• search
 • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಂಗಳೂರಿನಲ್ಲಿ ಬೆಳಕಿಗೆ ಬಂತು ವೃದ್ಧನೊಬ್ಬನ ಕಾಮ ಪುರಾಣ

|
   ಮಂಗಳೂರಿನಲ್ಲಿ ಯುವತಿಯರಿಗೆ ಮೋಸ ಮಾಡಿ ಸಿಕ್ಕಿ ಬಿದ್ದ ವೃದ್ಧ | Oneindia Kannada

   ಮಂಗಳೂರು, ಸೆಪ್ಟೆಂಬರ್.24: ಅಪ್ರಾಪ್ತ ಹಾಗೂ ಹರೆಯದ ಯುವತಿಯರಿಗೆ ಆಮಿಷ ತೋರಿಸಿ ಲೈಂಗಿಕವಾಗಿ ಬಳಸಿಕೊಂಡು ಅದನ್ನು ಕ್ಯಾಮೆರಾದಲ್ಲಿ ಸೆರೆಹಿಡಿದು ಬ್ಲಾಕ್ ಮೇಲ್ ಮಾಡುತ್ತಿದ್ದ ವಿಕೃತಕಾಮಿಯೊಬ್ಬನ ವಿಕಟ ರೂಪ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

   ಈ ವಿಕೃತ ಮನಸ್ಸಿನ ವೃದ್ಧ ಎಂಥಹ ಆಸಾಮಿ ಎಂದರೆ ತನ್ನ ಕೃತ್ಯಗಳ ವಿಡಿಯೋ ನೋಡುವುದೇ ಇವನಿಗೊಂದು ಚಟ. ನೋಡಲು ತುಂಬಾ ಸಂಭಾವಿತನಂತಿರುವ ಈ ವೃದ್ಧನ ಬುದ್ಧಿ ಮಾತ್ರ ಖತರ್ನಾಕ್ . ಕೇರಳ ಮೂಲದ ಈತನ ಹೆಸರು ಶಶಿ (65) . ಈ ವೃದ್ಧ ಕಳೆದ ಹಲವು ವರ್ಷಗಳಿಂದ ಯುವತಿಯರಿಗೆ ಆಮಿಷ ತೋರಿಸಿ, ತನ್ನ ಮಂಚಕ್ಕೆ ಕರೆಸಿಕೊಳ್ಳುತ್ತಿದ್ದ.

   ಮಂಡ್ಯದಲ್ಲಿ ಜೀತಕ್ಕಾಗಿ ಮಹಿಳೆಯನ್ನು ಬಲವಂತವಾಗಿ ಎಳೆದೊಯ್ದರು!

   ಅಷ್ಟೇ ಅಲ್ಲ, ಅವರಿಗೆ ಗೊತ್ತಿಲ್ಲದಂತೆ ವಿಡಿಯೋ ಕ್ಯಾಮೆರಾ ಇಟ್ಟು ತನ್ನದೇ ಕಾಮದಾಟವನ್ನು ಚಿತ್ರೀಕರಿಸಿಕೊಳ್ಳುತ್ತಿದ್ದ. ನಂತರ ಅವರನ್ನು ಸತತವಾಗಿ ಬ್ಲಾಕ್ ಮೇಲ್ ಮಾಡಿ ಮತ್ತೆ ಮತ್ತೆ ಕಾಮತೃಷೆ ತೀರಿಸಿಕೊಳ್ಳುತ್ತಿದ್ದ ಈ ಚಪಲ ತೀರದ ವೃದ್ಧ ಎಂದು ಆರೋಪಿಸಲಾಗಿದೆ.

   ಆದರೆ, ಈ ಬಗ್ಗೆ ಅರಿತ ಯುವತಿಯೊಬ್ಬಳು ಆತನ ಕ್ಯಾಮೆರಾದಲ್ಲಿದ್ದ ಚಿಪ್ ಅನ್ನೇ ಕದ್ದು ಸಾಮಾಜಿಕ ಕಾರ್ಯಕರ್ತೆಯೊಬ್ಬರಿಗೆ ನೀಡಿದ್ದರು. ಅದರಂತೆ ಕಾರ್ಯಾಚರಣೆ ನಡೆಸಿದ್ದ ಶ್ರೀಲತಾ ಎಂಬಾಕೆ ವೃದ್ಧನ ಜೊತೆ ಸಲುಗೆಯ ಮಾತನಾಡಿ ಬಲೆಯಲ್ಲಿ ಸಿಕ್ಕಿಬೀಳುವಂತೆ ಮಾಡಿದ್ದರು.

