• search
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪಶ್ಚಿಮ ಘಟ್ಟದಲ್ಲಿ ನಿಗೂಢ ಸ್ಫೋಟಗಳು, ಕಾದಿದೆಯಾ ಗಂಡಾಂತರ?

|
   ಪಶ್ಚಿಮ ಘಟ್ಟಗಳಲ್ಲಿ ನಿಗೂಢ ಸ್ಫೋಟಗಳು | Oneindia Kannada

   ಮಂಗಳೂರು, ಆಗಸ್ಟ್ 21: ಪಶ್ಚಿಮ ಘಟ್ಟಗಳ ಉದ್ದಕ್ಕೂ ಭೂಮಿ ಬಿರುಕು ಬಿಡುತ್ತ ಭಾರೀ ಪ್ರಮಾಣದಲ್ಲಿ ಕುಸಿಯುತ್ತಿದೆಯಾ? ಕಳೆದ ಒಂದು ವಾರದಿಂದ ಇಂಥಹ ದುರಂತದ ಸನ್ನಿವೇಶಗಳು ಎದುರಾಗುತ್ತಿದ್ದು, ಪಶ್ಚಿಮ ಘಟ್ಟ ತಪ್ಪಲಿನ ಜನರ ಅತಂಕಕ್ಕೆ ಕಾರಣವಾಗಿದೆ.

   ಪಶ್ಚಿಮ ಘಟ್ಟ ಪ್ರದೇಶದಲ್ಲಿ ನಡೆದಿರುವ ಕೆಲವು ನಿಗೂಢ ದುರಂತ ಪ್ರಸಂಗಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ಈ ಘಟನೆಗಳನ್ನು ಗಂಭೀರವಾಗಿ ಪರಿಗಣಿಸದ ರಾಜ್ಯ ಸರಕಾರ ಮಾತ್ರ ಕೈಕಟ್ಟಿ ಕುಳಿತುಕೊಂಡಿದೆ. ದಿನದಿಂದ ದಿನಕ್ಕೆ ಪಶ್ಚಿಮ ಘಟ್ಟಗಳ ಶ್ರೇಣಿ ಕುಸಿಯುತ್ತಿದೆ ಅನ್ನುವುದಕ್ಕೆ ಸ್ಪಷ್ಟ ಸಾಕ್ಷ್ಯಗಳು ದೊರೆಯಲಾರಂಭಿಸಿದೆ. ಈ ದುರಂತದ ಸಾಕ್ಷ್ಯ ನುಡಿಯುವ ವಿಡಿಯೋ ಹಾಗು ಫೋಟೋ ಗಳು ಲಭ್ಯ ವಾಗುತ್ತಿವೆ.

   ಕೂಜುಮಲೆ, ಕಲ್ಮಕಾರಿನಲ್ಲಿ ನಡೆದ ದುರಂತವನ್ನು ಜಿಲ್ಲಾಡಳಿತ ಮುಚ್ಚಿಟ್ಟಿದ್ದೇಕೆ?

   ಸುಳ್ಯ ತಾಲೂಕಿನ ಕಲ್ಮಕಾರಿನ ಬಳಿ ಕಡಮಕಲ್ ಎಸ್ಟೇಟ್ ವ್ಯಾಪ್ತಿಯಲ್ಲಿ ಈ ದುರಂತ ಸಂಭವಿಸಿರುವುದು ಬೆಳಕಿಗೆ ಬಂದಿದೆ. ಎಸ್ಟೇಟ್ ಒಳಗಿರುವ ಹೊಳೆಯ ಸೇತುವೆ ಕೊಚ್ಚಿ ಹೋಗಿದ್ದು, ಬೃಹತ್ ಮರಗಳು ಛಿದ್ರಗೊಂಡು ಬಿದ್ದಿದೆ.

