು ಹಾಗೂ ಸಾಧು ಸಂತರು ಸಭೆಯಲ್ಲಿ ಪಾಲ್ಗೊಂಡಿದ್ದರು. ಸಭೆಯಲ್ಲಿ ಸಾಂಕೇತಿಕ ಕರಸೇವೆ ನಡೆಸುವುದೆಂದು ನಿರ್ಧರಿಸಲಾಗಿತ್ತು. ಶ್ರೀರಾಮ ಕ್ಷೇತ್ರ ಹಾಗೂ ಪರಿಸರವನ್ನು ಶುಚಿಗೊಳಿಸುವುದೆಂದು ಸೂಚನೆ ನೀಡಲಾಗಿತ್ತು. ಅದರಂತೆ ಅಂದಿನ ಪ್ರಧಾನ ಮಂತ್ರಿಯವರಿಗೂ ಮಾಹಿತಿ ನೀಡಲಾಗಿತ್ತು. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

Pejawar Mutt seer Vishweshatheertha Swamiji on Cobrapost Sting

ಆದರೆ ಮಾರನೆ ದಿನ ಕರಸೇವಕರಲ್ಲಿ ಈ ವಿಚಾರ ವ್ಯಕ್ತಪಡಿಸಿ ದಾಗ ಅವರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಅಲ್ಲದೇ ಕೇವಲ ಈ ಕೆಲಸಕ್ಕಾಗಿ ನಮ್ಮನ್ನು ಕರೆಸಿದ್ದೀರಾ ಎಂದು ಆಕ್ರೋಶಿತರಾಗಿ ಮುಂದೆ ಸಾಗಿದರು. ಮುಖಂಡರು ವಿರೋಧಿಸಿದರೂ ಕರಸೇವಕರ ಉತ್ಸಾಹ ಮತ್ತು ಆಕ್ರೋಶಕ್ಕೆ ಬಾಬರಿ ಮಸೀದಿ ಧ್ವಂಸಗೊಂಡಿತು. ಕೋಬ್ರಾ ಪೋಸ್ಟ್‌ನವರ ಕಾರ್ಯಾ ಚರಣೆಯಲ್ಲಿ ಯಾವುದೇ ಹೊಸ ವಿಚಾರ ವಾಗಲಿ, ಸತ್ಯವಾಗಲಿ ಇಲ್ಲ. ಅದೊಂದು ಕಪೋಕಲ್ಪಿತ ಎಂದ ಪೇಜಾವರಶ್ರೀ, ಒಟ್ಟು ಘಟನೆ, ಅಲ್ಲಿ ಏನು ನಡೆಯಿತು ಎಂಬುದು ನನಗೆ ಸ್ಪಷ್ಟವಾಗಿ ಗೊತ್ತಿದೆ. ನಾನು ಅಲ್ಲೇ ಇದ್ದು ಎಲ್ಲವನ್ನು ಗಮನಿಸಿ ದ್ದೇನೆ ಎಂದವರು ವಿವರಿಸಿದರು. ರಾಮ ಮಂದಿರ ನಿರ್ಮಾಣ ಯಾವಾಗ ನಡೆಯಲಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪೇಜಾವರಶ್ರೀ, ಮುಂದಿನ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಈ ಬಗ್ಗೆ ಸೂಕ್ತ ನಿರ್ಧಾರ ಹೊರಬರಲಿದೆ ಎಂದರು.[ಕಾಲಾನುಕ್ರಮದಲ್ಲಿ ಬಾಬ್ರಿ ಮಸೀದಿ ಧ್ವಂಸ]
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+