ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಎಂಆರ್‌ಪಿಎಲ್‌'ನಿಂದ ಮತ್ತೆ ಹಾರಿದ ಬೂದಿ, ಸಂಕಷ್ಟದಲ್ಲಿ ಜೋಕಟ್ಟೆ ನಿವಾಸಿಗಳು

|
Google Oneindia Kannada News

ಮಂಗಳೂರು, ಅಕ್ಟೋಬರ್ 26: 'ಎಂಆರ್‌ಪಿಎಲ್‌'ನ ಹಾರು ಬೂದಿ ಮತ್ತೆ ಅವಾಂತರ ಸೃಷ್ಟಿಸಿದೆ. 'ಎಂಆರ್‌ಪಿಎಲ್‌'ನ ಕೋಕ್ ಘಟಕದ ಹಾರು ಬೂದಿ ಜೋಕಟ್ಟೆ ಪರಿಸರದಲ್ಲೆಲ್ಲಾ ಹರಡಿದ್ದು ಜನರಲ್ಲಿ ಆತಂಕ ಸೃಷ್ಟಿಸಿದೆ.

ಮಂಗಳೂರು ತಾಲೂಕಿನ ಜೋಕಟ್ಟೆ ಗ್ರಾಮದ ನಿವಾಸಿಗಳಿಗೆ 'ಎಂಆರ್‌ಪಿಎಲ್‌'ನ ಕೋಕ್ ಘಟಕ ಹಿಂದಿನಿಂದಲೂ ಪೆಡಂಭೂತವಾಗಿ ಕಾಡುತ್ತಿದೆ. 'ಎಂಆರ್‌ಪಿಎಲ್‌'ನ ಕೋಕ್ ಘಟಕದಿಂದ ಪ್ರತಿನಿತ್ಯ ಹೊರಬರುವ ಕೋಕೋ ಮತ್ತು ಸಲ್ಫರ್ ಧೂಳು ಇಲ್ಲಿ ಎಲ್ಲೆಡೆ ವ್ಯಾಪಿಸಿದೆ. ಈ ಧೂಲಿನಲ್ಲಿ ಮಕ್ಕಳು ಆಟವಾಡುತ್ತಿದ್ದು ಆರೋಗ್ಯ ಸಮಸ್ಯೆಯ ಆತಂಖ ತಲೆದೋರಿದೆ.

ಜೋಕಟ್ಟೆ ನಿವಾಸಿಗಳಿಗೆ ಆರೋಗ್ಯ ಸಮಸ್ಯೆ

ಜೋಕಟ್ಟೆ ನಿವಾಸಿಗಳಿಗೆ ಆರೋಗ್ಯ ಸಮಸ್ಯೆ

ಜೋಕಟ್ಟೆ ಗ್ರಾಮ 'ಎಂಆರ್‌ಪಿಎಲ್‌'ನಿಂದ‌ ವಿನಾಶದತ್ತ ಸಾಗುತ್ತಿದ್ದು ಗ್ರಾಮದಲ್ಲಿ ವಾಸಿಸುತ್ತಿರುವ ಏಳು ಸಾವಿರಕ್ಕೂ ಅಧಿಕ ಜ‌ನರು ರೋಗರುಜಿನಗಳಿಂದ ಬಳಲುತ್ತಿದ್ದಾರೆ. ಪ್ರತಿದಿನ ಇಲ್ಲಿಯ ಜನ ಚರ್ಮರೋಗ, ಉಸಿರಾಟದ ಸಮಸ್ಯೆಗೆ ಒಳಗಾಗುತ್ತಿದ್ದಾರೆ.

ಕುಡಿಯುವ ನೀರು ವಿಷಕಾರಿ

ಕುಡಿಯುವ ನೀರು ವಿಷಕಾರಿ

ಜೋಕಟ್ಟೆ ಗ್ರಾಮಸ್ಥರು ಸುಮಾರು ಮೂರು ವರ್ಷಗಳಿಂದ ಈ ಸಮಸ್ಯೆ ಎದುರಿಸುತ್ತಿದ್ದು, ಗ್ರಾಮ ಬಾವಿಗಳಲ್ಲಿರುವ ನೀರು ವಿಷಪೂರಿತವಾಗಿದೆ. ಇಲ್ಲಿಯ ಬಾವಿಯ ನೀರು

ಕುಡಿಯಲು ಯೋಗ್ಯವಲ್ಲ ಎಂಬುವುದನ್ನು ಈ ಹಿಂದೆಯೇ ತಜ್ಞರು ಸೂಚನೆ ಕೊಟ್ಟಿದ್ದಾರೆ.

ಹಾರುಬೂದಿಯಲ್ಲಿ ಮಕ್ಕಳ ಆಟ

ಹಾರುಬೂದಿಯಲ್ಲಿ ಮಕ್ಕಳ ಆಟ

'ಎಂಆರ್‌ಪಿಎಲ್‌' ಹತ್ತಿರವೇ ಅಂಗನವಾಡಿ ಕೇಂದ್ರವಿದ್ದು ವಿಷಕಾರಿ ಹಾರುಬೂದಿಯ ನಡುವೆಯೇ ಮಕ್ಕಳು ಆಟವಾಡುತ್ತಿದ್ದಾರೆ. ಹಾರುಬೂದಿ ಮಿಶ್ರಿತ ಆಹಾರವನ್ನೇ ಜನರು ಸೇವಿಸುವಂತಾಗಿದೆ.