   ಮೂರು ದಿನಗಳ ಹಿಂದೆ ಈ ಭಾಗದಲ್ಲಿ ಭಾರೀ ಸ್ಫೋಟ ಸಂಭವಿಸಿದ ಸದ್ದು ಕೇಳಿದ್ದು, ಇದರಿಂದ ಎಸ್ಟೇಟ್ ಕಾರ್ಮಿಕರು ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ನಿವಾಸಿಗಳು ಭಯಭೀತರಾಗಿದ್ದಾರೆ. ಹೀಗೆ ದಕ್ಷಿಣ ಕನ್ನಡ ಹಾಗೂ ಅದರ ಗಡಿ ಭಾಗದ ಪ್ರದೇಶಗಳಲ್ಲಿ ಎಂತೆಂಥ ಅನಾಹುತ ಸಂಭವಿಸಿದೆ ಎಂಬ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ...

    ಅರಣ್ಯ ಛಿದ್ರವಾಗಿರುವುದು ಪತ್ತೆ

   ಅರಣ್ಯ ಛಿದ್ರವಾಗಿರುವುದು ಪತ್ತೆ

   ಕೊಡಗಿನ ಗಡಿಭಾಗದ ಬ್ರಹ್ಮಗಿರಿ ಬೆಟ್ಟಗಳ ನಡುವೆ ಜಲಸ್ಫೋಟವಾಗಿ ಸಾವಿರಾರು ಎಕರೆ ವ್ಯಾಪ್ತಿಯಲ್ಲಿ ಅರಣ್ಯ ಛಿದ್ರವಾಗಿರುವುದು ಪತ್ತೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕಟ್ಟಕಡೆಯ ಗ್ರಾಮ ಕಲ್ಮಕಾರಿನ ಬಳಿಯ ಕಡಮಕಲ್ ಎಸ್ಟೇಟ್ ನಡುವೆ 5 ಕಿಮೀ ದುರ್ಗಮ ದಾರಿಯಲ್ಲಿ ನಡಿಗೆಯಿಂದಷ್ಟೆ ಈ ಜಾಗಕ್ಕೆ ತಲುಪಬಹುದಾಗಿದೆ.

   ಇದೇ ಬೆಟ್ಟದ ಇನ್ನೊಂದು ಭಾಗದಲ್ಲಿರುವ ಗ್ರಾಮವೇ ಜೋಡುಪಾಲ. ಈ ಎಲ್ಲಾ ದೃಶ್ಯಗಳು ದುರಂತದ ಕಥೆ ಹೇಳುತ್ತಿವೆ. ಪಶ್ಚಿಮ ಘಟ್ಟಕ್ಕೆ ಗಂಡಾಂತರ ಕಾದಿದೆ ಅನ್ನುವುದಕ್ಕೆ ಬೇರೆ ಸಾಕ್ಷ್ಯ ಬೇಕಿಲ್ಲ.

    2 ವರ್ಷಗಳ ಹಿಂದೆ ಭೂಮಿಯಲ್ಲಿ ಬಿರುಕು

   2 ವರ್ಷಗಳ ಹಿಂದೆ ಭೂಮಿಯಲ್ಲಿ ಬಿರುಕು

   ಕಡಮಕಲ್ ಎಸ್ಟೇಟ್ ಕಾರ್ಮಿಕನೊಬ್ಬ ಹೇಳುತ್ತಿರುವಂತೆ ಸ್ಫೋಟದ ಸದ್ದು ಕೇಳಿ ಶೇಕಡ.40ರಷ್ಟು ಕಾರ್ಮಿಕರು ಈಗಾಗಲೇ ಭಯದಿಂದ ಜಾಗ ಬಿಟ್ಟು ತೆರಳಿದ್ದಾರೆ. ಈ ಭಾಗದಲ್ಲಿ ಮತ್ತೆ ನಿರಂತರ ಭಾರೀ ಮಳೆಯಾದರೆ ಪಶ್ಚಿಮ ಘಟ್ಟದ ತಪ್ಪಲು ಕುಸಿಯಲಿದೆ ಎಂಬ ಆತಂಕ ವ್ಯಕ್ತವಾಗುತ್ತಿದೆ.

