ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಿನಲ್ಲಿ ಮೋದಿ ವಿರುದ್ಧ ಆನಂದ್ ಶರ್ಮಾ ವಾಗ್ದಾಳಿ

|
Google Oneindia Kannada News

ಮಂಗಳೂರು ಮೇ 04: ಕಾಂಗ್ರೆಸ್ ಪಕ್ಷದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಉನ್ನತ ಸ್ಥಾನವನ್ನು ಪಕ್ಷದಲ್ಲಿ ನೀಡಲಾಗಿದೆ. ಲೋಕಸಭೆಯಲ್ಲಿ ವಿಪಕ್ಷ ಸ್ಥಾನವನ್ನು ನೀಡಲಾಗಿದೆ. ಆದರೆ ಮಲ್ಲಿಕಾರ್ಜುನ ಖರ್ಗೆಯ ಸ್ಥಾನಕ್ಕೆ ಸರಿಯಾದ ಮಾನ್ಯತೆ ಕೇಂದ್ರ ಸರಕಾರ ನೀಡಿಲ್ಲ ಎಂದು ಮಾಜಿ ಕೇಂದ್ರ ಸಚಿವ ಆನಂದ್ ಶರ್ಮಾ ಕಿಡಿಕಾರಿದ್ದಾರೆ.

ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ಪ್ರಧಾನಿಯ ಕೆಲಸ ಕಾರ್ಯ ಬಿಟ್ಟು ಕರ್ನಾಟಕ ಸುತ್ತುತ್ತಿದ್ದಾರೆ. ನರೇಂದ್ರ ಮೋದಿ ದೇಶದ ಪ್ರಧಾನ ಮಂತ್ರಿ ಆದರೆ ಕರ್ನಾಟಕದಲ್ಲಿ ಮೋದಿ ಬಿಜೆಪಿಯ ಪ್ರಚಾರ ಮಂತ್ರಿ ಆಗಿದ್ದಾರೆ ಎಂದು ವ್ಯಂಗ್ಯ ವಾಗಿದ್ದಾರೆ.

ರಾಜ್ಯದಲ್ಲಿ ಮೋದಿ ಪರ ಅಲೆ ಎಂಬುದು ಸುಳ್ಳು: ಪ್ರಕಾಶ್ ರೈರಾಜ್ಯದಲ್ಲಿ ಮೋದಿ ಪರ ಅಲೆ ಎಂಬುದು ಸುಳ್ಳು: ಪ್ರಕಾಶ್ ರೈ

ಜನರಿಗೆ ಸುಳ್ಳು ಹೇಳುತ್ತಾ ಮೋದಿಯವರು ಕನಸಿನ ಸಾಮ್ರಾಜ್ಯ ಕಟ್ಟುತ್ತಿದ್ದಾರೆ ಎಂದು ಹೇಳಿದ ಅವರು ಮೋದಿ ಕೇವಲ ಸುಳ್ಳುಗಳನ್ನು ಮಾತ್ರ ಮಾತನಾಡುತ್ತಾರೆ. ರೈತರಿಗೆ, ಯುವಕರಿಗೆ, ಮಹಿಳೆಯರಿಗೆ ಮೋದಿ ಮೋಸ ಮಾಡಿದ್ದಾರೆ ಈ ಕಾರಣ ಮೋದಿ ಕರ್ನಾಟಕ ಜನರ ಕ್ಷಮೆ ಕೇಳಬೇಕು ಎಂದು ಅವರು ಒತ್ತಾಯಿಸಿದರು.

Modi Should apologise to people for his fake promises – Anand Sharma

ಮೋದಿ ಚುನಾವಣಾ ಪ್ರಚಾರ ಮಾಡುವ ಬದಲು ಕರ್ನಾಟಕದ ಜನರಲ್ಲಿ ಕ್ಷಮೆ ಕೇಳಬೇಕಾಗಿದೆ.
ಯುವಕರಿಗೆ ಇನ್ನೂ ಮೋದಿ ಉದ್ಯೋಗ ದೊರಕಿಸಿಕೊಟ್ಟಿಲ್ಲ. ಯುವಕರಿಗೆ ಪಕೋಡಾ, ಪಾನ್ ಬ್ಯುಸಿನೆಸ್ ಮಾಡಿ ಎಂದು ಮೋದಿ ಹೇಳುತ್ತಾರೆ ಎಂದು ಅವರು ವ್ಯಂಗ್ಯವಾಡಿದರು.

ಈ ದೇಶದಲ್ಲಿ ಎರಡು ಕಾನೂನು ಇದೆ ಎಂದು ಮೋದಿ ಭಾವಿಸಿದ್ದಾರೆ. ಬಿಜೆಪಿಯವರಿಗೆ, ವಿರೋಧಿಗಳಿಗೆ ಎರಡು ಕಾನೂನು ಇದೆ ಎಂದು ಮೋದಿ ಭಾವಿಸಿದ್ದಾರೆ. ನಮ್ಮದು ಬಹುಸಂಸ್ಕೃತಿಯುಳ್ಳ ದೇಶ. ಮೋದಿ, ಅಮಿತ್ ಶಾ ದೇಶವನ್ನ ಹಾಳು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ಕಾಂಗ್ರೆಸ್ ಕೇಳಿದ ಪ್ರಶ್ನೆಗಳಿಗೆ ಮೊದಲು ಮೋದಿ ಉತ್ತರಿಸಲಿ . ಮೋದಿ ಮೊದಲು ಮೌನವ್ರತ ತೊರೆಯಿರಿ ಎಂದು ಕರೆ ನೀಡಿದರು.

English summary
Karnataka state assembly elections 2018: Speaking to media person in Mangaluru former union minister Anand Sharma slams Prime Minister Modi. He said Pradhan Mantri of India become Prachar Mantri of BJP in Karnataka. Modi Should apologies to people for his fake promises he added.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X