ನನ್ನ ಗಂಡ PFI ನಲ್ಲಿ ಗುರುತಿಸಿಕೊಂಡಿದ್ದರು, ಆದರೆ ಹತ್ಯೆ ಮಾಡಿಲ್ಲ: ಶಫೀಕ್ ಪತ್ನಿ
ಮಂಗಳೂರು, ಜುಲೈ 28: ಪ್ರವೀಣ್ ಹತ್ಯೆಯಾದ ದಿನ ನನ್ನ ಪತಿ ಶಫೀಕ್‌ಗೆ ಸಿಕ್ಕಿದ್ದರಂತೆ, ಸ್ಮೈಲ್ ಮಾಡಿ ಹೋಗಿದ್ದರು ಎಂದು ನನ್ನ ಬಳಿ ಶಫೀಕ್ ಹೇಳಿದ್ದರು, ಆದರೆ ಪ್ರವೀಣ್ ಹತ್ಯೆ ವಿಚಾರ ತಿಳಿದು ಆಶ್ಚರ್ಯವ್ಯಕ್ತಪಡಿಸಿದ್ದರು ಎಂದು ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಬಂಧಿತ ಆರೋಫಿ ಶಫೀಕ್ ಪತ್ನಿ ಅನ್ಷಿಫಾ ಹೇಳಿದ್ದಾರೆ.
ಮಂಗಳವಾರ ರಾತ್ರಿ ಚಿಕನ್ ಅಂಗಡಿ ಮುಚ್ಚಿ ಮನೆಗೆ ತೆರಳುತ್ತಿದ್ದ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರುರನ್ನು ಕೇರಳ ನೋಂದಣಿ ಬೈಕ್‌ನಲ್ಲಿ ಬಂದಂತಹ ಮೂವರು ದುಷ್ಕರ್ಮಿಗಳು ಮಾರಾಕಾಶ್ತ್ರಗಳಿಂದ ಪ್ರವೀಣ್ ಮೇಲೆ ಹಲ್ಲೆ ಪರಾರಿಯಾಗಿದ್ದರು, ಪ್ರವೀಣ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಈ ಹತ್ಯೆ ರಾಜ್ಯಾದ್ಯಂತ ತಲ್ಲಣ ಮೂಡಿಸಿದ್ದು, ಸರಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರು ಹಾಗೂ ಹಿಂದು ಪರ ಸಂಘಟನೆಯ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸದ ಬೆನ್ನಲ್ಲೆ ರಾಜ್ಯ ಬಿಜೆಪಿ ಸರಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಶೀಘ್ರದಲ್ಲೇ ಆರೋಫಿಗಳನ್ನು ಬಂಧಿಸಲು ಪೊಲೀಸರಿಗೆ ಸೂಚಿಸಿದೆ.
4 ತಂಡಗಳನ್ನು ರಚಿಸಿ ತನಿಖೆ ಆರಂಭಿಸಿರುವ ಮಂಗಳೂರು ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೆ ಶಫೀಕ್ ಮತ್ತಯ ಜಾಕೀರ್ ಎಂಬಾನನ್ನು ಬಂಧಿಸಿದ್ದಾರೆ. ಇತ್ತ ಆರೋಪಿಗಳನ್ನು ಬಂಧಿಸುತ್ತಿದ್ದಂತೆ, ಶಫೀಕ್ ಪತ್ನಿ ಅನ್ಷಿಫಾ ಹಾಗೂ ತಂದೆ ಇಬ್ರಾಹಿಂ ಬೆಳ್ಳಾರೆ ಠಾಣಗೆ ಆಗಮಿಸಿ ಶಫೀಕ್ ನಿರಪರಾಧಿ ಎಂದು ಗೋಳಾಡುತ್ತಿದ್ದಾರೆ.

ಪ್ರವೀಣ್ ಹತ್ಯೆ ದಿನ ಶಫೀಕ್ ಮನೆಯಲ್ಲಿದ್ದರು
ನನ್ನ ಗಂಡ ಅಡಿಕೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು, ಪಿಎಫ್ಐ ಸಂಘಟನೆಯಲ್ಲೂ ಗುರುತಿಸಿಕೊಂಡಿದ್ದರು, ಆದರೆ ಪ್ರವೀಣ್ ಕೊಲೆಯಾದ ದಿನ ಬೆಳಗ್ಗೆ ಶಫೀಕ್‌ಗೆ ಪ್ರವೀಣ್ ಸಿಕ್ಕಿದ್ದು, ಸ್ಮೈಲ್ ಮಾಡಿಕೊಂಡು ಹೋಗಿದ್ದರು ಎಂದು ನನ್ನ ಬಳಿ ಶಫೀಕ್ ತಿಳಿಸಿದ್ದರು, ಆದರೆ ಹತ್ಯೆಯ ಸುದ್ದಿ ಕೇಳಿದಾಗ ಆಶ್ಚರ್ಯವ್ಯಕ್ತಪಡಿಸಿದ್ದರು. ಅಲ್ಲದೆ ಕೊಲೆಯಾದ ದಿನ ಕೆಲಸದಿಂದ ಬೇಗ ಬಂದು, ಸಂಬಂಧಿಕರ ಮನೆಯಲ್ಲಿ ಕಾರ್ಯಕ್ರಮ ಹೋಗಿದ್ದೆವು ಎಂದು ತಿಳಿಸಿದ್ದಾರೆ.

