ಪ್ರಶಾಂತ್ ಪೂಜಾರಿ ಹತ್ಯೆ, ಮುಂಬೈನಲ್ಲಿ ಮುಹಮ್ಮದ್ ಸೆರೆ
ಮೂಡುಬಿದಿರೆ, ಅ.25: ಮೂಡುಬಿದಿರೆ ಬಜರಂಗದಳದ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮತ್ತೋರ್ವ ಆರೋಪಿಯನ್ನು ಮುಂಬೈ ವಿಮಾನನಿಲ್ದಾಣದಲ್ಲಿ ಬಂಧಿಸಿದ್ದಾರೆ.
ಈ ವಿಷಯವನ್ನು ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಎಡಿಜಿಪಿ ಅಲೋಕ್ ಮೋಹನ್ ಅವರು ತಿಳಿಸಿದರು. ಬಂಧಿತ ಆರೋಪಿ ಗಂಟಾಲ್ಕಟ್ಟೆಯ ಮುಹಮ್ಮದ್ (40) ಎಂದು ಹೇಳಲಾಗಿದೆ. ಇಲ್ಲಿಯ ತನಕ ಈ ಪ್ರಕರಣದಲ್ಲಿ ಒಟ್ಟು 9 ಮಂದಿಯನ್ನು ಬಂಧಿಸಲಾಗಿದೆ ಎಂದರು.

ಆರೋಪಿ ವಿದೇಶಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದ ವೇಳೆ ಬಂಧಿಸಲಾಗಿದ್ದು, ಆರೋಪಿ ಮುಹಮ್ಮದ್ ಮುಂಬೈ ಮೂಲಕ ದುಬೈಗೆ ಪರಾರಿಯಾಗಲು ಯತ್ನಿಸಿದ್ದನೆಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಐಜಿಪಿ ಅಮೃತ್ ಪಾಲ್, ಕಮಿಷನರ್ ಮುರುಗನ್, ಎಸ್ಪಿ ಶರಣಪ್ಪ ಉಪಸ್ಥಿತರಿದ್ದರು.
ಭಜರಂಗದಳದಲ್ಲಿ ಗುರುತಿಸಿಕೊಂಡಿದ್ದ ಹೂವಿನ ವ್ಯಾಪಾರಿ ಪ್ರಶಾಂತ್‌ನನ್ನು ಅಕ್ಟೋಬರ್ 9ರ ಶುಕ್ರವಾರ ಮುಂಜಾನೆ ದುಷ್ಕರ್ಮಿಗಳು ಅವರ ಅಂಗಡಿ ಸಮೀಪ ಕೊಲೆ ಮಾಡಿದ್ದರು. ಈ ಕೊಲೆಯನ್ನು ಪ್ರತ್ಯಕ್ಷವಾಗಿ ನೋಡಿದ್ದ ವಾಮನ ಪೂಜಾರಿ ಅವರು ಇತ್ತೀಚೆಗೆ ಮೃತಪಟ್ಟಿದ್ದರು.












Click it and Unblock the Notifications