Kambala Race: ಕಂಬಳದಲ್ಲಿ ನಿಶಾಂತ್ ಶೆಟ್ಟಿ ದಾಖಲೆ: ಅತೀ ಕಡಿಮೆ ಸಮಯದಲ್ಲಿ 100 ಮೀ. ಓಟ
ಮಂಗಳೂರು ಏಪ್ರಿಲ್ 11 (ಪಿಟಿಐ): ಕರಾವಳಿ ಕರ್ನಾಟಕ ಜಿಲ್ಲೆಗಳಲ್ಲಿ ಜನಪ್ರಿಯವಾಗಿರುವ ಕೋಣಗಳ ಓಟದ ಸ್ಪರ್ಧೆ ಕಂಬಳದಲ್ಲಿ ನಿಶಾಂತ್ ಶೆಟ್ಟಿ ಹೊಸ ದಾಖಲೆ ಬರೆದಿದ್ದಾರೆ. ದಕ್ಷಿಣದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ 30 ವರ್ಷದ ನಿಶಾಂತ್ ಶೆಟ್ಟಿ ತಮ್ಮ ಜೋಡಿ ಕೋಣಗಳೊಂದಿಗೆ 8.36 ಸೆಕೆಂಡುಗಳಲ್ಲಿ 100 ಮೀಟರ್ ಕ್ರಮಿಸುವ ಮೂಲಕ ಕಂಬಳ ಓಟದಲ್ಲಿ ದಾಖಲೆ ಸೃಷ್ಟಿಸಿದ್ದಾರೆ. ಇವರು ಉಸೇನ್ ಬೋಲ್ಟ್ ಎಂಬ ಶ್ರೀನಿವಾಸ ಗೌಡ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಮುರುದಿದ್ದಾರೆ.
ಹಾಲಿ ಚಾಂಪಿಯನ್ ಗೌಡ ಕಳೆದ ವರ್ಷ ಜಿಲ್ಲೆಯ ಕಕ್ಕೆಪದವುನಲ್ಲಿ ನಡೆದ ಸತ್ಯಧರ್ಮ ಜೋಡುಕೆರೆ ಕಂಬಳದಲ್ಲಿ 8.78 ಸೆಕೆಂಡುಗಳಲ್ಲಿ ಓಟ ಮುಗಿಸಿದ್ದರು. ಕ್ವಾರ್ಟರ್‌ಫೈನಲ್ ರೇಸ್‌ನಲ್ಲಿ ವೇಣೂರು ಪೆರ್ಮುಡ ಸೂರ್ಯಚಂದ್ರ ಜೋಡುಕೆರೆ ಕಂಬಳದಲ್ಲಿ ಅದ್ಬುತ ಪ್ರದರ್ಶನ ನೀಡಿದ ಬಜಗೋಳಿ ಜೋಡಿ ಕೋಣಗಳು ನಿಶಾಂತ್ ಶೆಟ್ಟಿ ಓಟದ ಉದಯೋನ್ಮುಖ ತಾರೆಯಾಗಿವೆ.
ಜಗತ್‌ಪ್ರಸಿದ್ಧ ಕ್ರೀಡಾಪಟು ಉಸೇನ್ ಬೋಲ್ಟ್ 100 ಮೀಟರ್ ಓಟವನ್ನು 9.58 ಸೆಕೆಂಡ್‌ಗೆ ಪೂರ್ಣಗೊಳಿಸಿರುವ ದಾಖಲೆ ಇದೆ. ಕಳೆದ ವರ್ಷ 8.78 ಸೆಕೆಂಡ್‌ಗೆ ಕಂಬಳದಲ್ಲಿ 100 ಮೀಟರ್ ಓಡುವ ಮೂಲಕ ಹಾಲಿ ಚಾಂಪಿಯನ್ ಶ್ರೀನಿವಾಸ ಗೌಡ ಅವರು ಉಸೇನ್ ಬೋಲ್ಟ್ ದಾಖಲೆ ಮುರಿದಿದ್ದಾರೆ ಎಂದು ಖ್ಯಾತಿ ಗಳಿಸಿದ್ದರು. ಈಗ ನಿಶಾಂತ್ ಶೆಟ್ಟಿ ಶ್ರೀನಿವಾಸಗೌಡ ಅವರ ದಾಖಲೆಯನ್ನೂ ಮುರಿದಿದ್ದಾರೆ.

