ಗೋಡ್ಸೆಗಿಂತ ರಾಜೀವ್ ಗಾಂಧಿ ಕ್ರೂರಿ: ಸಂಸದ ನಳೀನ್ ಟ್ವೀಟ್
ಮಂಗಳೂರು, ಮೇ 17: ಮಹಾತ್ಮಾ ಗಾಂಧೀಜಿಯನ್ನು ಕೊಂದ ನಾಥುರಾಮ್ ಗೋಡ್ಸೆ ಸ್ವತಂತ್ರ ಭಾರತದ ಮೊದಲ ಉಗ್ರ ಎಂದು
ನಟ, ರಾಜಕಾರಣಿ ಕಮಲ್ ಹಾಸನ್ ನೀಡಿದ ಹೇಳಿಕೆ ರಾಷ್ಟ್ರವ್ಯಾಪಿ ಹೊಸ ಕಿಚ್ಚು ಹಚ್ಚಿದೆ. ಹಿಂದುವಾಗಿ ನಾಯಕರು ಗೋಡ್ಸೆಯನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಬಾಯಕ್ಕೆ ಬಂದಂತೆ ಹೇಳಿಕೆ ನೀಡುತ್ತಿದ್ದಾರೆ. ಈಗ ಈ ಸಾಲಿಗೆ ದಕ್ಷಿಣ ಕನ್ನಡ ಸಂಸದ ನಳೀನ್ ಕುಮಾರ್ ಕಟೀಲ್ ಅವರು ಹೊಸ ಸೇರ್ಪಡೆ.
'ನಾಥೂರಾಮ್ ಗೋಡ್ಸೆಯಿಂದ ರಾಜೀವ್ ಗಾಂಧಿ ಮಹಾಕ್ರೂರಿ' ಎಂದು 'ಚೌಕಿದಾರ್' ನಳಿನ್ ಕುಮಾರ್ ಕಟೀಲ್ ಅವರು ಟ್ವೀಟ್ ಮಾಡಿ, ವಿವಾದ, ಚರ್ಚೆಗೆ ನಾಂದಿ ಹಾಡಿದ್ದಾರೆ.
ಗೋಡ್ಸೆ, ಅಜ್ಮಲ್ ಕಸಬ್ ಕೊಂದವರ ಸಂಖ್ಯೆ ನೀಡುತ್ತಾ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಕೊಂದವರ ಸಂಖ್ಯೆ 17,000 ಎಂದು ನೀಡಿ ಟ್ವೀಟ್ ಮಾಡಿ, ಕ್ರೂರ ಕೊಲೆಗಾರ ಯಾರು ಎಂದು ಪ್ರಶ್ನಿಸಿದ್ದಾರೆ. ನಳೀನ್ ಅವರ ಟ್ವೀಟ್ ಗೆ ಕಾಂಗ್ರೆಸ್ಸಿಗರಿಂದ ಪ್ರತಿಕ್ರಿಯೆಗಳು ಬಂದಿವೆ. ಸ್ಥಳೀಯರು ಕ್ಷೇತ್ರದ ಸಮಸ್ಯೆ ಬಗ್ಗೆ ಮೊದಲು ಗಮನಹರಿಸಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಟ್ವೀಟ್ಸ್ ಪ್ರತಿಕ್ರಿಯೆ ಮುಂದಿದೆ.

ವಿವಾದಕ್ಕೆ ನಾಂದಿ ಹಾಡಿದ ನಳೀನ್ ಟ್ವೀಟ್
ಗೋಡ್ಸೆ ಕೊಂದವರ ಸಂಖ್ಯೆ 1, ಅಜ್ಮಲ್ ಕಸಬ್ ಕೊಂದವರ ಸಂಖ್ಯೆ 72, ರಾಜೀವ್ ಗಾಂಧಿ ಕೊಂದವರ ಸಂಖ್ಯೆ 17,000 ಈಗ ನೀವೇ ಹೇಳಿ ಇವರಲ್ಲಿ ಅತೀ ಕ್ರೂರ ಕೊಲೆಗಾರ ಯಾರು? ಎಂದು ನಿಳಿನ್ ಕುಮಾರ್ ಅವರು ಟ್ವೀಟ್ ಮಾಡಿದ್ದು, ವಿವಾದದ ಸ್ವರೂಪ ಪಡೆದುಕೊಂಡಿದೆ.
