ರಾಮಮಂದಿರ ಉದ್ಘಾಟನೆ ಆಹ್ವಾನ ವಿವಾದ: ನಿಜಾಂಶ ತಿಳಿಸಿ ತಿರುಗೇಟು ನೀಡಿದ ಪೇಜಾವರ ಶ್ರೀ
ಮಂಗಳೂರು, ಡಿಸೆಂಬರ್ 30: ಕರೆದಿಲ್ಲ ಅಂದರೆ ಕರೆದಿಲ್ಲ ಅನ್ನೋದೇ ದೊಡ್ಡ ಆಕ್ಷೇಪ. ಕರೆದ ಬಳಿಕ ನಾವು ತಿರಸ್ಕರಿಸುತ್ತೇವೆ ಅನ್ನೋದೇ ದೊಡ್ಡ ಹೆಗ್ಗಳಿಕೆ. ರಾಮ ಭಾರತೀಯರೆಲ್ಲರಿಗೂ ಸೇರಿದವನು. ಯಾರಿಗೆ ಬರಬೇಕೆಂದು ಅಪೇಕ್ಷೆ ಇದೆ ಅವರೆಲ್ಲರೂ ಬರಬಹುದು. ಆಹ್ವಾನ ಇಲ್ಲದೆಯೂ ರಾಮಮಂದಿರಕ್ಕೆ ಬರಬಹುದು. ತಿರಸ್ಕಾರ ಮಾಡೋದು ಅವರವರಿಗೆ ಬಿಟ್ಟದ್ದು. ಕಾಮಾಲೆ ಕಣ್ಣಿಗೆ ಕಾಣೋದೆಲ್ಲಾ ಹಳದಿ. ರಾಜಕೀಯ ಟೀಕೆಗಳಿಗೆ ಉತ್ತರ ಕೊಡುವುದಿಲ್ಲ ಎಂದು ಪೇಜಾವರ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ರಾಮಮಂದಿರದ ಉದ್ಘಾಟನೆ ವೇಳೆ ಸ್ವಾಮೀಜಿಗಳಿಗೆ ಆಹ್ವಾನ ನೀಡುವಲ್ಲಿ ತಾರತಮ್ಯ ಎಸಗಲಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅಲ್ಲಿರುವ ಸ್ಥಳಾವಕಾಶ ಅಲ್ಪವಾದದ್ದು. ಅಬ್ಬಬ್ಬಾಂದ್ರೆ 7-8 ಸಾವಿರ ಜನ ಸೇರಬಹುದು. ಲೋಕದಲ್ಲಿ ಮಹಾತ್ಮರು ಗೌರವಾನಿತ್ವರು ಬಹಳ ಮಂದಿ ಇದ್ದಾರೆ. ಯಾರನ್ನು ಕರೆದರೂ ಆಕ್ಷೇಪ ಇರುವಂತಹದ್ದೇ. ಪರಿಸ್ಥಿತಿ ಅವಕಾಶವನ್ನು ಗಮನಿಸಿಕೊಂಡು ಸಮಾಧಾನಪಡಬೇಕು. ಪ್ರಾತಿನಿಧ್ಯವನ್ನು ಆಧರಿಸಿ ಆಹ್ವಾನವನ್ನು ನೀಡಿದ್ದೇವೆ. ಆಹ್ವಾನ ನೀಡದಿರುವ ಬಗ್ಗೆ ಮಂದಿರ, ಟ್ರಸ್ಟ್, ವ್ಯಕ್ತಿಗೆ ಸ್ವಾರ್ಥ, ಲಾಭ ಯಾವುದೂ ಇಲ್ಲ. ಎಲ್ಲರನ್ನೂ ಸಮಾಧಾನಪಡಿಸಲು ಸಾಧ್ಯವಿಲ್ಲ. ಎಲ್ಲರೂ ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಶಾಂತರಾಗಬೇಕು ಎಂದರು.

ಕಲ್ಲಡ್ಕ ಪ್ರಭಾಕರ್ ವಿರುದ್ಧ ಜಾಮೀನು ರಹಿತ ಪ್ರಕರಣದ ಬಗ್ಗೆ ಮಾತನಾಡಿದ ಅವರು, ಒಬ್ಬರ ಕಡೆಯಿಂದ ಏನೂ ತಪ್ಪು ಆಗದಿದ್ದರೂ ತಪ್ಪು ಎಂದು ಭಾರೀ ಪ್ರತಿಭಟನೆ. ಇನ್ನೊಂದು ಕಡೆಯಿಂದ ಏನೇ ತಪ್ಪಾದರೂ ಕಣ್ಮುಚ್ಚಿ, ಬಾಯಿಮಚ್ಚಿ ಇರುವುದು. ಇಂತಹ ನಡೆ ಸರಿಯಲ್ಲ. ಕಲ್ಲಡ್ಕ ಪ್ರಭಾಕರ ಭಟ್ಟರ ಹೇಳಿಕೆ ವ್ಯಕ್ತಿಗತವಾಗಿದ್ದು. ನಾನು ಆ ಬಗ್ಗೆ ಯಾವುದೇ ಅಭಿಪ್ರಾಯ ಕೊಡುವುದು ಸರಿಯಲ್ಲ ಎಂದು ಸ್ವಾಮೀಜಿ ಹೇಳಿದರು.