   ಭಾರೀ ಭೂ ಕುಸಿತ ಸಂಭವಿಸಿರುವ ಜೋಡುಪಾಲ, ಮದೆನಾಡು ಪ್ರದೇಶದಲ್ಲಿ 2 ವರ್ಷಗಳ ಹಿಂದೆ ಭೂಮಿಯಲ್ಲಿ ಬಿರುಕು ಕಂಡುಬಂದಿತ್ತು. ಶಿಶಿರ ಎಂಬುವವರ ತೋಟದದಿಂದ ಬೆಟ್ಟದ ಉದ್ದಕ್ಕೂ ಭೂಮಿ ಬಿರುಕು ಬಿಟ್ಟಿತ್ತು. ಇತ್ತೀಚೆಗೆ ಈ ಬಿರುಕು ಹೆಚ್ಚಾಗುತ್ತಾ ಹೋಗಿತ್ತು . ಈ ಹಿನ್ನೆಲೆಯಲ್ಲಿ ಕೆಲದಿನಗಳ ಹಿಂದೆಯೇ ಭೂಮಿ ಕುಸಿಯುವ ಮುನ್ಸೂಚನೆ ದೊರೆತಿತ್ತು.

   ಭಾರತದ ಭೀಕರ ಪ್ರವಾಹಗಳು, 1 ಲಕ್ಷ ಮಂದಿ ಮೃತರು, 4 ಲಕ್ಷ ಕೋಟಿ ನಷ್ಟ

    ಭೂಮಿಯಡಿ ಭಾರೀ ಸದ್ದು

   ಭೂಮಿಯಡಿ ಭಾರೀ ಸದ್ದು

   ಭೂ ಕುಸಿತ ಸಂಭವಿಸಿದ ಜೋಡುಪಾಲ ಹಾಗೂ ಮದೆನಾಡಿನಲ್ಲಿ ದುರಂತ ಸಂಭವಿಸುವ ಮೊದಲು ಭಾರೀ ಸ್ಫೋಟದ ಸದ್ದು ಕೇಳಿಬಂದಿತ್ತು. ಈ ಭಾರೀ ಸ್ಫೋಟದ ಸದ್ದಿಗೆ ಮದೆನಾಡು ಹಾಗು ಜೋಡುಪಾಲದ ಜನರು ಆತಂಕಕ್ಕೆ ಒಳಗಾಗಿದ್ದರು. ಬೆಟ್ಟ ಕುಸಿಯುವ ಮೊದಲು ಈ ಗ್ರಾಮಗಳ ಭೂಮಿಯಡಿಯಲ್ಲಿ ಭಾರೀ ಸದ್ದಾಗಿ ರೈಲು ಸಂಚರಿಸಿದಂತೆ ಆನುಭವ ಆಗಿತ್ತು ಎಂದು ಜೋಡುಪಾಲದ ನಿವಾಸಿ ಶಿಶಿರ ತಿಳಿಸಿದ್ದಾರೆ.

    ಜಮೀನು ನಾಶವಾಗುವ ಸಾಧ್ಯತೆ

   ಜಮೀನು ನಾಶವಾಗುವ ಸಾಧ್ಯತೆ

   ಇತ್ತೀಚೆಗೆ ಕೂಜುಮಲೆ ಅರಣ್ಯದ ಕೊಡಗು ಗಡಿಭಾಗದ ಮಾಯಿಲ ಕೋಟೆ ಎಂಬಲ್ಲಿಯೂ ಮಧ್ಯಾಹ್ನದ ಸಮಯ ಭಾರೀ ಸ್ಪೋಟದ ಶಬ್ದ ಕೇಳಿಬಂದಿತ್ತು. ಈ ಬಾರಿ ಶಬ್ದದಿಂದ ಬೆದರಿದ ಸ್ಥಳೀಯ ಜನರು ಇತರೆಡೆ ಪಲಾಯನ ಮಾಡಿದ್ದರು.

