ನಿಪಾಹ್ ವೈರಸ್ ಆತಂಕ: ದ.ಕ. ಜಿಲ್ಲೆ ಶ್ರೀ ಕ್ಷೇತ್ರಗಳಲ್ಲಿ ಕಟ್ಟೆಚ್ಚರ

ಮಂಗಳೂರು, ಮೇ 24 : ಕೇರಳದಲ್ಲಿ ಅತೀ ವೇಗವಾಗಿ ಹರಡುತ್ತಿರುವ ಮಾರಣಾಂತಿಕ ನಿಪಾಹ್ ವೈರಸ್ ಆತಂಕ ಧಾರ್ಮಿಕ ಕ್ಷೇತ್ರಗಳ ಮೇಲೂ ಆವರಿಸಿದೆ. ಕರಾವಳಿಯ ಉದ್ದಕ್ಕೂ ಇರುವ ಶ್ರೀ ಕ್ಷೇತ್ರಗಳಿಗೆ ಕೇರಳದ ಭಕ್ತಾದಿಗಳು ಭೇಟಿ ನೀಡುತ್ತಾರೆ.

ಈ ಹಿನ್ನೆಲೆಯಲ್ಲಿ ಈ ಕ್ಷೇತ್ರಗಳಿಗೆ ನಿಪಾಹ್ ವೈರಸ್ ಸೊಂಕಿತರು ಭೇಟಿ ನೀಡುವ ಸಾಧ್ಯತೆ ಇರುವ ಹಿನ್ನಲೆಯಲ್ಲಿ ಈ ಕ್ಷೇತ್ರಗಳಿಗೆ ಬರುವ ಕೇರಳದ ಭಕ್ತಾದಿಗಳ ಮೇಲು ಆರೋಗ್ಯ ಇಲಾಖೆ ನಿಗಾ ಇರಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ , ಧರ್ಮಸ್ಥಳ, ಮಂಗಳಾದೇವಿ , ಕಟೀಲು ದುರ್ಗಾಪರಮೆಶ್ವರಿ ದೇವಾಲಯ ಸೇರಿದಂತೆ ಉಡುಪಿಯ ಶ್ರೀಕ್ಷೇತ್ರ ಕೊಲ್ಲೂರಿಗೆ ಕೇರಳದ ಭಕ್ತರು ಭೇಟಿ ನೀಡುವುದು ಸರ್ವೇಸಾಮಾನ್ಯ .

 Nipah virus threat alert announced in Dakshina kannada

ಅದರಲ್ಲೂ ಕೊಲ್ಲೂರು ಶ್ರೀ ಮುಕಾಂಬಿಕಾ ದೇವಾಲಯಕ್ಕೆ ಕೇರಳ, ಆಂಧ್ರ, ತಮಿಳುನಾಡಿನಿಂದ ಅತಿ ಹೆಚ್ಚು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ. ಈ ಭಕ್ತರಲ್ಲಿ ಜ್ವರ ಪೀಡಿತರಿದ್ದರೇ ಕೂಡಲೇ ಜಿಲ್ಲಾ ಆರೋಗ್ಯ ಇಲಾಖೆಗೆ ಮಾಹಿತಿ ನೀಡುವಂತೆ ಸೂಚನೆ ನೀಡಲಾಗಿದೆ.

 Nipah virus threat alert announced in Dakshina kannada

ಶ್ರೀ ಕ್ಷೇತ್ರಗಳ ಬಸ್ ನಿಲ್ದಾಣ ಹಾಗು ರೈಲ್ವೇ ಸ್ಟೇಶನ್ ಗಳಿಗೆ ಬಂದಿಳಿಯುವ ಭಕ್ತಾದಿಗಳ ಮೇಲೆ ಹಚ್ಚಿನ ಗಮನ ಕೇಂದ್ರಿಕರಿಸಲಾಗಿದೆ. ನಿಪಾಹ್ ವೈರಸ್ ಪ್ರಭಾವ ಶ್ರೀ ಕ್ಷೇತ್ರಕ್ಕೆ ಆಗಮಿಸುವ ಭಕ್ತರ ಮೇಲೂ ಬಿದ್ದಿದ್ದು ಕೇರಳದ ಭಕ್ತಾದಿಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ.

 Nipah virus threat alert announced in Dakshina kannada

ಉಡುಪಿ ಹಾಗು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಪಾಹ್ ವೈರಸ್ ಸೊಂಕು ಭಾದಿತ ರೋಗಿಗಳು ಪತ್ತೆಯಾದರೆ ಅವರಿಗೆ ಚಿಕಿತ್ಸೆ ನೀಡಲು ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್ ಗಳನ್ನು ತೆರೆಯಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+