• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಂಗಳೂರಿನಲ್ಲಿ ಅಪಘಾತ; ಅಪಾಯದಿಂದ ಪಾರಾದ ಶಾಸಕ ರಾಮದಾಸ್

|

ಮಂಗಳೂರು, ಆಗಸ್ಟ್ 23: ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತೆ ಬದಿಗೆ ಹೊರಳಿ ಚರಂಡಿಯ ತಡೆಗೋಡೆಗೆ ಡಿಕ್ಕಿ ಹೊಡೆದಿದ್ದು, ಅದೃಷ್ಟವಶಾತ್ ಶಾಸಕ ರಾಮದಾಸ್ ಪಾರಾದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಕೊಲ್ಕತ್ತಾದ 'ಬಿರ್ಯಾನಿ ಬ್ರದರ್ಸ್' ಅಪಘಾತದ ಕತೆಗೆ ರೋಚಕ ಟ್ವಿಸ್ಟ್

ಮೈಸೂರು ಕೃಷ್ಣರಾಜ ಕ್ಷೇತ್ರದ ಶಾಸಕರಾದ ರಾಮದಾಸ್ ಅವರು ಮೈಸೂರಿನಿಂದ ಸುಳ್ಯ ಮಾರ್ಗವಾಗಿ ಮಂಗಳೂರಿಗೆ ಬರುತ್ತಿದ್ದರು. ಈ ಸಂದರ್ಭ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಕಾರು ಡಿಕ್ಕಿ ಹೊಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಜಾಲ್ಸೂರಿನಲ್ಲಿ ಅಪಘಾತ ನಡೆದಿದೆ.

ಅದೃಷ್ಟವಶಾತ್ ಶಾಸಕ ರಾಮದಾಸ್ ಅಪಾಯದಿಂದ ಪಾರಾಗಿದ್ದಾರೆ. ಅವರಿಗೆ ಮತ್ತು ಕಾರು ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸುಳ್ಯ ಆಸ್ಪತ್ರೆಯಲ್ಲಿ ರಾಮದಾಸ್ ಚಿಕಿತ್ಸೆ ಪಡೆದರು.

English summary
Mla Ramdas escape from the danger in accident. The driver of the car lost control and rushed towards the road side in sullia jalsuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X