ಏ.9ರಂದು ಮಂಗಳೂರಿನಲ್ಲಿ ಮೋದಿ ತ್ರೀಡಿ ಪ್ರಚಾರದ ಮೋಡಿ
ಮಂಗಳೂರು, ಏ. 8 : ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮಂಗಳೂರಿನಲ್ಲಿ ಬುಧವಾರ ಪ್ರಚಾರ ಭಾಷಣ ಮಾಡಲಿದ್ದಾರೆ. ಆದರೆ, ಅವರು ಮಂಗಳೂರಿಗೆ ಆಗಮಿಸುವುದಿಲ್ಲ ಅತ್ಯಾಧುನಿಕ ತ್ರೀ ಡಿ' ತಂತ್ರಜ್ಞಾನದ ಮೂಲಕ ಮೋದಿ ಚುನಾವಣಾ ಪ್ರಚಾರ ಮಾಡಲಿದ್ದಾರೆ.
ಬುಧವಾರ ಸಂಜೆ ಸಂಜೆ 6.30ಕ್ಕೆ ಮಂಗಳೂರಿನ ನೆಹರೂ ಮೈದಾನದಲ್ಲಿ ನರೇಂದ್ರ ಮೋದಿ ಅವರ ತ್ರೀ ಡಿ' ಪ್ರಚಾರ ಸಭೆ ಆಯೋಜಿಸಲಾಗಿದೆ. ಇದಕ್ಕಾಗಿ ಮೈದಾನದಲ್ಲಿ ಈಗಾಗಲೇ ತ್ರೀಡಿ ಹೋಲೋಗ್ರಾಫಿಕ್ ಪ್ರೊಜೆಕ್ಷನ್ ತಂತ್ರಜ್ಞಾನದ ಬೃಹತ್ ಪರದೆ ಸಿದ್ಧಗೊಳಿಸಲಾಗುತ್ತದೆ. ಸುಮಾರು 45ನಿಮಿಷದಿಂದ ಒಂದು ಗಂಟೆ ವರೆಗೆ ಈ ಭಾಷಣವನ್ನು ವೀಕ್ಷಿಸಬಹುದಾಗಿದೆ.

ವೇದಿಕೆಯಲ್ಲಿ 40*40*35 ಅಡಿ ಪ್ರೊಜೆಕ್ಷನ್ ಕ್ಯೂಬ್ಸ್ಗಳನ್ನು ಅಳವಡಿಸಲಾಗುತ್ತದೆ. ವೇದಿಕೆಯ ಮೇಲೆ ಯಾವುದೇ ಬೆಳಕು ಇಲ್ಲದಿರುವುದಿಂದ ಬಹಳ ದೂರದವರೆಗೆ ಭಾಷಣ ಸ್ಪಷ್ಟವಾಗಿ ಕಾಣಿಸುತ್ತಿದೆ. ಬುಧವಾರ ಮಂಗಳೂರು ಸೇರಿದಂತೆ ಸುಮಾರು 100 ವಿವಿಧ ಸ್ಥಳಗಳಲ್ಲಿ ಮೋದಿ ತ್ರೀಡಿ ಪ್ರಚಾರ ನಡೆಯಲಿದೆ. [ಮೈಸೂರಿನಲ್ಲಿ ಮೋದಿ ಸಿಂಹ ಘರ್ಜನೆ]
2012ರ ಗುಜರಾತ್ ವಿಧಾನ ಸಭಾ ಚುನಾವಣೆಯ ಸಂದರ್ಭದಲ್ಲಿಯೂ ಮೋದಿ 52 ಪ್ರದೇಶಗಳಲ್ಲಿ ತ್ರೀಡಿ ತಂತ್ರಜ್ಞಾನದ ಮೂಲಕ ಭಾಷಣ ಮಾಡಿದ್ದರು. ಸದ್ಯ ಲೋಕಸಭೆ ಚುನಾವಣೆಗೂ ಈ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಪ್ರಚಾರ ನಡೆಸಲು ಉದ್ದೇಶಿಸಲಾಗಿದೆ. ಏ.11ರಂದು ಮೋದಿ ಪುನಃ ತ್ರೀಡಿ ತಂತ್ರಜ್ಞಾನದ ಮೂಲಕ ಕರ್ನಾಟಕದಲ್ಲಿ ಪ್ರಚಾರ ನಡೆಸಲಿದ್ದಾರೆ.


Click it and Unblock the Notifications
