ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಿನಲ್ಲಿ ಮೋದಿ ಕಾರ್ಯಕ್ರಮ: ಮೈದಾನದ ಸುತ್ತಮುತ್ತಲಿನ ಟೆಂಟ್‌ಗಳ ಎತ್ತಂಗಡಿ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಆ. 29: ಪ್ರಧಾನಿ ನರೇಂದ್ರ ಮೋದಿಯವರು ಸೆಪ್ಟೆಂಬರ್‌ 2ರಂದು ಮಂಗಳೂರಿಗೆ ಭೇಟಿ ನೀಡಲಿದ್ದಾರೆ. ಬಂಗ್ರಕೂಳೂರಿನ ಗೋಲ್ಡ್ ಪಿಂಚ್ ಸಿಟಿಯಲ್ಲಿ ಬೃಹತ್ ಸಾರ್ವಜನಿಕ ‌ಕಾರ್ಯಕ್ರಮ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಪೂರ್ವ ತಯಾರಿಯ ವೇಳೆ ಅಲ್ಲಿ ವಾಸವಾಗಿದ್ದ 30ಕ್ಕೂ ಅಧಿಕ ಟೆಂಟ್‌ ನಿವಾಸಿಗಳನ್ನು ತೆರವುಗೊಳಿಸಿರುವ ಆರೋಪ ಕೇಳಿಬಂದಿದೆ.

ಪ್ರಧಾನಿ ನರೇಂದ್ರ ಮೋದಿಯವರ ಸಾರ್ವಜನಿಕ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಭದ್ರತಾ ಕಾರಣಗಳಿಗಾಗಿ ನಗರದಲ್ಲಿ ಮುಂಜಾಗ್ರತಾ ಕ್ರಮಕ್ಕೆ ಮುಂದಾಗಿದ್ದಾರೆ. ಪಾರ್ಕಿಂಗ್ ಮತ್ತು ಇತರ ಕಾರ್ಯಕ್ರಮ ಸಂಬಂಧಿತ ಅವಶ್ಯಕತೆಗಳಿಗಾಗಿ ಮೈದಾನದ ಬಳಿ ಇರುವ ಟೆಂಟ್ ನಿವಾಸಿಗಳನ್ನು ತೆರವುಗೊಳಿಸಲಾಗಿದೆ.‌ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಪ್ರತಿಯೊಂದು ಸ್ಥಳವನ್ನು ಬಳಸಿಕೊಳ್ಳಲು ಉದ್ದೇಶಿಸಲಾಗಿದೆ. ಆದ್ದರಿಂದ ಟೆಂಟ್ ಹಾಕಿಕೊಂಡು ವಾಸಿಸುತ್ತಿದ್ದವರನ್ನು ಪೊಲೀಸರು ಬೇರೆ ಸ್ಥಳಾಂತರವಾಗಿ ಎಂದು ಕೇಳಿಕೊಂಡಿದ್ದಾರೆ. ಈ ವೇಳೆ ಅಲ್ಲಿ ವಾಸವಾಗಿದ್ದ ಕೋಲೆ ಬಸವನನ್ನು ಆಡಿಸುವ ಕುಟುಂಬಗಳನ್ನು ತೆರವು ಮಾಡಿಸಲಾಗಿದ್ದು, ನಿವಾಸಿಗಳು ದಿಕ್ಕು ತೋಚದಂತೆ ಕಣ್ಣೀರಿಡುತ್ತಿದ್ದಾರೆ.

ದೇವನಹಳ್ಳಿ: ಸರ್ಕಾರಿ ಗೋಮಾಳ ಜಮೀನು ರಕ್ಷಿಸಿ, ನಿವೇಶನ ಹಂಚುವಂತೆ ಗ್ರಾಮಸ್ಥರ ಪ್ರತಿಭಟನೆದೇವನಹಳ್ಳಿ: ಸರ್ಕಾರಿ ಗೋಮಾಳ ಜಮೀನು ರಕ್ಷಿಸಿ, ನಿವೇಶನ ಹಂಚುವಂತೆ ಗ್ರಾಮಸ್ಥರ ಪ್ರತಿಭಟನೆ

ಟೆಂಟ್‌ಗಳನ್ನು ತೆರವು ಮಾಡಿಸಿದ ಪೊಲೀಸರು
ಇನ್ನು ಈ ಬಗ್ಗೆ ಮಾತನಾಡಿದ ಬಂಗ್ರಕೂಳೂರು ನಿವಾಸಿ ತ್ರಿವೇಣಿ, ಪ್ರಧಾನಿ ಅವರ ಭದ್ರತೆ ನೆಪದಲ್ಲಿ ಕೋಲೆ ಬಸವನನ್ನು ಆಡಿಸುವ ವಲಸಿಗರನ್ನು ನಿರಾಶ್ರಿತರನ್ನಾಗಿಸಿ ಅನ್ಯಾಯ ಮಾಡುತ್ತಿದ್ದಾರೆ. ಪ್ರಧಾನ ಮಂತ್ರಿಯವರು ಗೋಲ್ಡ್ ಫಿಂಚ್ ಗ್ರೌಂಡ್‌ಗೆ ನಾಡಿದ್ದು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ, ಇವನ್ನು ಪೊಲೀಸರು ಬೇರೆಡೆಗೆ ಸ್ಥಳಾಂತವಾಗುವಂತೆ ಒತ್ತಾಯಿಸುತ್ತಿದ್ದಾರೆ.