   ಇದೀಗ ಬೆಳ್ತಂಗಡಿ ತಾಲೂಕಿನ ಸವಣಾಲು ಗ್ರಾಮದ ಜನರಲ್ಲಿ ಆತಂಕ ಶುರುವಾಗಿದೆ. ಇಲ್ಲಿಯ ಬಾಡಡ್ಕ ಎಂಬಲ್ಲಿನ ಬೆಟ್ಟದಲ್ಲಿ ನಿನ್ನೆ ಬಿರುಕು ಕಂಡುಬಂದಿದೆ . ಇಲ್ಲಿಯ ನಿವಾಸಿ ಸುಂದರ ಮಲೆಕುಡಿಯರವರ ಮನೆಯ ಹಿಂಬದಿಯ ಗುಡ್ಡ ಸುಮಾರು 1 ಕಿ ಮೀ ದೂರದವರೆಗೂ ಭೂಮಿ ಬಿರುಕು ಬಿಟ್ಟಿದೆ.

   ಪರಿಣಾಮ ಗುಡ್ಡ ಜರಿದು ಬೀಳುವ ಆತಂಕ ಸೃಷ್ಟಿಯಾಗಿದೆ. ಬೆಟ್ಟ ಜರಿದರೆ ಸುಂದರ ಮಲೆಕುಡಿಯರ ಮನೆ ಸಹಿತ ನೂರಾರು ಎಕರೆ ಕೃಷಿ ಜಮೀನು ಸಂಪೂರ್ಣ ನಾಶವಾಗುವ ಸಾಧ್ಯತೆಯಿದೆ .

   ಜೋಡುಪಾಳ, ಮದೆನಾಡು ದುರಂತದ ಮುನ್ಸೂಚನೆ ನೀಡಿದ್ದವೆ ಕಾಡುಪ್ರಾಣಿಗಳು?

    ಹರಿದು ಬರುತ್ತಿರುವ ನೀರು

   ಹರಿದು ಬರುತ್ತಿರುವ ನೀರು

   ಈ ನಡುವೆ ಸುಬ್ರಹ್ಮಣ್ಯ ಸಮೀಪದ ಅರಣ್ಯ ಪ್ರದೇಶ ಗುತ್ತಿಗಾರಿನ ದೇವಚಳ್ಳ, ಕರಂಗಲ್ಲು ಬೆಟ್ಟದಿಂದ ಭಾರೀ ಪ್ರಮಾಣದಲ್ಲಿ ನೀರು ಹರಿಯಲಾರಂಭಿಸಿದೆ. ಬೆಟ್ಟದ ಮೇಲಿಂದ ಭಾರೀ ಪ್ರಮಾಣದಲ್ಲಿ ಕಲ್ಲು ಮಣ್ಣು ಹರಿದು ಬರುತ್ತಿದೆ.

   ಈ ಹಿನ್ನೆಲೆಯಲ್ಲಿ ಬೆಟ್ಟ ಕುಸಿಯುವ ಭೀತಿ ಎದುರಾಗಿದ್ದು, ಬೆಟ್ಟದ ತಪ್ಪಲಿನಲ್ಲಿರುವ ಹತ್ತಾರು ಎಕರೆ ಅಡಿಕೆ, ರಬ್ಬರ್ ತೋಟ ನಾಶವಾಗುವ ಆತಂಕ ಕಾಡಲಾರಂಭಿಸಿದೆ. ದೇವಚಳ್ಳ, ಕರಂಗಲ್ಲು ಪ್ರದೇಶದಲ್ಲಿ ವಾಸಿಸುವ ಜನರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.

   ಬೆಳಕಿಗೆ ಬಂತು ಬಿಸ್ಲೆ ಘಾಟ್ ಭೀಕರ ಜಲಪ್ರಳಯ ದೃಶ್ಯಗಳು

   ಇನ್ನಷ್ಟು ಮಂಗಳೂರು ಸುದ್ದಿಗಳುView All

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Native of Kujumale and Kalmakar foerest area observed mysterious explosions in western Ghat range. There is anxiety about the collapse of the Western Ghats.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more