ನೇತ್ರಾವತಿ ನದಿ ತಿರುವು ಮುಗಿದ ಅಧ್ಯಾಯ: ವೀರಪ್ಪ ಮೊಯ್ಲಿ
ಬೆಂಗಳೂರು, ಫೆ. 22 : ನೇತ್ರಾವತಿ ನದಿ ತಿರುವು ಯೋಜನೆ ಮುಗಿದ ಅಧ್ಯಾಯ. ಆ ಬಗ್ಗೆ ಇನ್ನು ಯಾರೂ ಮಾತನಾಡುವಂತಿಲ್ಲ ಎಂದು ಸಂಸದ ಎಂ. ವೀರಪ್ಪ ಮೊಯ್ಲಿ ಹೇಳಿದ್ದಾರೆ.
ಬಂಟ್ವಾಳ, ತುಂಬೆ ಹೊಸ ಡ್ಯಾಂ ಕಾಮಗಾರಿ ವೀಕ್ಷಿಸಿ ಮಾತನಾಡಿದ ಅವರು, ನೇತ್ರಾವತಿ ನದಿ ತಿರುವು ಯೋಜನೆ ಬಗ್ಗೆ ಸಾರ್ವಜನಿಕವಾಗಿ ತಪ್ಪು ಕಲ್ಪನೆ ನೀಡಲಾಗುತ್ತಿದೆ. ನೇತ್ರಾವತಿ ನದಿ ತಿರುವು ಬಿಡಿ, ಒಂದು ಹನಿ ನೀರು ಹೊರಗೆ ಹೋಗಲು ಬಿಡಬಾರದು ಎಂದು ಹೇಳಿದರು.[ಎತ್ತಿನಹೊಳೆ 2 ವರ್ಷದಲ್ಲಿ ಪೂರ್ಣ: ವೀರಪ್ಪ ಮೊಯ್ಲಿ]

ಡಿಸೆಂಬರ್ ಅಂತ್ಯದೊಳಗೆ ಡ್ಯಾಂ ಕಾಮಗಾರಿ ಪೂರ್ಣಗೊಳ್ಳಲಿದೆ. ಕಾಮಗಾರಿಗೆ ರಾಜ್ಯ ಸರ್ಕಾರ 75 ಕೋಟಿ ಅನುದಾನ ಬಿಡುಗಡೆಯಾಗಿದ್ದು ಮಂಗಳೂರು ಮಹಾನಗರ ಪಾಳಿಕೆಯು ಅನುದಾನ ನೀಡುತ್ತಿದೆ. ಹೊಸ ಡ್ಯಾಂ ನ ನೀರನ್ನು ಸಂಪೂರ್ಣ ಉಪಯೋಗಕ್ಕೆ ತೆಗೆದುಕೊಳ್ಳಲಾಗುವುದು ಎಂದರು.
ತುಂಬೆ ಡ್ಯಾಂ ಕಾಮಗಾರಿ ತ್ವರಿತ: ಅನುದಾನ ಕೊರತೆಯಿಂದ ಸ್ಥಗಿತಗೊಂಡಿರುವ ತುಂಬೆ ಡ್ಯಾಂ ಕಾಮಗಾರಿಯು ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ತ್ವರಿತಗೊಂಡಿದೆ. ಸ್ಥಳೀಯರ ದಾರಿ ಹಕ್ಕು ಹಾಗೂ ಕೃಷಿಕರ ನೀರಿನ ಹಕ್ಕು ನೀಡುವ ಬಗ್ಗೆ ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ ಹಾಗೂ ಉನ್ನತಾಕಾರಿಗಳೊಂದಿಗೆ ಚರ್ಚಿಸಿ ಕ್ರಮ ಜರುಗಿಸಲಾಗುವುದು ಎಂದು ಇದೇ ವೇಳೆ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಪ್ರತಿಕ್ರಿಯಿಸಿದರು.

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮೇಯರ್ ಮಹಾಬಲ ಮಾರ್ಲ, ಉಪಮೇಯರ್ ಕವಿತಾ, ಕಾರ್ಪೊರೇಟರ್‌ಗಳಾದ ಶೈಲಜಾ, ಅಪ್ಪಿ, ಜೆಸಿಂತಾ, ಕೇಶವ, ಅಶೋಕ್ ಡಿ.ಕೆ., ಭಾಸ್ಕರ್, ಶಶಿಧರ್ ಹೆಗ್ಡೆ, ಜಿಪಂ ಸದಸ್ಯರಾದ ಮಮತಾ ಗಟ್ಟಿ, ಚಂದ್ರಪ್ರಕಾಶ್ ಶೆಟ್ಟಿ, ಪ್ರಮುಖರಾದ ಸುದರ್ಶನ್ ಜೈನ್, ಎಸ್. ಅಬ್ಬಾಸ್ ಸಜೀಪ, ಕೆ. ಪದ್ಮನಾ' ರೈ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಯೋಜನೆ ಮಂಡಳಿಯ ಕಾರ್ಯನಿರ್ವಾಹಕ ಇಂಜಿನಿಯರ್ ರಾಜಶೇಖರ್, ನರೇಶ್ ಶೆಣೈ, ಸಹಾಯಕ ಎಂಜಿನಿಯರ್ ಶೀನ ಮೂಲ್ಯ ಹಾಜರಿದ್ದರು.
ಉದ್ದೇಶಿತ ಹೊಸ ಡ್ಯಾಂ ಯೋಜನೆಗೆ ಇನ್ನೂ ವೈಜ್ಞಾನಿಕ ಸರ್ವೇ ಕಾರ್ಯ ಮುಕ್ತಾಯವಾಗಿಲ್ಲ. ಸಂತ್ರಸ್ತರಿಗೆ ಪರಿಹಾರ ಘೊಷಣೆ ಮಾಡಲಾಗಿಲ್ಲ ಎಂದು ಜಿಪಂ ಸದಸ್ಯೆ ಡಿ.ಎಸ್. ಮಮತಾ ಗಟ್ಟಿ ಆರೋಪ ಮಾಡಿದ ಘಟನೆಯೂ ನಡೆಯಿತು.












Click it and Unblock the Notifications