Narendra Modi event in Mangaluru: Tents vacated around Maidan

ಮೈದಾನಕ್ಕಿಂತ ಒಂದು ಕಿಲೋ ಮೀಟರ್ ದೂರದಲ್ಲಿರುವ ಗುರುದ್ವಾರದ ಬಳಿಯಲ್ಲಿ ಕೋಲೆ ಬಸವನನ್ನು ಆಡಿಸುವ ಒಂಭತ್ತು ಕುಟುಂಬದವರು ವಾಸಿಸುತ್ತಿವೆ. ಟೆಂಟ್‌ಗಳನ್ನು ಪೊಲೀಸರು ತೆರವುಗೊಳಿಸಿದ್ದು, ಅವರನ್ನು ನಿರಾಶ್ರಿತರನ್ನಾಗಿ ಮಾಡಿದ್ದಾರೆ. ಪೊಲೀಸರು ಬೆತ್ತ ತೋರಿಸಿ, ಬೇಗ ತೆರವುಗೊಳಿಸದಿದ್ದರೆ ಹದಿನೈದು ದಿನಗಳವರೆಗೆ ಬಂಧಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಟೆಂಟ್‌ನಲ್ಲಿ ವಾಸವಾಗಿದ್ದ ನಿವಾಸಿಗಳು ಆಕ್ರೋಶ ಹೊರಹಾಕಿದ್ದಾರೆ.

ಟೆಂಟ್‌ ನಿವಾಸಿಗಳಿಗೆ ಪೊಲೀಸರಿಂದ ಬೆದರಿಕೆ
ಪ್ರಧಾನ ಮಂತ್ರಿಗಳು ಬರುವಾಗ ನಿಮ್ಮ ಶೆಡ್‌ಗಳು ಅವರಿಗೆ ಕಾಣಿಸಬಾರದು. ಬೇಗನೆ ಟೆಂಟ್‌ಗಳನ್ನು ಬಿಚ್ಚಿ ತೆರವುಗೊಳಿಸಿ ಎಂದು ಒತ್ತಾಯ ಪೂರ್ವಕವಾಗಿ ತುರ್ತಾಗಿ ಎಲ್ಲವನ್ನೂ ಬಿಚ್ಚಿಸಿದ್ದಾರೆ. ಇದೀಗ ಒಂಭತ್ತು ಟೆಂಟ್‌ಗಳ 30 ಜನರು ಬಾಣಂತಿ ಮತ್ತು ಪುಟಾಣಿ ಮಕ್ಕಳ ಸಹಿತವಾಗಿ ಬೀದಿಯಲ್ಲಿ ಮಲಗುವಂತಾಗಿದೆ. ನಿನ್ನೆ ರಾತ್ರಿ ಸುರಿದ ಭಾರೀ ಮಳೆಯಲೇ ಪುನ: ಅವರು ತಾತ್ಕಾಲಿಕ ಟೆಂಟ್ ನಿರ್ಮಿಸಿ ಅವರೆಲ್ಲ ಹೇಗೋ ಹಡಗಿಕೊಂಡರು. ಬೆಳಗ್ಗೆ ಆ ಟೆಂಟ್‌ಗಳನ್ನು ಬಿಚ್ಚಿ ಎಲ್ಲರೂ ಬೀದಿಯಲ್ಲೇ ಕಾಲ ಕಳೆಯುತ್ತಿದ್ದಾರೆ. ಇನ್ನು ಈ ರಾತ್ರಿಯೂ ಮಳೆ ಬಂದರೆ ಅವರ ಗತಿ ಅಯೋಮಯವಾಗಲಿದೆ. ಮಳೆ ಬಂದರೂ ಕೂಡ ಬೀದಿಯಲ್ಲೇ ಉಳಿಯಬೇಕಾಗುತ್ತದೆ ಎಂದು ಅಲ್ಲಿನ ನಿವಾಸಿಗಳು ಅಳಲು ತೋಡಿಕೊಂಡರು.

Narendra Modi event in Mangaluru: Tents vacated around Maidan

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ, ಅವರಿಗೆ ಸ್ಥಳೀಯ ಕಾರ್ಪೊರೇಟರ್ ನೆರವಿನಲ್ಲಿ ಮಂಗಳೂರು ಮಹಾನಗರ ಪಾಲಿಕೆಯಿಂದ ತಾತ್ಕಾಲಿಕ ಪುನರ್ವಸತಿ ಕಲ್ಪಿಸಲಾಗಿದೆ. ತಹಶೀಲ್ದಾರ್ ಮತ್ತು ಇತರ ಕಾರ್ಮಿಕ ಇಲಾಖೆ ಸಿಬ್ಬಂದಿಯು ಊಟ ಸೇರಿದಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಅವರನ್ನು ಭೇಟಿ ಮಾಡಲಿದ್ದಾರೆ. ಆ ಕುಟುಂಬಗಳೊಂದಿಗೆ ಚರ್ಚಿಸಿ ಬಳಿಕ ನೆಲೆಸಲು ಅವರು ಆಸಕ್ತಿ ತೋರಿದ್ದಲ್ಲಿ ಶಾಶ್ವತ ಪುನರ್ವಸತಿ ಯೋಜನೆಯನ್ನು ಸಿದ್ಧಪಡಿಸಲಾಗುವುದು ಎಂದು ಭರವಸೆ ನೀಡಿದರು.

English summary
Prime Minister Narendra Modi will visit Mangalore on September 2. It has been alleged that more than 30 tent dwellers have been cleared for the construction of a huge stage.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X