ಊರು ಬಿಟ್ಟ ಜನ

ಊರು ಬಿಟ್ಟ ಜನ

ಸರ್ಕಾರ ತಮ್ಮ ಸಮಸ್ಯೆಯನ್ನು ಬಗೆಹರಿಸದೆ ಇರೋದ್ರಿಂದ ಹಲವಾರು ಜನ ಗ್ರಾಮ ತೊರೆದಿದ್ದಾರೆ. ಇರುವ ಗ್ರಾಮಸ್ಥರಿಗೆ 'ಎಂಆರ್‌ಪಿಎಲ್‌' ಈಗಾಗಲೇ 27 ಎಕ್ರೆ ಭೂಮಿಯಲ್ಲಿ ‌ಮನೆ ಕೊಟ್ಟಿಸಿ ಕೊಡುತ್ತೇವೆ ಎಂದು ಮೌಖಿಕ ಭರವಸೆ ನೀಡಿದೆ. ಆದರೆ ಈ ವರೆಗೆ ಅನುಷ್ಠಾನಕ್ಕೆ ಬಂದಿಲ್ಲ.

ಕಣ್ಣುಮುಚ್ಚಿ ಕುಳಿತ ಸರಕಾರ

ಕಣ್ಣುಮುಚ್ಚಿ ಕುಳಿತ ಸರಕಾರ

ಜೋಕಟ್ಟೆ ಗ್ರಾಮಸ್ಥರು ತಮಗೆ ಪ್ರತಿದಿನ ಆಗುತ್ತಿರುವ ಕಷ್ಟದ ಬಗ್ಗೆ ರಾಜ್ಯಸರ್ಕಾರಕ್ಕೆ ಮನವಿಗಳ ಮೇಲೆ ಮನವಿ ಸಲ್ಲಿಸಿದ್ದಾರೆ. ಶಾಸಕ ಅಭಯಚಂದ್ರ ಜೈನ್, ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ್ ರೈ ಕಚೇರಿಗೆ ಜೋಕಟ್ಟೆ ಗ್ರಾಮಸ್ಥರು ಭೇಟಿ ನೀಡಿ ಸಮಸ್ಯೆ ಮನವರಿಕೆ ಮಾಡಿಸಿದ್ದಾರೆ. ಆದರೆ ಜನಪ್ರತಿನಿಧಿಗಳು ಮಾತ್ರ ಜನರ ಸಮಸ್ಯೆ ಯ ಕಡೆ ಗಮನಹರಿಸಿಲ್ಲ.

ಸಂಧಾನಕ್ಕೆ ಕಿಮ್ಮತ್ತಿಲ್ಲ

ಸಂಧಾನಕ್ಕೆ ಕಿಮ್ಮತ್ತಿಲ್ಲ

ಜೋಕಟ್ಟೆ ಗ್ರಾಮದ ಜನರ ತೀವ್ರ ಹೋರಾಟ ದ ಹಿನ್ನಲೆಯಲ್ಲಿ ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಭೆ ಕರೆಸಿ‌ 'ಎಂಆರ್‌ಪಿಎಲ್‌'ನಿಂದ ಹಾರುಬೂದಿಯನ್ನು ಸ್ಥಗಿತಗೊಳಿಸಿ, ಬೂದಿ ಗ್ರಾಮವನ್ನು ಪ್ರವೇಶಿಸದಂತೆ ಮೆಷ್ ಅಳವಡಿಸಲು ಸೂಚನೆ ನೀಡಿದ್ದರು. ಆದರೆ, ಅದು ಈ ವರೆಗೆ ಕಾರ್ಯರೂಪಕ್ಕೆ ಮಾತ್ರ ಬಂದಿಲ್ಲ.

ಜನರ ಜೀವನ ನರಕ

ಜನರ ಜೀವನ ನರಕ

ಹಾರು ಬೂದಿಯಿಂದಾಗಿ ಗ್ರಾಮದ ಜನರ ಬದುಕು ದಿನದಿಂದ ದಿನಕ್ಕೆ ನರಕವಾಗಿದೆ.

ಸುಮಾರು 7 ಸಾವಿರ ಜನರ ಭವಿಷ್ಯಕ್ಕೆ ಮಾರಕವಾಗಿರುವ 'ಎಂಆರ್‌ಪಿಎಲ್‌' ಕೋಕೋ ಮತ್ತು ಸಲ್ಫರ್ ಘಟಕವನ್ನು ಸ್ಥಗಿತಗೊಳಿಸಬೇಕೆಂಬುದು ಜೋಕಟ್ಟೆ ನಿವಾಸಿಗಳ ಆಗ್ರಹವಾಗಿದೆ.

English summary
The MRPL's fly ash has created problem again to the public. The coke unit of the MRPL has spread across the environment, causing the lives of people to be in danger
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X