|
ನಳೀನ್ ಅತಿಕ್ರೂರಿ ಎಂದ ಕಾಂಗ್ರೆಸ್
ಬ್ರಿಟಿಷರ ಜೊತೆಗೆ ಕೈಜೋಡಿಸಿದ ನರಿಗಳು ರಾಷ್ಟ್ರಪಿತನ ಹತ್ಯೆ ಮಾಡಿದ ನರಹಂತಕನನ್ನು ಸಮರ್ಥಿಸಿಕೊಳ್ಳುವ ನೀನು ನಿಜವಾದ ದೇಶದ್ರೋಹಿ. ನಿನ್ನಂತಹ ನಾಲಾಯಕ್ ಕ್ರಿಮಿ ಸಂಸದನಾಗಲು ಮಹಾತ್ಮ ಗಾಂಧೀಜಿ ಮಾಡಿದ ಹೋರಾಟ ಕಾರಣ ಎಂದ ಕಾಂಗ್ರೆಸ್ಸಿಗ ಸೂರ್ಯ ಮುಕುಂದರಾಜ್.
|
ಇವೆಲ್ಲ ನಾನ್ಸೆನ್ಸ್ ಬಿಡಿ, ಮೇಲ್ಸೇತುವೆ ಪೂರ್ಣಗೊಳಿಸಿ
ನಳೀನ್ ಕುಮಾರ್ ಕಟೀಲ್ ಅವರೇ ಇವೆಲ್ಲ ನಾನ್ಸೆನ್ಸ್ ಬಿಡಿ, ಮೊದಲು ಪಂಪ್ವೇಲ್ ಫ್ಲೈ ಓವರ್ ಕಾಮಗಾರಿ ಪೂರ್ಣಗೊಳಿಸಿ ಎಂದ ನಾಗರಿಕರು.
|
ಎಲ್ಲರಿಗಿಂತ ಮೋದಿ ಮಹಾನ್ ಕ್ರೂರಿ
ದೇಶದ 130 ಕೋಟಿ ಜನರನ್ನು ತಮ್ಮ ಸುಳ್ಳುಗಳಿಂದ ಹತ್ಯೆ ಮಾಡಿದ ಮೋದಿ ನಿಜವಾದ ಕ್ರೂರಿ...ಗೋದ್ರಾ ಹತ್ಯಾಕಾಂಡ ನೆನಪಿಲ್ವಾ ನಿಮಗೆ...ಬಾಪೂನ ಹತ್ಯೆ ಮಾಡಿದವನು ನಿಮಗೆ ದೇವರು ಬಾಪೂವಿನ ಹತ್ಯೆ ಅವರೊಬ್ಬರ ಹತ್ಯೆಯಲ್ಲಾ ಎಲ್ಲಾ ಭಾರತೀಯರ ಹತ್ಯೆ ಎಂದು ಆಕ್ರೋಶದಿಂದ ಪ್ರತಿಕ್ರಿಯೆ ನೀಡಿದ ಸಾರ್ವಜನಿಕರೊಬ್ಬರು.
|
ಹಿಂದೂ ಧರ್ಮದ ಗುತ್ತಿಗೆಯನ್ನು ಪಡೆದಿದ್ದೀರಾ?
ಹಿಂದೂ ಧರ್ಮದ ಗುತ್ತಿಗೆಯನ್ನು ನಿಮಗೆ ನೀಡಿದವರು ಯಾರು? ಹಿಂದೂ ಹೆಸರಿನಲ್ಲಿ ನಮ್ಮ ಹುಡುಗರ ತಲೆ ಕೆಡಿಸಿ ಅವರಿಂದ ದುಷ್ಕೃತ್ಯ ಮಾಡಿಸುವ ನೀವು ಜೈಲು ಸೇರಿರುವ ಆ ಹುಡುಗರ ಕುಟುಂಬಕ್ಕೆ ಏನನ್ನು ಮಾಡಿದ್ದೀರಿ? ಎಂದು ಕುಂದಾಪುರ ಕಾಂಗ್ರೆಸ್ ಘಟಕದಿಂದ ಸರಣಿ ಟ್ವೀಟ್.
|
ನಳೀನ್ ನೀಡಿದ್ದ ಹಳೆ ಹೇಳಿಕೆ ನೆನಪಿಸಿದ ಟ್ವೀಟ್
ಹಾಗೆ ನೀವು ಒಬ್ಬ ಕ್ರೂರಿನೇ ದಕ್ಷಿಣ ಕನ್ನಡಕ್ಕೆ ಬೆಂಕಿ ಹಚ್ಚಲು ಹೊರಟವರು, ಜಿಲ್ಲೆಯಲ್ಲಿ ಕೋಮು ಗಲಭೆ ಸೃಷ್ಠಿ ಮಾಡಿ ಅಶಾಂತಿಯನ್ನು ಮೂಡಿಸಿದ್ದೀರಿ ನೀವೇ ಮಾಹಾನ್ ಕ್ರೂರಿ ಎಂದು ಈ ಹಿಂದೆ ನಳೀನ್ ಕುಮಾರ್ ಅವರು ನೀಡಿದ್ದ ಹೇಳಿಕೆಯನ್ನು ನೆನಪಿಸಿದ ಟ್ವೀಟ್.












Click it and Unblock the Notifications