   ಆನಂತರ ಆರೋಪಿ ಶಶಿಯನ್ನು ಮಂಗಳೂರಿನ ಕದ್ರಿ ಠಾಣೆಯ ಪೊಲೀಸರಿಗೆ ಹಸ್ತಾಂತರ ಮಾಡಿದ್ದರು. ಅದಲ್ಲದೇ 15ಕ್ಕೂ ಹೆಚ್ಚು ಯುವತಿಯರ ಜೊತೆ ಈ ವೃದ್ಧ ಕಾಮದಾಟವಾಡಿದ್ದ ಬಗ್ಗೆ ವಿಡಿಯೋ ಚಿತ್ರೀಕರಣದ ಕಾಪಿಯನ್ನೂ ಪೊಲೀಸರಿಗೆ ನೀಡಿದ್ದಾರೆ.

   ಮಕ್ಕಳ ಅಶ್ಲೀಲ ಚಿತ್ರ ಸಂಗ್ರಹಿಸಿದ ಭಾರತೀಯ ವ್ಯಕ್ತಿಗೆ ಅಮೆರಿಕದಲ್ಲಿ 4 ವರ್ಷ ಜೈಲು

   ಆದರೆ ಕದ್ರಿ ಠಾಣೆ ಪೊಲೀಸರು ಆತನ ವಿರುದ್ಧ ದೂರು ದಾಖಲಾಗಿಲ್ಲವೆಂಬ ನೆಪದಲ್ಲಿ ವೃದ್ಧನನ್ನು ಬಂಧಿಸದೆ ಬಿಟ್ಟಿದ್ದಾರೆ. ಹರೆಯದ ಬಾಲಕಿಯರನ್ನು, ಯುವತಿಯರನ್ನು ಬಳಸಿಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದಾನೆಂದು ಮೌಖಿಕ ದೂರಿತ್ತಿದ್ದರೂ, ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಲಾಗಿದೆ.

   ಆದರೆ, ಆರೋಪಿ ಶಶಿ ತನ್ನನ್ನು ಬಯಲು ಮಾಡಿದ್ದ ಸಾಮಾಜಿಕ ಕಾರ್ಯಕರ್ತೆ ಶ್ರೀಲತಾ ವಿರುದ್ಧವೇ ಬರ್ಕೆ ಪೊಲೀಸ್ ಠಾಣೆಯಲ್ಲಿ ರಾಬರಿ ಪ್ರಕರಣ ದಾಖಲಿಸಿದ್ದಾನೆ. ಇದರಿಂದಾಗಿ ಪೊಲೀಸರು ಶ್ರೀಲತಾಳನ್ನು ವಶಕ್ಕೆ ಪಡೆದಿದ್ದಾರೆ.

   ಬೆಳ್ತಂಗಡಿ: ಪ್ರೀತಿಸಲು ನಿರಾಕರಿಸಿದ ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನ

   ಹೀಗಾಗಿ ಪ್ರಕರಣದಲ್ಲಿ ಪೊಲೀಸರ ನಡೆಯೇ ಸಂಶಯ ಹುಟ್ಟಿಸಿದ್ದು, ವಿಕೃತ ಮನಸ್ಸಿನ ವೃದ್ಧನನ್ನು ಬಿಟ್ಟು, ಹಿಡಿದು ಕೊಟ್ಟವರನ್ನೇ ಬಂಧಿಸಲು ಮುಂದಾಗಿದ್ದು ಮಾತ್ರ ದುರ್ದೈವದ ಸಂಗತಿ .

   English summary
   65 year old man's sexual harassment exposed by social worker in Mangaluru. Old man identified as Shashi (65) native of Kerala.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X