ಮಂಗಳೂರು ಜೈಲಿನಲ್ಲಿ ಶೀಘ್ರವೇ ಮೊಬೈಲ್ ಜಾಮರ್

ಮಂಗಳೂರು, ಫೆ.13 : ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿ ಮೊಬೈಲ್ ಜಾಮರ್ ಅಳವಡಿಸಲು ಸರ್ಕಾರ ಒಪ್ಪಿಗೆ ನೀಡಿದೆ ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ. ಕಾರಾಗೃಹದಲ್ಲಿ ಪ್ರತಿದಿನ ಹೊಡೆದಾಟ ನಡೆಯುತ್ತದೆ ಎಂಬ ಮಾತು ಸತ್ಯಕ್ಕೆ ದೂರವಾದದ್ದು ಎಂದು ಜಾರ್ಜ್ ತಿಳಿಸಿದ್ದಾರೆ.

ಗುರುವಾರದ ಕಲಾಪದಲ್ಲಿ ವಿಧಾನ ಪರಿಷತ್‌ನಲ್ಲಿ ಸದಸ್ಯ ಐವಾನ್ ಡಿಸೋಜ ಅವರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಮಂಗಳೂರು ಕಾರಾಗೃಹದಲ್ಲಿ ಪ್ರತಿದಿನ ಕೈದಿಗಳ ಹೊಡೆದಾಟ ನಡೆಯುತ್ತಿದೆ ಎಂಬ ಆರೋಪ ಸತ್ಯಕ್ಕೆ ದೂರವಾದುದು. ಅಕ್ರಮ ಮೊಬೈಲ್ ಬಳಕೆ ಹಾಗೂ ಮಾದಕ ದ್ರವ್ಯ ಬಳಕೆ ಕುರಿತು ಎರಡು ಪ್ರಕರಣಗಳು ದಾಖಲಾಗಿವೆ ಎಂದರು. [ಪರಿಷತ್ತಿನಲ್ಲಿ ದೋಸೆ, ಮುದ್ದೆ, ದೊನ್ನೆ ಬಿರಿಯಾನಿ!]

ಮೊಬೈಲ್ ಬಳಕೆಯನ್ನು ತಡೆಯಲು ಕಾರಾಗೃಹದಲ್ಲಿ ಜಾಮರ್ ಅಳವಡಿಸಲು ಸರ್ಕಾರ ಒಪ್ಪಿಗೆ ನೀಡಿದೆ. ಕಾರಾಗೃಹದ ಸಿಬ್ಬಂದಿ ಹೊಡೆದಾಟಗಳನ್ನು ನಿಯಂತ್ರಿಸುತ್ತಿದ್ದಾರೆ. ಸಾಮಾನ್ಯವಾಗಿ ಕೈದಿಗಳಲ್ಲಿ ಹೊಡೆದಾಟಕ್ಕೆ ಹಳೆಯ ವೈಷಮ್ಯ ಮತ್ತು ಕ್ಷುಲ್ಲಕ ವಿಚಾರಕ್ಕೆ ನಡೆಯುತ್ತಿದೆ ಎಂದರು. [ಮಂಗಳೂರು ಜೈಲು ಮೇಲೆ ದಾಳಿ]

jail

ಬನ್ನಂಜೆ ರಾಜಾ ಕರೆತರುವ ಪ್ರಕ್ರಿಯೆ ಆರಂಭ : ಮೊರೆಕ್ಕೋದಲ್ಲಿ ಬಂಧಿಸಲಾದ ಭೂಗತ ಪಾತಕಿ ಬನ್ನಂಜೆ ರಾಜನನ್ನು ಭಾರತಕ್ಕೆ ಕರೆತರುವ ಪ್ರಕ್ರಿಯೆ ಆರಂಭವಾಗಿದ್ದು, ಆತನಿಗೆ ಸಂಬಂಧಿಸಿದ ಪ್ರಕರಣಗಳ ವಿವರಗಳನ್ನು ಮಂಗಳೂರು ಪೊಲೀಸರು ಸರ್ಕಾರಕ್ಕೆ ಗುರುವಾರ ಸಲ್ಲಿಸಿದ್ದಾರೆ.[ಬನ್ನಂಜೆ ರಾಜಾ ಬಂಧನ]

ಬನ್ನಂಜೆ ರಾಜನ ವಿರುದ್ಧದ ಪ್ರಕರಣಗಳ ವಿವರಗಳನ್ನು ಭಾರತ ಸರ್ಕಾರದ ಮೂಲಕ ಮೊರೆಕ್ಕೋಗೆ ಕಳುಹಿಸಬೇಕಾಗಿದೆ. ಮೊದಲು ಬಂಧಿತ ವ್ಯಕ್ತಿ ಬನ್ನಂಜೆ ರಾಜ ಎಂಬುದನ್ನು ಖಚಿತಪಡಿಸಿಕೊಳ್ಳಲು ಆತನ ಫೋಟೋ ಮತ್ತು ವಿವರಗಳನ್ನು ಸಲ್ಲಿಸಲಾಗಿದೆ.

ಬನ್ನಂಜೆ ರಾಜಾ ಭಾರತಕ್ಕೆ ಹಸ್ತಾಂತರವಾದರೆ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲು ಮಂಗಳೂರು ಕಮಿಷನರ್ ವಿಭಾಗ ಸಿದ್ಧತೆ ನಡೆಸುತ್ತಿದೆ. ಗುರುವಾರ ಈ ನಿಟ್ಟಿನಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಸಭೆ ನಡೆಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+