ಪುಲ್ವಾಮಾ ದಾಳಿಗೆ ಪ್ರತೀಕಾರ :ಮಂಗಳೂರಿನಲ್ಲಿ ವಿಜಯೋತ್ಸವ ಆಚರಿಸಿದ ದೇಶಭಕ್ತರು
ಮಂಗಳೂರು, ಫೆಬ್ರವರಿ 26: ಪುಲ್ವಾಮ ಉಗ್ರರ ದಾಳಿಗೆ ಪ್ರತಿಕಾರವಾಗಿ ಭಾರತೀಯ ವಾಯುಸೇನೆ ಎಲ್ ಓಸಿ ದಾಟಿ ಪಾಕಿಸ್ತಾನದ ಒಳಗೆ ವೈಮಾನಿಕ ದಾಳಿ ನಡೆಸಿದಕ್ಕೆ ಎಲ್ಲೆಡೆ ಹರ್ಷ ಪ್ರಶಂಸೆ, ವಿಜಯೋತ್ಸವ ವ್ಯಕ್ತವಾಗುತ್ತಿದೆ.
ಇದೀಗ ಮಂಗಳೂರಿನ ರಥ ಬೀದಿಯಲ್ಲಿ ದೇಶಭಕ್ತರಿಂದ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ. ವೈಮಾನಿಕ ದಾಳಿ ಬಳಿಕ ಯಾವುದೇ ಪರಿಸ್ಥಿತಿ ಎದುರಿಸಲು ಪ್ರಧಾನಿ ನರೇಂದ್ರ ಮೋದಿಯವರಿಗೆ ಹಾಗೂ ಕೇಂದ್ರ ಸರ್ಕಾರ ಮತ್ತು ಸೇನೆಗೆ ಶಕ್ತಿ, ಮನೋಬಲ ಹೆಚ್ಚಿಸಲು ದೇವರಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.

ನಗರದ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ್ದು, ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಲಾಯಿತು. ಮಸೀದಿ ಚರ್ಚ್ ನಲ್ಲೂ ವಿಶೇಷ ಪ್ರಾರ್ಥನೆ ಸಲ್ಲಿಸಲು ಇದೇ ಸಂದರ್ಭದಲ್ಲಿ ಮನವಿ ಮಾಡಲಾಯಿತು.













Click it and Unblock the Notifications