ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳ್ತಂಗಡಿಯಲ್ಲಿ ನಕ್ಸಲರು ಪ್ರತ್ಯಕ್ಷ, ಕಾರಿಗೆ ಬೆಂಕಿ

|
Google Oneindia Kannada News

ಮಂಗಳೂರು, ನ.9 : ಕೆಲವು ದಿನಗಳಿಂದ ಕಣ್ಮರೆ ಆಗಿದ್ದ ನಕ್ಸಲರು ಬೆಳ್ತಗಂಡಿಯಲ್ಲಿ ಶನಿವಾರ ಮುಂಜಾನೆ ಕಾಣಿಸಿಕೊಂಡಿದ್ದಾರೆ. ರಾಮಚಂದ್ರ ಭಟ್ ಎಂಬುವವರ ಮನೆಗೆ ಬಂದ ನಕ್ಸಲರು ಅವರ ಕಾರು ಮತ್ತು ಬೈಕ್ ಗಳಿಗೆ ಬೆಂಕಿ ಹಚ್ಚಿದ್ದಾರೆ, ಮನೆಯ ಬಾಗಿಲು ತೆರೆಯುವಂತೆ ಬೆದರಿಕೆ ಹಾಕಿದ್ದಾರೆ.

ಬೆಳ್ತಂಗಡಿಯ ಸಮೀಪದ ಕುತ್ಲೂರಿನ ಗ್ರಾಮ ಪಂಚಾಯತ್ ಸದ್ಯ ರಾಮಚಂದ್ರ ಭಟ್ ಅವರ ಮನೆಗೆ ಶನಿವಾರ ಮುಂಜಾನೆ 2.30ರ ಸುಮಾರಿಗೆ ಆಗಮಿಸಿದ 10 ರಿಂದ 15ಮಂದಿ ನಕ್ಸಲರ ತಂಡ ಮನೆ ಬಾಗಿಲು ತೆರಯುವಂತೆ ಬೆದರಿಕೆ ಹಾಕಿದೆ. ರಾಮಚಂದ್ರ ಭಟ್ ಬಾಗಿಲು ತೆರಯಲು ನಿರಾಕರಿಸಿದ್ದರಿಂದ, ಅವರ ಮಾರುತಿ ಓಮ್ನಿ ಕಾರು ಮತ್ತು ಬೈಕ್ ಗಳಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ.

mangalore

ರಾಮಚಂದ್ರ ಭಟ್ ಪೊಲೀಸ್ ಮಾಹಿತಿದಾರರು ಎಂಬ ಶಂಕೆಯ ಹಿನ್ನಲೆಯಲ್ಲಿ ಅವರ ನಿವಾಸಕ್ಕೆ ನಕ್ಸಲರು ಆಗಮಿಸಿ ಬೆದರಿಕೆ ಹಾಕಿದ್ದಾರೆ ಎಂದು ತಿಳಿದು ಬಂದಿದೆ. ಭಟ್ ಮನೆಯ ಬಾಗಿಲು ತೆರೆಯದಿದ್ದರಿಂದ ಆಗಬಹುದಾಗಿದ್ದ ಭಾರೀ ಅನಾಹುತ ತಪ್ಪಿದೆ. ಸ್ಥಳಕ್ಕೆ ನಕ್ಸಲ್ ನಿಗ್ರಹ ಪಡೆಯ ಮುಖ್ಯಸ್ಥ ಸೀಮಂತ್ ಕುಮಾರ್ ಸಿಂಗ್ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಘಟನೆಯ ಕುರಿತು ಮಾಹಿತಿ ನೀಡಿರುವ ಪಶ್ಚಿಮ ವಲಯ ಐಜಿಪಿ ಪ್ರತಾಪ್ ರೆಡ್ಡಿ, ಪುತ್ತೂರು ಭಾಗದಲ್ಲಿ ಕೆಲವು ದಿನಗಳಿಂದ ನಕ್ಸಲರು ಕಾಣಿಸಿಕೊಂಡಿಲ್ಲ. ಆದೆರೆ, ರಾಮಚಂದ್ರ ಭಟ್ 10 ರಿಂದ 15 ಜನರು ಬಂದಿದ್ದರು ಎಂದು ದೂರು ನೀಡಿದ್ದಾರೆ. ನಕ್ಸಲ್ ನಿಗ್ರಹ ಪಡೆ ಅವರಿಗಾಗಿ ಕಾಡಿನಲ್ಲಿ ಹುಡುಕಾಟ ನಡೆಸಿದೆ ಎಂದು ಹೇಳಿದ್ದಾರೆ.

ಕೆಲವು ವರ್ಷಗಳಿಂದ ಎನ್ ಜಿ ಓ ನಡೆಸುತ್ತಿರುವ ರಾಮಚಂದ್ರ ಭಟ್, ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವ ಸರ್ಕಾರದ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದರು. ಸರ್ಕಾರದ ಪ್ಯಾಕೇಜನ್ನು ಪಡೆದು ಸ್ವಯಂ ಪ್ರೇರಣೆಯಿಂದ ಬದುಕು ಕಲ್ಪಿಸುವ ನಿಟ್ಟಿನಲ್ಲಿ ಅರಣ್ಯವಾಸಿಗಳಿಗೆ ಸಹಾಯ ಮಾಡುತ್ತಿದ್ದರು. (ಪಿಟಿಐ ಚಿತ್ರ)

English summary
A group of Naxals visited a house at Kutlur near Belthangady on Saturday, November 9 early morning. Naxals visited the house of Ramachandra Bhat around 2.30am and threaten them to open door. Bhat refuse to open door, Naxals burnt down car and bike belongs to Ramachandra Bhat. Anti-Naxal Force visited the house and investigating.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X