ಮಗುವಿನೊಂದಿಗೆ ತಾಯಿ ನಾಪತ್ತೆ; ಪ್ರಿಯಕರನ ಜೊತೆ ಪರಾರಿ ಶಂಕೆ!
ಪುತ್ತೂರು ಗ್ರಾಮವೊಂದರ ಯುವತಿ ತನ್ನ ಎರಡೂವರೆ ವರ್ಷ ಪ್ರಾಯದ ಪುತ್ರನ ಜತೆ ನಾಪತ್ತೆಯಾಗಿದ್ದಾರೆ. ಕಳೆದ ಗುರುವಾರ ಪುತ್ತೂರು ಪೇಟೆಗೆ ಹೋಗಿ ಬರುವುದಾಗಿ ತಿಳಿಸಿ ಮಗುವಿನೊಂದಿಗೆ ಹೋದವರು ತಿರುಗಿ ಬಂದಿಲ್ಲ.
ಮಂಗಳೂರು, ಮೇ 10: ಪತಿ ವಿದೇಶದಲ್ಲಿರುವ ಹಿನ್ನಲೆಯಲ್ಲಿ ತವರು ಮನೆಯಲ್ಲಿ ವಾಸ್ತವ್ಯ ಹೊಂದಿದ್ದ ಮಹಿಳೆಯೊಬ್ಬರು ತನ್ನ ಎರಡೂವರೆ ವರ್ಷ ಪ್ರಾಯದ ಮಗುವಿನ ಸಮೇತ ನಾಪತ್ತೆಯಾದ ಘಟನೆ ಪುತ್ತೂರಿನ ಗ್ರಾಮವೊಂದರಲ್ಲಿ ನಡೆದಿದೆ. ಘಟನೆಯ ಕುರಿತು ಪುತ್ತೂರು ನಗರ ಪೊಲೀಸರಿಗೆ ದೂರು ನೀಡಲಾಗದೆ.
ಇಲ್ಲಿನ ಗ್ರಾಮವೊಂದರ ಯುವತಿ ತನ್ನ ಎರಡೂವರೆ ವರ್ಷ ಪ್ರಾಯದ ಪುತ್ರನ ಜತೆ ನಾಪತ್ತೆಯಾಗಿದ್ದಾರೆ. ಅವರ ಪತಿ ವಿದೇಶದಲ್ಲಿದ್ದು, ಈ ಹಿನ್ನಲೆಯಲ್ಲಿ ಕೆಲ ಸಮಯದಿಂದೀಚೆಗೆ ಆಕೆ ತನ್ನ ಮಗುವಿನೊಂದಿಗೆ ತವರಿನಲ್ಲಿ ವಾಸ್ತವ್ಯ ಹೊಂದಿದ್ದರು. ಕಳೆದ ಗುರುವಾರ ಪುತ್ತೂರು ಪೇಟೆಗೆ ಹೋಗಿ ಬರುವುದಾಗಿ ಮನೆಯಲ್ಲಿ ತಿಳಿಸಿ ತನ್ನ ಮಗುವಿನೊಂದಿಗೆ ಪೇಟೆಗೆ ತೆರಳಿದವರು ಹಿಂತಿರುಗಿ ಮನೆಗೆ ಬಂದಿಲ್ಲ.

ಈ ಕುರಿತು ಅವರಿಗಾಗಿ ಹುಡುಕಾಡಿದ ಮನೆಮಂದಿ ಮಹಿಳೆ ಪತ್ತೆಯಾಗದ ಹಿನ್ನಲೆಯಲ್ಲಿ ಇದೀಗ ಪುತ್ತೂರು ನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಮಹಿಳೆ ತಂದೆ ನೀಡಿರುವ ದೂರಿನಂತೆ ಪುತ್ತೂರು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಹಿಳೆಯ ತನ್ನದೇ ಸಮುದಾಯದ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದರೆಂದು ಹೇಳಲಾಗುತ್ತಿದ್ದು, ಇದೀಗ ಆಕೆ ಮಗುವಿನೊಂದಿಗೆ ಆತನ ಜೊತೆಗೆ ಪರಾರಿಯಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ಮಹಿಳೆ ವಿವಾಹಕ್ಕೂ ಮುನ್ನವೇ ಆತನನ್ನು ಪ್ರೀತಿಸುತ್ತಿದ್ದರು ಎಂದೂ ಹೇಳಲಾಗುತ್ತಿದ್ದು, ಆಕೆ ಆತನ ಜತೆಗೆ ತೆರಳಿರಬಹುದೆಂದು ಅಭಿಪ್ರಾಯ ವ್ಯಕ್ತವಾಗುತ್ತಿದೆ.












Click it and Unblock the Notifications