ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಕ್ಸಲ್ ತಂಡ ಪತ್ತೆ, ಪೊಲೀಸರಿಂದ ಕೂಂಬಿಕ್ ಕಾರ್ಯಾಚರಣೆ

By ಕಿರಣ್ ಸಿರ್ಸಿಕರ್
|
Google Oneindia Kannada News

ಮಂಗಳೂರು, ಜನವರಿ 16: ದಕ್ಷಿಣಕನ್ನಡ ಕಾಡಂಚಿನಲ್ಲಿ ಮತ್ತೆ ನಕ್ಸಲರ ಪ್ರತ್ಯಕ್ಷರಾಗಿದ್ದಾರೆ. ನಿನ್ನೆ ಪುತ್ತೂರು ತಾಲೂಕಿನ ಅಡ್ಡಹೊಳೆ ಎಂಬಲ್ಲಿ ಶಸ್ತ್ರ ಸಜ್ಜಿತ ನಕ್ಸಲ್ ತಂಡ ಪತ್ತೆಯಾಗಿದೆ.

ಈ ಹಿಂದೆ ದಕ್ಷಿಣ ಕನ್ನಡ , ಉಡುಪಿ ಸೇರಿದಂತೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಲ ಕಳೆದುಕೊಂಡಿದ್ದ ನಕ್ಸಲರು ಕೇರಳದತ್ತ ಪಲಾಯನ ಮಾಡಿದ್ದಾರೆ ಎಂದು ಹೇಳಲಾಗಿತ್ತು.

ಮಹಾರಾಷ್ಟ್ರದಲ್ಲಿ 5 ಮಹಿಳೆಯರು ಸೇರಿದಂತೆ 7 ನಕ್ಸಲರ ಹತ್ಯೆಮಹಾರಾಷ್ಟ್ರದಲ್ಲಿ 5 ಮಹಿಳೆಯರು ಸೇರಿದಂತೆ 7 ನಕ್ಸಲರ ಹತ್ಯೆ

ಈ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರ ತಂಡ ಹಾಗೂ ಎಎನ್ ಎಫ್ ತಂಡ ಅಡ್ಡಹೊಳೆ ಪ್ರದೇಶಕ್ಕೆ ತೆರಳಿ ತನಿಖೆ ಆರಂಭಿಸಿವೆ. ಉಪ್ಪಿನಂಗಡಿಯ ಅಡ್ಡಹೊಳೆ ಪ್ರದೇಶದಲ್ಲಿ ಒರ್ವ ಯುವತಿ ಸೇರಿದಂತೆ ಮೂವರು ಸದಸ್ಯರಿದ್ದ ನಕ್ಸಲ್ ರ ತಂಡ ಪತ್ತೆಯಾಗಿತ್ತು.

naxals found in Dakshin Kannada district Puttur

ಅಡ್ಡಹೊಳೆಯ ಮೋಹನ್ ಎಂಬವರ ಮನೆಗೆ ಬಾನುವಾರ ಸಂಜೆ 7 ಗಂಟೆ ಸುಮಾರಿಗೆ ಬಂದ ತಂಡ ಮನೆಯಲ್ಲಿ ಊಟ ಸೇವಿಸ ದಿನಸಿ ವಸ್ತುಗಳನ್ನು ಪಾರ್ಸೆಲ್ ಕೊಂಡು ಹೊಗಿದ್ದಾರೆ ಎಂದು ಹೇಳಲಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ಉಪ್ಪಿನಂಗಡಿ ಪೊಲೀಸರು , ಸುರೇಶ್ ,ಲೀಲಾ ಹಾಗು ಮೋಹನ್ ಅವರ ಮನೆಗೆ ತೆರಳಿ ತನಿಖೆ ನಡೆಸಿದ್ದಾರೆ.

ರಾಜ್ಯದ ಯೋಧ ಮಂಜುನಾಥ ಜಕ್ಕಣ್ಣವರ್ ಹುತಾತ್ಮರಾಜ್ಯದ ಯೋಧ ಮಂಜುನಾಥ ಜಕ್ಕಣ್ಣವರ್ ಹುತಾತ್ಮ

ದಕ್ಷಿಣ ಕನ್ನಡ ಎಸ್ ಪಿ ಸುದೀರ್ ಕುಮಾರ್ ರೆಡ್ಡಿ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ. ಪುತ್ತೂರು ಹಾಗೂ ಬೆಳ್ತಂಗಡಿ ಭಾಗದ ಅರಣ್ಯ ಪ್ರದೇಶದಲ್ಲಿ ಪೊಲೀಸರು ಈಗಾಗಲೇ ನಕ್ಸಲರಿಗಾಗಿ ಕೂಂಬಿಕ್ ಕಾರ್ಯಾಚರಣೆ ಆರಂಭಿಸಿದ್ದಾರೆ.

English summary
Naxals group of one lady and 3 men were found in Dakshina Kannada district, Puthur Taluk, Addahole village. Naxals came to a house and had dinner and took some groceries. Police began search.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X