ಈವೆಂಟ್ 125 ಮೀಟರ್ ಸ್ಪರ್ಧೆಯಾಗಿತ್ತು. ನಿಶಾಂತ್ ಶೆಟ್ಟಿ ಅವರು ಇದನ್ನು ಎಲ್ಲರಿಗಿಂತ ಕಡಿಮೆ ಸಮಯದಲ್ಲಿ ಅಂದರೆ 10.44 ಸೆಕೆಂಡುಗಳಲ್ಲಿ ತಲುಪಿದ್ದಾರೆ. 100 ಮೀಟರ್‌ಗಳನ್ನು ತಲುಪಲು ತೆಗೆದುಕೊಂಡ ಈ ಸಮಯವನ್ನು ದಾಖಲೆಗಳಲ್ಲಿ ನೋಂದಾಯಿಸಲಾಗಿದೆ ಎಂದು ಕಂಬಳದ ಅನುಭವಿಗಳು ಹೇಳಿದ್ದಾರೆ.
ವೇಣೂರು ಕಂಬಳದಲ್ಲಿ ಒಟ್ಟು 151 ಜೋಡಿ ಎಮ್ಮೆಗಳು ಭಾಗವಹಿಸಿದ್ದವು ಎಂದು ಮೂಲಗಳು ತಿಳಿಸಿವೆ. ಕಂಬಳ ಎಂಬುದು ತುಳುನಾಡು ಎಂದು ಕರೆಯಲ್ಪಡುವ ಕರಾವಳಿ ಕರ್ನಾಟಕದಲ್ಲಿ ಕೆಸರು ಗದ್ದೆಗಳಲ್ಲಿ ನಡೆಯುವ ವಾರ್ಷಿಕ ಕೋಣ ಓಟವಾಗಿದೆ. ಈ ಕೋಣಗಳನ್ನು ಜಾಕಿ ಓಡಿಸುತ್ತಾನೆ. ಕಂಬಳ ಗ್ರಾಮಸ್ಥರಿಗೆ ಅದ್ಭುತ ಕ್ರೀಡಾ ಮತ್ತು ಮನರಂಜನಾ ಕಾರ್ಯಕ್ರಮವಾಗಿದ್ದು ಪ್ರವಾಸಿಗರು ಮತ್ತು ಛಾಯಾಗ್ರಾಹಕರೂ ಉತ್ಸಾಹದಿಂದ ಕಂಬಳಕ್ಕೆ ಸಾಕ್ಷಿಯಾಗುತ್ತಾರೆ.

ಕರಾವಳಿ ಕರ್ನಾಟಕದ 45 ಕ್ಕೂ ಹೆಚ್ಚು ವಿವಿಧ ಗ್ರಾಮಗಳು ಪ್ರತಿವರ್ಷ ಕಂಬಳ ಓಟವನ್ನು ಆಚರಿಸುತ್ತವೆ. ಕೆಲವು ಜನಪ್ರಿಯ ಸ್ಥಳಗಳು:
ಕದ್ರಿ & ಪಿಲಿಕುಲ, ಮಂಗಳೂರು
ಮೂಡುಬಿದಿರೆ ಮತ್ತು ಪುತ್ತೂರು
ಕಕ್ಕೆ ಪಡವು
ಕುಲೂರು ಮತ್ತು ಸುರತ್ಕಲ್
ಉಪ್ಪಿನಂಗಡಿ
ವೇಣೂರು
ಈ ಸ್ಪರ್ಧೆಯಲ್ಲಿ ಭಾಗವಹಿಸುವ ಕೋಣ ಮಾಲೀಕರು ಮತ್ತು ರೈತರು ತಮ್ಮ ಕೋಣಗಳ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸುತ್ತಾರೆ ಮತ್ತು ಅವುಗಳಲ್ಲಿ ಕೆಲವನ್ನು ಕಂಬಳಕ್ಕಾಗಿಯೇ ವಿಶೇಷವಾಗಿ ಸಲಹಿ ಉತ್ತಮ ಆಹಾರ, ಎಣ್ಣೆಯ ಮಾಲಿಶ್ ಮಾಡಿ ಪೋಷಿಸಲಾಗುತ್ತದೆ. ಕಂಬಳ ಓಟದ ಸಮಯದಲ್ಲಿ ಸಾಮಾನ್ಯವಾಗಿ ಕೋಣಗಳನ್ನು ಜೋಡಿಯಾಗಿ ಓಡಿಸಲಾಗುತ್ತದೆ, ಇವನ್ನು ನೇಗಿಲು ಮತ್ತು ಹಗ್ಗ ಬಳಸಿ ನಿಯಂತ್ರಿಸಲಾಗುತ್ತದೆ. ಈ ಅತ್ತ್ಯುತ್ತಮ ಕಂಬಳದ ಕೋಣಗಳು 140 ಮೀಟರ್ ಓಟವನ್ನು 12 ಸೆಕೆಂಡುಗಳಿಗಿಂತ ಕಡಿಮೆ ಅವಧಿಯಲ್ಲಿ ಕ್ರಮಿಸಬಲ್ಲವು. ಭಾರತದ ಗೌರವಾನ್ವಿತ ಸುಪ್ರೀಂ ಕೋರ್ಟ್ ಕಂಬಳ ಕೋಣಗಳಿಗೆ ಹಾನಿಯಾಗದಂತೆ, ಚಿತ್ರಹಿಂಸೆ ನೀಡದೆ ಅಥವಾ ಇನ್ನಾವುದೇ ತೊಂದರೆ ಕೊಡದಂತೆ ನೋಡಿಕೊಳ್ಳಲು ಹಲವಾರು ಮಾರ್ಗಸೂಚಿಗಳನ್ನು ಹೊರಡಿಸಿದೆ. ಕಂಬಳದ ಸಮಯ ಈ ಮಾರ್ಗಸೂಚಿಗಳನ್ನು ಚಾಚೂ ತಪ್ಪದೆ ಪಾಲಿಸಲಾಗುತ್ತದೆ.












Click it and Unblock the Notifications