ಮಂಗಳೂರಿನಲ್ಲಿ ವಿಶ್ವೇಶತೀರ್ಥ ನಮನ ಕಾರ್ಯಕ್ರಮ
ಉಡುಪಿ ಪೇಜಾವರದ ಹಿರಿಯ ಶ್ರೀ ಹರಿಪಾದ ಸೇರಿ ನಾಲ್ಕು ವರ್ಷ ಪೂರ್ಣವಾದ ಹಿನ್ನಲೆಯಲ್ಲಿ ಮಂಗಳೂರಿನ ಮಲ್ಲಿಕಾ ಬಡವಾಣೆಯ ಮಂಜೂಪ್ರಾಸಾದ ನಿಲಯದಲ್ಲಿ ಪೇಜಾವರ ವಿಶ್ವೇಶತೀರ್ಥ ನಮನ ಕಾರ್ಯಕ್ರಮ ನಡೆದಿದೆ. ಈ ಕಾರ್ಯಕ್ರಮದಲ್ಲಿ ಪೇಜಾವರ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ, ಶಿರೂರು ಮಠದ ಶ್ರೀ ವೇದವರ್ಧನ ಸ್ವಾಮೀಜಿ, ಚಿತ್ರಾಪುರ ಮಠದ ವಿದ್ಯೇಂದ್ರತೀರ್ಥ ಸ್ವಾಮೀಜಿ ಭಾಗವಹಿಸಿದ್ದಾರೆ. ಕಲ್ಕೂರ ಪ್ರತಿಷ್ಠಾನದ ಪ್ರದೀಪ್ ಕುಮಾರ್ ಕಲ್ಕೂರ ಅವರ ಮಂಜೂಪ್ರಾಸಾದ ನಿಲಯದಲ್ಲಿ ಈ ಕಾರ್ಯಕ್ರಮ ನಡೆದಿದೆ.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಪೇಜಾವರ ಶ್ರೀ, "ರಾಮಮಂದಿರದ ಕನಸು ನನಸಾಯ್ತು. ರಾಮ ರಾಜ್ಯದ ಕನಸು ನನಸಾಗಬೇಕಿದೆ. ರಾಮ ರಾಜ್ಯದಲ್ಲಿ ದುರ್ಭೀಕ್ಷೆಯಿಲ್ಲ. ಆದ್ದರಿಂದ ದೀನದಲಿತರು, ದುರ್ಬಲರಿಗೆ ಮನೆಕಟ್ಟಿ ಕೊಡುವ ಕೆಲಸ ಮಾಡೋಣ. ರಾಮ ಮಂದಿರದ ಟ್ರಸ್ಟ್‌ಗೆ ಯಾವಾಗ ನಮ್ಮನ್ನು ಸೇರಿಸಿದರೋ ಅಂದಿನಿಂದ ನಾವು ಈ ಕಾರ್ಯವನ್ನು ಮಾಡುತ್ತಿದ್ದೇವೆ. ಉಡುಪಿಯಲ್ಲಿ ಅನೇಕರಿಗೆ ಮಾರ್ಗದರ್ಶನ ಮಾಡಿದ್ದೇವೆ. ಈ ನಿಟ್ಟಿನಲ್ಲಿ ನೂರಾರು ಮನೆಗಳ ನಿರ್ಮಾಣಕ್ಕೆ ಯೋಜನೆ ಹಾಕಿಕೊಳ್ಳಲಾಗಿದೆ" ಎಂದು ಹೇಳಿದರು.
"ಅಯೋಧ್ಯೆ ರಾಮಮಂದಿರದಲ್ಲಿ ಸೇವಾ ಲಿಸ್ಟ್ ಇಲ್ಲ. ಶ್ರೀ ರಾಮನೇ ದೇಶ ಸೇವೆ ಹೇಗೆ ಮಾಡಬೇಕೆಂದು ತೋರಿಸಿಕೊಟ್ಟಿದ್ದಾನೆ. ರಾಮಭಕ್ತಿ ಬೇರೆಯಲ್ಲ, ದೇಶಭಕ್ತಿ ಬೇರೆಯಲ್ಲ. ಈ ಹಿನ್ನೆಲೆಯಲ್ಲಿ ದೇಶ ಸೇವೆಯಲ್ಲ ರಾಮ ಸೇವೆ ಬೇರೆಯಲ್ಲ. ಆದ್ದರಿಂದ ರಾಮ ಸೇವೆ ಮಾಡ ಬಯಸುವವರು ದೇಶ ಸೇವೆ ಮಾಡೋಣ. ಈ ಹಿನ್ನೆಲೆಯಲ್ಲಿ ಅಭಿಯಾನವನ್ನಾಗಿ ಮಾಡುತ್ತೇವೆ. ಇದನ್ನೊಂದು ಟ್ರಸ್ಟ್ ನಂತೆ ಮಾಡಿ ಜಿಲ್ಲೆ ಜಿಲ್ಲೆಗಳಲ್ಲಿ ಸಮಿತಿಗಳನ್ನು ಮಾಡಿ ಯಾವ ಟ್ರಸ್ಟ್‌ಗೂ ಡೊನೇಷನ್ ಕೊಡದೆ ಈ ಮನೆ ನಿರ್ಮಾಣ ಕಾರ್ಯ ಮಾಡಲಾಗುತ್ತದೆ" ಎಂದು ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಡಾ.ಮೋಹನ್ ಆಳ್ವ, ಸಾಹಿತಿ ಲಕ್ಷ್ಮೀಶ್ ತೋಳ್ಪಾಡಿ, ಉದ್ಯಮಿ ಶಿವರಾಮ್ ಬಂಡಾರಿ ಸೇರಿದಂತೆ ಹಲವು ಮಂದಿಗೆ ಪೇಜಾವರ ಶ್ರೀ ಜೀವಮಾನ ಶ್ರೇಷ್ಠ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಕಾರ್ಯಕ್ರಮದ ಮೊದಲು ಪೇಜಾವರ ಶ್ರೀ ದೇಸಿ ತಳಿಗಳಿಗೆ ಗೋಪೂಜೆ ಮಾಡಿದ್ದಾರೆ.
-
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ












Click it and Unblock the Notifications