ಪಿಎಫ್‌ಐನಲ್ಲಿದ್ದ, ಆದರೆ ಹತ್ಯೆ ಮಾಡಿಲ್ಲ
ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಿಎಫ್ಐ, ಎಸ್‌ಡಿಪಿಐ ಕಾರ್ಯಕರ್ತರನ್ನು ಬಂಧಿಸಲು ಹೇಳಿದಕ್ಕೆ ನನ್ನ ಗಂಡನನ್ನು ಪೊಲೀಸರು ಬಂಧಿಸಲಾಗಿದೆ. ಪಿಎಫ್‌ಐ, ಎಸ್‌ಡಿಪಿಐನಲ್ಲಿ ಸಕ್ರಿಯನಾಗಿದ್ದ, ಆದರೆ ಆತ ಆರೋಪಿಯಲ್ಲ. ನಿಜವಾದ ಆರೋಪಿಗಳನ್ನು ಬಂಧಿಸಿ ಶಫೀಕ್ ನನ್ನ ಬಿಟ್ಟು ಬಿಡಿ, ಆತ ಅಪರಾಧಿಯಲ್ಲ ಎಂದು ಅನ್ಷೀಫಾ ಬೆಳ್ಳಾರೆ ಪೊಲೀಸ್ ಠಾಣೆಯ ಮುಂದೆ ಕಣ್ಣೀರಿಟ್ಟಿದ್ದಾರೆ.

ಪ್ರವೀಣ್ ಕೊಲೆಯಾದ ಮಗ ಮನೆಯಲ್ಲಿದ್ದ
ಶಫೀಕ್ ತಂದೆ ಇಬ್ರಾಹಿ ಮಾತನಾಡಿ, ಪ್ರವೀಣ್ ಕೊಲೆಯಾದ ದಿನ ನನ್ನ ಮಗ ಮನೆಯಲ್ಲೇ ಇದ್ದ. ಸಂಬಂಧಿಕರೊಬ್ಬರ ಕಾರ್ಯಕ್ರಮಕ್ಕೆ ತೆರಳಿ ಮನೆಗೆ ಬಂದಿದ್ದ. ಪೊಲೀಸರು ವಿಚಾರಣಗೆಂದು ಆತನನ್ನು ಕರೆದುಕೊಂಡು ಹೋಗಿದ್ದಾರೆ. ನಾನು ಪ್ರವೀಣ್ ಕೋಳಿ ಅಂಗಡಿಯಲ್ಲಿ ಕೆಲವು ತಿಂಗಳು ಕೆಲಸ ಮಾಡಿದ್ದೆ, ಮೂರು ತಿಂಗಳ ಹಿಂದೆ ಕೆಲಸ ಬಿಟ್ಟಿದ್ದೆ ಅಷ್ಟೆ. ನಿಜವಾದ ಆರೋಪಿಗಳನ್ನು ಪೊಲೀಸರು ಹುಡಕಲಿ, ನನ್ನ ಮಗ ನಿರಪರಾಧಿ, ವಿಚಾರಣಗೆಂದು ಕರೆದುತಂದು, ಈಗ ಆರೋಪಿ ಎನ್ನುತ್ತಿದ್ದಾರೆ ಎಂದು ಇಬ್ರಾಹಿಂ ನೋವಿನಿಂದ ನುಡಿದಿದ್ದಾರೆ.

ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿಲಿರುವ ಪೊಲೀಸರು
ಪ್ರವೀಣ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸವಣೂರು ಮೂಲದ ಜಾಕೀರ್ ಮತ್ತು ಬೆಳ್ಳಾರೆ ಮೂಲದ ಶಫೀಕ್ ಎಂಬುವವರನ್ನು ಕಾಸರಗೂಡಿನಲ್ಲಿ ಬಂಧಿಸಲಾಗಿದೆ. ಶಫೀಕ್ ಎಸ್‌ಡಿಪಿಐ ಪಕ್ಷದ ಸಕ್ರಿಯ ಕಾರ್ಯಕರ್ತನಾಗಿದ್ದು, ಸುಳ್ಯದಲ್ಲಿ ಪಕ್ಷವನ್ನು ಸಂಘಟನೆ ಮಾಡುತ್ತಿದ್ದ ಎನ್ನಲಾಗಿದೆ. ಹತ್ಯೆ ಆರೋಪಿಗಳು ಇನ್ನೂ ಸಿಕ್ಕಿಲ್ಲ. ಆದರೆ ಹತ್ಯೆಗೆ ಸ್ಕೆಚ್ ಹಾಕಿದವರನ್ನು ಬಂಧಿಸಲಾಗಿದೆ. ಈ ಆರೋಪಿಗಳನ್ನು ಗುರುವಾರವೇ ನ್ಯಾಯಾಲಯಕ್ಕೆ ಹಾಜರುಪಡಿಸುತ್ತೇವೆ, ಪ್ರಕರಣದ ಬಗ್ಗೆ ಇನ್ನಷ್ಟು ತನಿಖೆ ನಡೆಸಬೇಕಾಗಿದೆ, ಹಾಗಾಗಿ ಹೆಚ್ಚೇನು ಹೇಳಲಾಗುವುದಿಲ್ಲ ಎಂದು ಎಸ್‌ಪಿ ಋಷಿಕುಮಾರ್ ತಿಳಿಸಿದ್ದರು.












Click it and Unblock the Notifications